ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ದುರ್ಬಳಕೆ ತಡೆಯಲು ಆರ್‌ಬಿಐ ಮಹತ್ವದ ನಿರ್ಧಾರ
ನವದೆಹಲಿ, ಜನವರಿ 16: ದೇಶದಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆಯಾಗುತ್ತಿರುವ ಸ್ವರೂಪದಲ್ಲಿ ಭಾರಿ ಬದಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೊಳಿಸಿದೆ.
ಕಾರ್ಡ್ ವ್ಯವಹಾರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಸುಧಾರಿಸಲು ಆರ್‌ಬಿಐ, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.
ಕಾರ್ಡ್‌ಗಳ ವಿತರಣೆ ಮತ್ತು ಮರುವಿತರಣೆ ಸಂದರ್ಭದಲ್ಲಿ ಭಾರತದೊಳಗೆ ಎಟಿಎಂಗಳು ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ (ಪಿಓಎಸ್) ಬಳಕೆದಾರರು ಹಣದ ವಹಿವಾಟು ನಡೆಸಲು ಅವಕಾಶ ನೀಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಹಾಲಿ ಇರುವ ಕಾರ್ಡ್‌ಗಳಲ್ಲಿ ಕಾರ್ಡ್‌ಗಳನ್ನು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಬಳಸಬೇಕೇ ಅಥವಾ ಬಳಸದಂತೆ ತಡೆಯಬೇಕೇ (ಆನ್ ಮತ್ತು ಆಫ್) ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಬಳಕೆದಾರರು ನೀಡಲಾಗಿದೆ. ಕಾರ್ಡ್‌ಗಳನ್ನು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಕೆದಾರರು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ವಹಿವಾಟುಗಳ ಸ್ವರೂಪದ ಬದಲಾವಣೆ
ಕಾರ್ಡ್ ಬಳಕೆದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್ ಕಾರ್ಡ್ ಅಥವಾ ಕಾಂಟ್ಯಾಕ್ಟ್‌ಲೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅವರಿಗೆ ಕಾರ್ಡ್ ವಿತರಕ ಬ್ಯಾಂಕುಗಳು ನೀಡಬೇಕು ಎಂದು ಸೂಚಿಸಿದೆ.
ಆನ್‌ಲೈನ್ ವಹಿವಾಟುಗಳಿಗೆ ಬಳಕೆಯಾಗದೆ ಇರುವ ಹಾಲಿ ಕಾರ್ಡ್‌ಗಳನ್ನು ಭದ್ರತೆಯ ಕಾರಣದಿಂದ ಸ್ಥಗಿತಗೊಳಿಸುವುದು ಕಡ್ಡಾಯ ಎಂದು ನಿರ್ದೇಶಿಸಲಾಗಿದೆ.

ಬಳಸದೆ ಕಾರ್ಡ್‌ಗಳು ಬ್ಲಾಕ್
ಕಾರ್ಡ್ ಬಳಕೆದಾರರು ಇದುವರೆಗೂ ಯಾವುದೇ ಆನ್‌ಲೈನ್ ವಹಿವಾಟು ನಡೆಸದೆಯೇ ಇದ್ದಲ್ಲಿ ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮಾರ್ಚ್ 16ರಿಂದ ಬ್ಲಾಕ್ ಆಗಲಿವೆ. ಒಮ್ಮೆ ಬ್ಲಾಕ್ ಆದರೆ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ನಗದುರಹಿತ ವಹಿವಾಟನ್ನು ನಡೆಸಲು ಆ ಆಯ್ಕೆಯಾಗಿ ಬ್ಯಾಂಕ್‌ಗೆ ಪುನಃ ಮನವಿ ಮಾಡಬೇಕಾಗುತ್ತದೆ. ಹೀಗೆ ಬ್ಲಾಕ್ ಆದ ಕಾರ್ಡ್‌ಗಳಿಂದ ಎಟಿಎಂ ಮೂಲಕ ಹಣ ಪಡೆಯಲು ಅವಕಾಶ ಮುಂದುವರಿಯುತ್ತದೆ.

ಆಯ್ಕೆಯ ಅವಕಾಶ ಗ್ರಾಹಕರಿಗೆ
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ಮಿತಿಗೊಳಿಸುವ ಅವಕಾಶ ಗ್ರಾಹಕರಿಗೆ ನೀಡಬೇಕು. ಈ ಬದಲಾವಣೆಗಳನ್ನು ಮಾಡಿಕೊಳ್ಳಲು ಅವರಿಗೆ ಹಲವು ಆಯ್ಕೆಗಳನ್ನು ನೀಡಬೇಕು. ಈ ಸೌಲಭ್ಯವನ್ನು ದಿನದ 24 ಗಂಟೆಯೂ ನೀಡಬೇಕು.

ಗ್ರಾಹಕರಿಗೆ ಮಾಹಿತಿ ನೀಡಬೇಕು
ಮೊಬೈಲ್ ಅಪ್ಲಿಕೇಷನ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಮುಂತಾದವುಗಳ ಮೂಲಕ 24*7ರ ಅವಧಿಯಲ್ಲಿ ಈ ಆಯ್ಕೆಗಳ ಬದಲಾವಣೆಗೆ ಅವಕಾಶ ನೀಡಬೇಕು. ಹಾಗೆಯೇ ಇದಕ್ಕೆ ಬ್ಯಾಂಕ್ ಶಾಖೆ ಮತ್ತು ಕಚೇರಿಗಳಲ್ಲಿಯೂ ವ್ಯವಸ್ಥೆ ಕಲ್ಪಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಕಾರ್ಡ್‌ನ ಯಾವುದೇ ಸ್ಥಿತಿಯಲ್ಲಿ ಬದಲಾವಣೆಗಳಾದರೆ ಕಾರ್ಡ್ ಬಳಕೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ಅದರ ಮಾಹಿತಿ, ಅಲರ್ಟ್, ಸ್ಥಿತಿಗಳ ವಿವರಗಳನ್ನು ಬ್ಯಾಂಕ್ ನೀಡಬೇಕು.

ಮಾರ್ಚ್ 16ರಿಂದ ಜಾರಿ
ಮಾರ್ಚ್ 16ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್ ಕಾರ್ಡ್ ಮತ್ತು 5 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯವಾಗಿವೆ. ಆದರೆ ಮೊದಲೇ ಪಾವತಿ ಮಾಡಲಾಗಿರುವ ಉಡುಗೊರೆ ಕಾರ್ಡ್‌ಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಬಳಕೆಯಾಗುವ ಕಾರ್ಡ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದಿರುವ ಆರ್‌ಬಿಐ, ಹೊಸ ನಿಯಮಗಳನ್ನು ಗ್ರಾಹಕರಿಗೆ ತಿಳಿಸಲು ಕಾರ್ಡ್ ವಿತರಕಾ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications