'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್ ಹಾಗೂ ಬಿಪಿ
ನವದೆಹಲಿ, ಜುಲೈ 10: ಇಂಧನಗಳು ಮತ್ತು ಮೊಬಿಲಿಟಿಗಾಗಿ ತಮ್ಮ ಹೊಸ ಭಾರತೀಯ ಜಂಟಿ ಉದ್ಯಮ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ (ಆರ್‌ಬಿಎಂಎಲ್) ಪ್ರಾರಂಭವನ್ನು ಬಿಪಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಇಂದು ಘೋಷಿಸಿವೆ.
Recommended Video
2019ರ ಆರಂಭಿಕ ಒಪ್ಪಂದಗಳನ್ನು ಅನುಸರಿಸಿ, ಬಿಪಿ ಮತ್ತು ಆರ್‌ಐಎಲ್ ತಂಡಗಳು ಈ ವಹಿವಾಟನ್ನು ಪೂರ್ಣಗೊಳಿಸಲು ಕಳೆದ ಕೆಲವು ತಿಂಗಳುಗಳಿಂದ ಸವಾಲಿನ ವಾತಾವರಣದಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಈ ಜಂಟಿ ಉದ್ಯಮದಲ್ಲಿ ಶೇಕಡಾ 49ರಷ್ಟು ಪಾಲಿಗಾಗಿ ಬಿಪಿ 1 ಬಿಲಿಯನ್ ಡಾಲರ್‌ಗಳನ್ನು ಆರ್‌ಐಎಲ್‌ಗೆ ಪಾವತಿಸಿದೆ ಮತ್ತು ಶೇಕಡಾ 51ರಷ್ಟು ಆರ್‌ಐಎಲ್ ವಶದಲ್ಲಿದೆ.

ಇಂಧನಗಳು ಮತ್ತು ಮೊಬಿಲಿಟಿಗಾಗಿ ಹೊಸ ಉದ್ಯಮ ಪ್ರಾರಂಭ
"ಜಿಯೋ-ಬಿಪಿ" ಬ್ರ್ಯಾಂಡ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಜಂಟಿ ಉದ್ಯಮವು ಭಾರತದ ಇಂಧನಗಳು ಮತ್ತು ಮೊಬಿಲಿಟಿ ಮಾರುಕಟ್ಟೆಗಳಲ್ಲಿ ಪ್ರಮುಖ ಸ್ಥಾನ ಪಡೆಯುವ ಗುರಿ ಹೊಂದಿದೆ. ಇದು 21 ರಾಜ್ಯಗಳಲ್ಲಿರುವ ರಿಲಯನ್ಸ್ ಉಪಸ್ಥಿತಿ ಹಾಗೂ ಜಿಯೋ ಡಿಜಿಟಲ್ ವೇದಿಕೆಯ ಮೂಲಕ ಅದರ ಲಕ್ಷಾಂತರ ಗ್ರಾಹಕರ ಪ್ರಯೋಜನವನ್ನು ಪಡೆದುಕೊಳ್ಳಲಿದೆ. ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕೆಂಟ್‌ಗಳು, ರೀಟೇಲ್ ಹಾಗೂ ಅತ್ಯಾಧುನಿಕ ಲೋ ಕಾರ್ಬನ್ ಮೊಬಿಲಿಟಿ ಸಲ್ಯೂಶನ್‌ಗಳಲ್ಲಿ ತನ್ನ ವ್ಯಾಪಕ ಜಾಗತಿಕ ಅನುಭವದ ಅನುಕೂಲವನ್ನು ಬಿಪಿ ಒದಗಿಸಲಿದೆ.

