ಜಿಎಸ್‌ಟಿ ದಾಖಲೆಯ ಸಂಗ್ರಹ: ಡಿಸೆಂಬರ್‌ನಲ್ಲಿ 1.15 ಲಕ್ಷ ಕೋಟಿ ರೂಪಾಯಿ
ನವದೆಹಲಿ, ಜನವರಿ 01: ದೇಶದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಕಳೆಗುಂದಿದ್ದ ಕೇಂದ್ರದ ಆದಾಯ ಸಂಗ್ರಹವು ದಿನೇ ದಿನೇ ಏರಿಕೆಯಾಗತೊಡಗಿದೆ. ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ದಾಖಲೆಯ ಏರಿಕೆಗೊಂಡಿದ್ದು, 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಈ ಮೂಲಕ ಕಳೆದ 10 ತಿಂಗಳಲ್ಲಿ ಮೂರನೇ ಬಾರಿಗೆ ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟಿದೆ.
2020 ರ ಡಿಸೆಂಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,15,174 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ 21,365 ಕೋಟಿ ರೂ., ಎಸ್‌ಜಿಎಸ್‌ಟಿ 27,804 ಕೋಟಿ ರೂ., ಐಜಿಎಸ್‌ಟಿ 57,426 ಕೋಟಿ ರೂ. ಮತ್ತು ಸೆಸ್ 8,579 ಕೋಟಿ ರೂ.ನಷ್ಟಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.
ಇನ್ನೊಂದು ವಿಶೇಷ ಏನಂದ್ರೆ ಇದು ಜುಲೈ 2017 ರಲ್ಲಿ ರಾಷ್ಟ್ರವ್ಯಾಪಿ ಜಿಎಸ್‌ಟಿ ಜಾರಿಗೆ ಬಂದ ನಂತರದ ಗರಿಷ್ಠ ಮೊತ್ತವಾಗಿದೆ ಎಂದು ಹಣಕಾಸು ಸಚಿವಾಲಯ ಜನವರಿ 1 ರಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ದಾಖಲೆಯ ಮಾಸಿಕ ಜಿಎಸ್‌ಟಿ ಸಂಗ್ರಹವು 2019 ರ ಏಪ್ರಿಲ್‌ನಲ್ಲಿ 1.14 ಲಕ್ಷ ಕೋಟಿ ರೂ.ಗಳಾಗಿತ್ತು. ಕಳೆದ ನವೆಂಬರ್ ತಿಂಗಳಿನಲ್ಲಿ 1.05 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಗೊಂಡಿತ್ತು.












Click it and Unblock the Notifications