ಎಸ್ಬಿಐ ಸಾಲಗಾರರಿಗೆ ಶುಭ ಸುದ್ದಿ, ಸೆ.1ರಿಂದ EMI ದರ ಕುಸಿತ
ಬೆಂಗಳೂರು, ಸೆ.1: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಆರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ.
ರೆಪೋ ದರ ಆಧಾರದ ಗೃಹ ಸಾಲದ ಬಡ್ಡಿ ದರ ಶೇ 8.05ಕ್ಕೆ ಭಾನುವಾರ (ಸೆ.01)ದಿಂದ ಇಳಿಕೆಯಾಗಿದ್ದು, ಸಾಲ ಪಡೆದ ಗ್ರಾಹಕರಿಗೆ ಇಎಂಐ ತಗ್ಗಲಿದೆ. ಜುಲೈ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಆಧಾರದ ಮೇಲೆ ಸಾಲದ ಬಡ್ಡಿ ದರ ನಿರ್ಧರಿಸುವ ತೀರ್ಮಾನ ಕೈಗೊಂಡ ಮೊದಲ ಬ್ಯಾಂಕ್ ಎಸ್ ಬಿಐ. ಈಗ ಇದೇ ಹಾದಿಯಲ್ಲಿ ಪಿಎನ್ ಬಿ ಹಾಗೂ ಬ್ಯಾಂಕ್ ಆಫ್ ಬರೋಡಾ ಕೂಡಾ ಸಾಗಲಿವೆ.
ಕಳೆದ ತಿಂಗಳು ಆರ್ ಬಿಐ ರೆಪೋ ದರವನ್ನು 35 ಮೂಲಾಂಶ ತಗ್ಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ, ಈ ವರ್ಷದಲ್ಲಿ 110 bps ಕಡಿತಗೊಂಡಿದ್ದು, ಬ್ಯಾಂಕ್ ಗಳು ನೀಡುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

ರೆಪೋ ದರ ಎಂದರೆ ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರವಾಗಿದೆ. ಆರ್ ಬಿಐನ ರೆಪೋ ದರ 5.4% ನಷ್ಟಿದೆ. ಇದಕ್ಕೆ ಅನುಗುಣವಾಗಿ ಎಸ್ಬಿಐನ repo rate lending rate (RLLR) 225 ಮೂಲಾಂಶಕ್ಕೆ ನಿಗದಿಪಡಿಸಲಾಗಿದೆ.
ಆರ್ ಬಿಐ ತನ್ನ ರೆಪೋದರ ಬದಲಾಯಿಸುತ್ತಿದ್ದಂತೆ ಎಸ್ಬಿಐನ RLLRಕೂಡಾ ಬದಲಾಗುತ್ತದೆ. ಇದರ ಪರಿಣಾಮ ಗೃಹ ಸಾಲ ದರದ ಮೇಲೆ ಬೀಳುತ್ತದೆ.
ಸೆ.1ರ ಎಣಿಕೆಯಂತೆ ಎಸ್ಬಿಐನ RLLR 7.65% ಕುಸಿಯಲಿದೆ (5.4% or 540 bps + 225 bps). 8.05% ಬಡ್ಡಿದರದಂತೆ ಗೃಹ ಸಾಲ ನೀಡುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. 75 ಲಕ್ಷ ರು ಗಿಂತ ಅಧಿಕ ಮೊತ್ತದ ಸಾಲ ಪಡೆದುಕೊಂಡರೆ RLLR + 95 bps/110 bps ನಂತೆ ಲೆಕ್ಕಾಚಾರ ಹಾಕಲಾಗುತ್ತದೆ.
ಉದಾಹರಣೆಗೆ 75 ಲಕ್ಷ ರು ತನಕದ ಸಾಲಕ್ಕೆ 7.65% ಬಡ್ಡಿದರದಂತೆ 10 ವರ್ಷದ ಅವಧಿಗೆ 89,615 ಇಎಂಐ ತಗುಲಲಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಕೂಡಾ ಇಲ್ಲಿ ಲೆಕ್ಕಾಚಾರಕ್ಕೆ ಬರಲಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications