ಜಿಯೋ 19ಕ್ಕೆ ಪೈಪೋಟಿ ನೀಡಲು ವೋಡಾಫೋನ್ 21 ಯೋಜನೆ
ಬೆಂಗಳೂರು, ಮಾರ್ಚ್ 15:ಟೆಲಿಕಾಂ ಸಂಸ್ಥೆಗಳ ಪ್ರೀಪೇಯ್ಡ್ ದರ ಸಮರ ಪ್ರತಿದಿನ ಹೊಸ ಹೊಸ ಯೋಜನೆಗಳಿಗೆ ನಾಂದಿ ಹಾಡುತ್ತಿದೆ. ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ಸಂಸ್ಥೆಗಳ ನಡುವೆ ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆಗಳ ಪೈಪೋಟಿ ನಡೆದಿದೆ.
ಈಗ ರಿಲಯನ್ಸ್ ಜಿಯೋ 19 ರು ಕಡಿಮೆ ಬೆಲೆಯ ರೀಚಾರ್ಜ್ ನಿಂದ 9,999 ರು ತನಕ ರೀಚಾರ್ಜ್ ತನಕ ರೇಂಜ್ ಹೊಂದಿದೆ. ವಿವಿಧ ಶ್ರೇಣಿಯಲ್ಲಿ ರೀಚಾರ್ಜ್ ಹೊಂದಿದೆ. 19 ರು, 49ರು, 52 ರು, 98 ರು, 99 ರು ರೀಚಾರ್ಜ್ ಯೋಜನೆಗಳಿವೆ. ಈಗ ಜಿಯೋದ 19 ರು ಪ್ಯಾಕೇಜ್ ಗೆ ಸವಾಲು ನೀಡಲು ವೋಡಾಫೋನ್ 21 ರು ಗಳ ಯೋಜನೆ ಪ್ರಕಟಿಸಿದೆ.

ವೊಡಾಫೋನ್ 21 ರು ಗಳ ಪ್ರೀಪೇಯ್ಡ್ ಯೋಜನೆ : ಈ ಯೋಜನೆಯಡಿ ಅನಿಯಮಿತವಾಗಿ 3 ಜಿ/ 4 ಜಿ ಇಂಟರ್ ನೆಟ್ ಪಡೆಯಬಹುದು. ಯೋಜನೆಯ ಅವಧಿ 1 ದಿನ ಮಾತ್ರ. ಹೆಚ್ಚುವರಿ ಟಾಕ್ ಟೈಮ್ ಇರುವುದಿಲ್ಲ.
ರಿಲಯನ್ಸ್ 19ರು ರೀ ಚಾರ್ಜ್ ಯೋಜನೆ: 19 ರು ರೀ ಚಾರ್ಜ್ ನಲ್ಲೂ ಡೇಟಾ ಪ್ಯಾಕ್ ನೀಡಲಾಗುತ್ತೆ. 0.15ಜಿಬಿಯಷ್ಟು 4ಜಿ ಹೈ ಸ್ಪೀಡ್ ಡೇಟಾ ಪ್ರತಿದಿನಕ್ಕೆ ಸಿಗಲಿದೆ. ನಂತರ ಇಂಟರ್ನೆಟ್ ವೇಗ 64ಕೆಬಿಪಿಎಸ್ ಗೆ ಇಳಿಯಲಿದೆ. ಉಚಿತವಾಗಿ ಅನಿಯಮಿತ ಲೋಕಲ್, ಎಸ್ಟಿಡಿ ಹಾಗೂ ರೋಮಿಂಗ್ ವಾಯ್ಸ್ ಕಾಲ್ ಕೂಡಾ ಲಭ್ಯವಿದೆ. 20 ಉಚಿತ ಎಸ್ಎಂಎಸ್ ಜತೆಗೆ ಜಿಯೋ ಆಪ್ ಗಳು ಲಭ್ಯವಿದೆ. ವ್ಯಾಲಿಡಿಟಿ 1 ದಿನ ಮಾತ್ರ.
ಏರ್ ಟೆಲ್ 29 ರು ಗಳ ಯೋಜನೆ: ಡೇಟಾ ಬೂಸ್ಟ್ ಪ್ಯಾಕ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, 29 ರು ಗಳ ಡೇಟಾ ಬೂಸ್ಟ್ ಪ್ಯಾಕ್ ನಲ್ಲಿ 150 ಎಂಬಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳ ಅವಧಿಯಾಗಿದೆ.












Click it and Unblock the Notifications