ರೆಪೋದರ ಬದಲಾವಣೆ ಇಲ್ಲ, ಬಡ್ಡಿದರ ಇಳಿಕೆ ಇನ್ನೂ ಕನಸು

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 08: ಅಪನಗದೀಕರಣ ಜಾರಿಗೊಂಡ ಬಳಿಕ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ಐ) ತನ್ನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪರಿಶೀಲನಾ ಸಭೆಯನ್ನು ಬುಧವಾರ ನಡೆಸಿತು. ರೆಪೋ ದರ, ರಿವರ್ಸ್ ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಬ್ಯಾಂಕುಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಬಗ್ಗೆ ಈಗಲೇ ನಿರೀಕ್ಷೆ ಸಾಧ್ಯವಿಲ್ಲ.

ಕ್ಯಾಶ್ ರಿಸರ್ಚ್ ದರ(ಸಿಆರ್ ಆರ್) ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೋ ದರ 6.25%ರಂತೆ ಉಳಿಸಲಾಗಿದೆ. ರಿವರ್ಸ್ ರೆಪೋ ದರ 5.75% ರಂತೆ ಇದೆ. ಪರಿಣಾಮವಾಗಿ ಇಎಂಐಗಳು ಕಡಿಮೆಯಾಗಲು ಇನ್ನು ಸ್ವಲ್ಪಕಾಲ ಕಾಯಬೇಕಿದೆ.

Repo Rate remains unchanged at 6.25 percent : RBI

ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ಐ) ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಪರಿಶೀಲನಾ ಸಭೆಯಲ್ಲೆ ಉರ್ಜಿತ್ ಪಟೇಲ್ ಅವರು ರೆಪೋ ದರ ಇಳಿಕೆ ಮಾಡಿ ಷೇರುಪೇಟೆಯಲ್ಲಿ ಉತ್ಸಾಹ ತಂದಿದ್ದರು.

ಆದರೆ, ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ನಗದು ಮೀಸಲು ಅನುಪಾತ (ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡಿಲ್ಲ. ಅದರೆ, ಈಗ ಸಿಆರ್ ಅರ್ ದರ 50 ಮೂಲಾಂಶ ದರದಂತೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯೂ ಇದೆ.

ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ, ಕ್ರೆಡಿಟ್ ಆಫ್ ಟೇಕ್ ಪ್ರಬಲವಾಗಿಲ್ಲದ ಕಾರಣ ಬ್ಯಾಂಕುಗಳು ಅನಿವಾರ್ಯವಾಗಿ ಬಡ್ಡಿ ದರ ಇಳಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ತೊಡಗಿವೆ.

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Repo Rate remains unchanged at 6.25 percent, Reverse Repo Rate also remains unchanged at 5.75 percent
Please Wait while comments are loading...