ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ: 11 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿ

|
Google Oneindia Kannada News

ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ 11 ಲಕ್ಷ ಕೋಟಿ ರುಪಾಯಿಗಳ ಮಾರುಕಟ್ಟೆ ಹೊಂದಿರುವ ದೇಶದ ಮೊದಲ ಕಂಪನಿಯಾಗಿ ಹೊರಹೊಮ್ಮಿದೆ. ಶುಕ್ರವಾರದ ಷೇರು ವಹಿವಾಟು ವ್ಯವಹಾರದಲ್ಲಿ ರಿಲಯನ್ಸ್ ಈ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ರಿಲಯನ್ಸ್ ದೇಶದಲ್ಲಿ 10 ಲಕ್ಷ ಕೋಟಿ ಮಾರುಕಟ್ಟೆ ಕ್ಯಾಪ್ ಹೊಂದಿರುವ ಕಂಪನಿಯಾಗಿತ್ತು.

Recommended Video

ಭಾರತೀಯ ಯೋಧರ ಸಾವಿಗೆ ಕಂಬನಿ ಮಿಡಿದ ಅಮೆರಿಕ | Donald Trump | Narendra Modi | Oneindia Kannada

ಶುಕ್ರವಾರ ಷೇರುಪೇಟೆಯಲ್ಲಿ ಭಾರೀ ವಹಿವಾಟು ಕಂಡ ರಿಲಯನ್ಸ್‌ ಷೇರು ಗಮನಾರ್ಹ ಏರಿಕೆ ದಾಖಲಿಸಿತು. ಸೆನ್ಸೆಕ್ಸ್‌ನಲ್ಲಿ ಕಂಪನಿಯ ಷೇರುಗಳು 6.23 ಪರ್ಸೆಂಟ್‌ರಷ್ಟು ಅಂದರೆ 103.25 ರು.ಗಳಿಂದ 1759.50 ರು.ಗೆ ವಹಿವಾಟು ನಡೆಸಿದೆ. ನಿಫ್ಟಿಯಲ್ಲಿ ಇಂದು ಸುಮಾರು 6.25 ಪರ್ಸೆಂಟ್‌ರಷ್ಟು, ಅಂದರೆ 103.50 ರು.ಗಳ ಹೆಚ್ಚಳದೊಂದಿಗೆ 1759.40 ರು.ಗೆ ವಹಿವಾಟು ಮುಗಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

ರಿಲಯನ್ಸ್ ಷೇರು ಮೌಲ್ಯ ಹೆಚ್ಚಾಗಲು ಕಾರಣ ಏನು?

ರಿಲಯನ್ಸ್ ಷೇರು ಮೌಲ್ಯ ಹೆಚ್ಚಾಗಲು ಕಾರಣ ಏನು?

ಇಂದು ಬೆಳಗ್ಗೆ ಕಂಪನಿಯು ನಿವ್ವಳ ಸಾಲ ಮುಕ್ತ ಕಂಪನಿಯಾಗಿ ಮಾರ್ಪಟ್ಟಿದೆ ಎಂದು ರಿಲಯನ್ಸ್ ಪರವಾಗಿ ತಿಳಿಸಲಾಯಿತು. ಇದರ ನಂತರ, ರಿಲಯನ್ಸ್ ಷೇರುಗಳು ಏರಿದ್ದು , ಬೆಳಿಗ್ಗೆ 11:25 ಕ್ಕೆ 11 ಲಕ್ಷ ಕೋಟಿ ಮಾರುಕಟ್ಟೆಯನ್ನು ಹೊಂದಿರುವ ಕಂಪನಿಯಾಯಿತು.

ರಿಲಯನ್ಸ್ ದಾಖಲೆಯ ಏರಿಕೆ

ರಿಲಯನ್ಸ್ ದಾಖಲೆಯ ಏರಿಕೆ

ಮಾರ್ಚ್ 23 ರಂದು ರಿಲಯನ್ಸ್ ಷೇರು 52 ವಾರಗಳ ಕನಿಷ್ಠ 867.82 ರೂ.ಗೆ ತಲುಪಿದೆ. ಆದರೆ ಮೂರು ತಿಂಗಳಿನಲ್ಲಿ ರಿಲಯನ್ಸ್ 95 ಪರ್ಸೆಂಟ್‌ಗೂ ಅಧಿಕ ಏರಿಕೆ ದಾಖಿಸಿದ್ದು, ಬಿಎಸ್‌ಇ 1759.50 ಹಾಗೂ ಎನ್‌ಎಸ್ಇ 1759.40 ರುಪಾಯಿಗೆ ತಲುಪಿದೆ.

ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್

ಸಾಲ ಮುಕ್ತ ಕಂಪನಿ ರಿಲಯನ್ಸ್

ಸಾಲ ಮುಕ್ತ ಕಂಪನಿ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಕೇವಲ 58 ದಿನಗಳಲ್ಲಿ 1,68,818 ಕೋಟಿ ರೂ. ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ 10 ದೊಡ್ಡ ಕಂಪನಿಗಳೊಂದಿಗೆ 11 ಒಪ್ಪಂದಗಳ ಮೂಲಕ ಇದು 1,15,693.95 ಕೋಟಿ ರುಪಾಯಿ ಆಕರ್ಷಿಸಿದೆ. ಇತ್ತೀಚೆಗೆ ಆರ್‌ಐಎಲ್‌ನ 53,124.20 ಕೋಟಿ ರೂ.ಗಳ ಹಕ್ಕುಗಳ ವಿತರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ರೀತಿಯಾಗಿ, ಮುಖೇಶ್ ಅಂಬಾನಿಯ ಆರ್‌ಐಎಲ್ ಒಟ್ಟು 58 ದಿನಗಳಲ್ಲಿ 1,68,818 ಕೋಟಿ ರೂ.ಗಳ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಏಷ್ಯಾದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ

ಏಷ್ಯಾದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ

ಹೌದು, ವಿಶ್ವಕ್ಕೆ ಕೊರೊನಾವೈರಸ್ ಹಾವಳಿಯಾದರೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಾತ್ರ ಯಶಸ್ಸಿನ ಮೆಟ್ಟಿಲನ್ನು ಏರುತ್ತಲೇ ಸಾಗಿದ್ದಾರೆ. ಕಳೆದ ಕೆಲ ವಾರಗಳ ಹಿಂದಷ್ಟೇ ಚೀನಾದ ನಂಬರ್ 1 ಶ್ರೀಮಂತ ಜಾಕ್‌ ಮಾ ಅವರಿಗಿಂತ 3.2 ಬಿಲಿಯನ್ ಡಾಲರ್‌ಗೂ ಅಧಿಕ ಆದಾಯಗಳಿಸಿದ್ದಾರೆ. ಈ ಮೂಲಕ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

English summary
Mukesh ambani led Reliance industries market cap RS 11 Lakh Crore become first indian company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X