ರೆಪೋ ದರದಲ್ಲಿ ಶೇ. 0.25 ಏರಿಕೆ ಮಾಡಿದ ರಿಸರ್ವ್ ಬ್ಯಾಂಕ್

ಬೆಂಗಳೂರು, ಜೂನ್ 6: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ 25 ಅಂಕ ಏರಿಕೆ ಮಾಡಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲದ ಬಡ್ಡಿ ದರ (ರೆಪೋ) ಶೇ 6.25ಕ್ಕೆ ಏರಿಕೆಯಾಗಿದೆ.

ಮತ್ತು ಕಮರ್ಷಿಯಲ್ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್‌ ರೆಪೋ) ಶೇ. 6.50ಗೆ ಏರಿಕೆ ಮಾಡಿದೆ. ರೆಪೊ ದರ ಏರಿಕೆ ಆಗಿರುವುದರಿಂದ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆಯಾಗಲಿದೆ.

ಈ ಹಿಂದೆ ಡಿಸೆಂಬರ್ ನಿಂದ ರೆಪೋ ದರದಲ್ಲಿ ಆರ್‌ಬಿಐ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಶೇಕಡಾ 0.25 ರಷ್ಟು ರೆಪೋದರವನ್ನು ಏರಿಕೆ ಮಾಡಲಾಗಿದೆ.

RBI hikes Repo Rate by 25 bps to 6.25%. Reverse Repo rate at 6.50%

ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾವು ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಹಣದುಬ್ಬರ ದರ 2018-19ರ ಮೊದಲಾರ್ಧದಲ್ಲಿ ಶೇಕಡಾ 4.8 ರಿಂದ 4.9 ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ. ದ್ವಿತೀಯಾರ್ಧದಲ್ಲಿ ಶೇಕಡಾ 4.7 ರಷ್ಟು ಹಣದುಬ್ಬರ ದರ ಇರಲಿದೆ ಎಂದು ಬ್ಯಾಂಕ್ ಹೇಳಿದೆ.

ಜಿಡಿಪಿಯನ್ನೂ ಆರ್.ಬಿ.ಐ ಅಂದಾಜಿಸಿದ್ದು 2018-19ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇಕಡಾ 7.5 - 7.6 ಮತ್ತು ದ್ವಿತೀಯಾರ್ಧದಲ್ಲಿ ಶೇಕಡಾ 7.3 ರಿಂದ 7.4 ಇರಲಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+