ಮುಂದಿನ 20 ವರ್ಷದಲ್ಲಿ ಭಾರತ ವಿಶ್ವದಲ್ಲೇ ಬೃಹತ್ ಇಂಧನ ಮಾರುಕಟ್ಟೆಯಾಗಲಿದೆ..!
ಶಕ್ತಿ ಮತ್ತು ಮೊಬಿಲಿಟಿಗಾಗಿ ವೇಗವಾಗಿ ಬೆಳೆಯುತ್ತಿರುವ ಭಾರತದ ಬೇಡಿಕೆಗಳನ್ನು ಪೂರೈಸಲು ಈ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಎಂದು ಬಿಪಿ ಮತ್ತು ಆರ್‌ಐಎಲ್ ನಿರೀಕ್ಷಿಸುತ್ತಿವೆ. ಮುಂದಿನ 20 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುವ ಇಂಧನ ಮಾರುಕಟ್ಟೆಯಾಗಲಿದೆಯೆಂದು ನಿರೀಕ್ಷಿಸಲಾಗಿದ್ದು, ಈ ಅವಧಿಯಲ್ಲಿ ದೇಶದ ಪ್ರಯಾಣಿಕ ಕಾರುಗಳ ಸಂಖ್ಯೆ ಸುಮಾರು ಆರು ಪಟ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಆರ್‌ಬಿಎಂಎಲ್ ತನ್ನ ಪ್ರಸ್ತುತ 1,400ಕ್ಕೂ ಹೆಚ್ಚು ರೀಟೇಲ್ ಸೈಟ್‌ಗಳ ಇಂಧನದ ಚಿಲ್ಲರೆ ವ್ಯಾಪಾರ ಜಾಲವನ್ನು ಮುಂದಿನ ಐದು ವರ್ಷಗಳಲ್ಲಿ 5,500ರವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಈ ಕ್ಷಿಪ್ರ ಬೆಳವಣಿಗೆಗೆ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಅಗತ್ಯವಾಗಿದ್ದು, ಆ ಸಂಖ್ಯೆ ಈ ಅವಧಿಯಲ್ಲಿ 20,000ದಿಂದ 80,000ಕ್ಕೆ ಬೆಳೆಯಲಿದೆ. ಈ ಜಂಟಿ ಉದ್ಯಮವು ಮುಂಬರುವ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು 30ರಿಂದ 45 ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನೂ ಇಟ್ಟುಕೊಂಡಿದೆ.

ಹೊಸ ಪಾಲುದಾರಿಕೆ ಕುರಿತು ಮುಖೇಶ್ ಅಂಬಾನಿ ಏನು ಹೇಳಿದ್ದಾರೆ?
ಪಾಲುದಾರಿಕೆ ಕುರಿತು ಪ್ರತಿಕ್ರಿಯೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ರೀಟೇಲ್ ಮತ್ತು ವಾಯುಯಾನ ಇಂಧನಗಳಲ್ಲಿ ಭಾರತದಾದ್ಯಂತ ಉಪಸ್ಥಿತಿಯನ್ನು ಸ್ಥಾಪಿಸಲು ಬಿಪಿ ಜೊತೆಗಿನ ಸದೃಢ ಮತ್ತು ಮೌಲ್ಯಯುತ ಪಾಲುದಾರಿಕೆಯನ್ನು ರಿಲಯನ್ಸ್ ವಿಸ್ತರಿಸುತ್ತಿದೆ. ಮೊಬಿಲಿಟಿ ಮತ್ತು ಲೋ ಕಾರ್ಬನ್ ಸಲ್ಯೂಶನ್‌ಗಳಲ್ಲಿ ನಾಯಕತ್ವ ಸ್ಥಾನ ಪಡೆಯುವ ಗುರಿ ಹೊಂದಿರುವ ಆರ್‌ಬಿಎಂಎಲ್, ಡಿಜಿಟಲ್ ಹಾಗೂ ತಂತ್ರಜ್ಞಾನವನ್ನು ನಮ್ಮ ಶಕ್ತಿಯನ್ನಾಗಿಟ್ಟುಕೊಂಡು ಭಾರತೀಯ ಗ್ರಾಹಕರಿಗೆ ಸ್ವಚ್ಛ ಮತ್ತು ಕೈಗೆಟುಕುವ ಆಯ್ಕೆಗಳನ್ನು ತರಲಿದೆ." ಎಂದು ಹೇಳಿದ್ದಾರೆ.

