ರಿಲಯನ್ಸ್ ಜಿಯೋದಲ್ಲಿ 10,750 ಕೋಟಿ ಹೂಡಿಕೆ ಮಾಡಲಿರುವ ಸೌದಿ ಅರೇಬಿಯಾದ ಪಿಐಎಫ್
ಒಂದರ ಹಿಂದೆ ಮತ್ತೊಂದು ಕಂಪನಿಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದು, ಈ ಸಾಲಿಗೆ ಸೌದಿ ಅರೇಬಿಯಾದ ವೆಲ್ತ್ ಫಂಡ್ ಆದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್) ಸೇರಿದೆ.
Recommended Video
ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 2.33 ಪರ್ಸೆಂಟ್ ಪಾಲನ್ನು ಹೊಂದಲು 150 ಕೋಟಿ ಅಮೆರಿಕನ್ ಡಾಲರ್ (10,750 ಕೋಟಿ ರುಪಾಯಿಗೂ ಹೆಚ್ಚು) ಹೂಡಿಕೆ ಮಾಡಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಆದರೆ ಕುರಿತು ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.
ಒಂದು ವೇಳೆ ಪಿಐಎಫ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆಯಾದಲ್ಲಿ ಒಟ್ಟಾರೆ 25 ಪರ್ಸೆಂಟ್ ನಷ್ಟು ಈಕ್ವಿಟಿಯನ್ನು ಮಾರಿದಂತಾಗುತ್ತದೆ. ಹಣಕಾಸು ಹೂಡಿಕೆದಾರರಿಗೆ ಇದಕ್ಕಿಂತ ಹೆಚ್ಚಿನ ಷೇರನ್ನು ಕಂಪೆನಿ ನೀಡುವುದಿಲ್ಲ ಎಂದು ಹೇಳಲಾಗಿದ್ದು, ಇನ್ನು ಮುಂದೆ ಯಾರಾದರೂ ಜಿಯೋದಲ್ಲಿ ಹೂಡಿಕೆ ಮಾಡಬೇಕಿದ್ದರೆ ಅವರು ಸ್ಟ್ರಾಟೆಜಿಕ್ ಹೂಡಿಕೆದಾರರು ಮಾತ್ರ ಆಗಿರುತ್ತಾರೆ.

ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 104,326.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.












Click it and Unblock the Notifications