SBI ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಕಡಿತ
ನವದೆಹಲಿ, ಸೆಪ್ಟೆಂಬರ್ 21: ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ.
ಎಸ್‌ಬಿಐ ಆಯ್ದ ಮೆಚುರಿಟಿಗಳ ಮೇಲೆ ಬಡ್ಡಿದರವನ್ನು ಹೆಚ್ಚಿಸಿತು. ಇತ್ತೀಚಿನ ಪರಿಷ್ಕರಣೆಯ ನಂತರ, ಎಸ್‌ಬಿಐ ಎಫ್‌ಡಿಗಳು 7 ದಿನಗಳಿಂದ 45 ದಿನಗಳವರೆಗೆ ಈಗ ಶೇ. 2.9ರಷ್ಟು ಬಡ್ಡಿ ಪಡೆಯುತ್ತವೆ. 46 ದಿನಗಳಿಂದ 179 ದಿನಗಳ ನಡುವಿನ ಅವಧಿಯ ಠೇವಣಿ ಶೇ. 3.9ರಷ್ಟು ಬಡ್ಡಿ ಹೊಂದಿದೆ. 180 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳು ಶೇ. 4.4ರಷ್ಟು ಬಡ್ಡಿ ಪಡೆಯುತ್ತವೆ.
ಇನ್ನು 1 ವರ್ಷ ಮತ್ತು 2 ವರ್ಷಗಳಿಗಿಂತ ಕಡಿಮೆ ಅವಧಿಯ ಮುಕ್ತಾಯದ ಠೇವಣಿಗಳು ಶೇ. 5.1ರ ಬದಲಿಗೆ ಈಗ ಶೇ. 4.9ಕ್ಕೆ ಇಳಿಕೆಯಾಗಿದೆ. 2 ವರ್ಷಗಳಿಗಿಂತ ಮೇಲೆ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳು ಶೇ. 5.1 ಬಡ್ಡಿ ನೀಡುತ್ತದೆ. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳು ಶೇ. 5.3ರಷ್ಟು ಮತ್ತು ಟರ್ಮ್ ಠೇವಣಿಗಳು 5 ವರ್ಷಗಳಲ್ಲಿ ಮತ್ತು 10 ವರ್ಷಗಳವರೆಗೆ ಶೇ. 5.4ರಷ್ಟು ನೀಡುತ್ತದೆ.

ಈ ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10 ರಿಂದ ಜಾರಿಗೆ ಬರುತ್ತವೆ. ಎಸ್‌ಬಿಐ ಹಿರಿಯ ನಾಗರಿಕರಿಗೆ ಹೆಚ್ಚುವರಿ 50 ಬಿಪಿಎಸ್ ಬಡ್ಡಿದರವನ್ನು ನೀಡುತ್ತದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷ ಅವಧಿಯಲ್ಲಿನ ಎಫ್‌ಡಿಗಳಲ್ಲಿ ಶೇ. 3.4 ರಿಂದ ಶೇ. 6.2ರವರೆಗೆ ಪಡೆಯುತ್ತವೆ.
ಸೆಪ್ಟೆಂಬರ್ 10 ರಿಂದ ಜಾರಿಗೆ ಬಂದ ಎಫ್‌ಡಿ ಬಡ್ಡಿದರಗಳು ( 2 ಕೋಟಿಗಿಂತ ಕಡಿಮೆ)
7 ದಿನಗಳಿಂದ 45 ದಿನಗಳವರೆಗೆ - 2.9%
46 ದಿನಗಳಿಂದ 179 ದಿನಗಳವರೆಗೆ - 3.9%
180 ದಿನಗಳಿಂದ 210 ದಿನಗಳವರೆಗೆ - 4.4%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 4.4%
1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ - 4.9%
2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ - 5.1%
3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ - 5.3%
5 ವರ್ಷಗಳು ಮತ್ತು 10 ವರ್ಷಗಳವರೆಗೆ - 5.4%











Click it and Unblock the Notifications