ಕಡಿಮೆ ಹೊರಸೂಸುವಿಕೆ ಅತ್ಯಾಧುನಿಕ ಇಂಧನಗಳು
ಸಂಸ್ಥೆಗಳ ನಿವ್ವಳ ಶೂನ್ಯ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಈ ಹೊಸ ಜಂಟಿ ಉದ್ಯಮವು ಭಾರತೀಯ ಗ್ರಾಹಕರಿಗೆ ಕಡಿಮೆ ಹೊರಸೂಸುವಿಕೆಯ ಅತ್ಯಾಧುನಿಕ ಇಂಧನಗಳು, ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮತ್ತು ಇತರ ಲೋ ಕಾರ್ಬನ್ ಸಲ್ಯೂಶನ್‌ಗಳನ್ನು ಕಾಲಕ್ರಮೇಣ ಒದಗಿಸಲು ಬಯಸುತ್ತದೆ. ತನ್ನ ಹಾಗೂ ತನ್ನ ವಿಸ್ತೃತ ಇಕೋಸಿಸ್ಟಂನ ಕಾರ್ಯಾಚರಣೆಗಳ ಡಿಕಾರ್ಬನೈಸೇಶನ್‌ಗೂ ಆರ್‌ಬಿಎಂಎಲ್ ಬದ್ಧವಾಗಿದೆ.
ನಿಯಂತ್ರಕರ ಮತ್ತು ಶಾಸನಬದ್ಧವಾದ ಅಗತ್ಯ ಅನುಮೋದನೆಗಳ ಪೈಕಿ ಸಾರಿಗೆ ಇಂಧನಗಳಿಗೆ ಮಾರ್ಕೆಟಿಂಗ್ ದೃಢೀಕರಣವನ್ನು ಆರ್‌ಬಿಎಂಎಲ್ ಪಡೆದುಕೊಂಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಜಂಟಿ ಉದ್ಯಮವು ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನಗಳು ಮತ್ತು ಕ್ಯಾಸ್ಟ್ರಾಲ್ ಲೂಬ್ರಿಕೆಂಟ್‌ಗಳ ಮಾರಾಟವನ್ನು ಪ್ರಾರಂಭಿಸಲಿದ್ದು, ಈ ಮಳಿಗೆಗಳನ್ನು ಇಷ್ಟರಲ್ಲೇ "ಜಿಯೋ-ಬಿಪಿ" ಎಂದು ಮರುನಾಮಕರಣ ಮಾಡಲಾಗುತ್ತದೆ.
-
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಮತ್ತಷ್ಟು ಕುಸಿತ: ಇಲ್ಲಿದೆ ಮಾರ್ಚ್ 14ರ ದರಪಟ್ಟಿ -
LPG ಸಿಲಿಂಡರ್ ಕೊರತೆ: ಗಗನಕ್ಕೇರಿದ ಸೌದೆ ಬೆಲೆ, ಸ್ಟೌವ್ ರಿಪೇರಿ ಅಂಗಡಿಗಳಿಗೆ ಫುಲ್ ಡಿಮ್ಯಾಂಡ್ -
Karan Adani: ತಂದೆ-ತಾಯಿಯಿಂದ ಕಲಿತ ನಾಯಕತ್ವದ ಪಾಠಗಳನ್ನ ಬಿಚ್ಚಿಟ್ಟ ಕರಣ್ ಅದಾನಿ -
Adani Group: ಭಾರತದಾದ್ಯಂತ 300 ಶಾಲೆಗಳು, 30 ಆಸ್ಪತ್ರೆಗಳ ನಿರ್ಮಾಣಕ್ಕೆ ಅದಾನಿ ಗ್ರೂಪ್ ₹60,000 ಕೋಟಿ ಹೂಡಿಕೆ: ಕರಣ್ ಅದಾನಿ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ












Click it and Unblock the Notifications