ರತನ್ ಟಾಟಾ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂತು 9,000 ಕೋಟಿ!
ನವದೆಹಲಿ, ಡಿಸೆಂಬರ್ 28: ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ 9,000 ಕೋಟಿ ಹಣ ಸಿಕ್ಕಿದೆ. ಅದು ಹೇಗೆ ಇಲ್ಲಿದೆ ವಿವರ.
ಟಾಟಾ ಸನ್ಸ್ ಅಧ್ಯಕ್ಷ ಎಮೆರಿಟಸ್ ರತನ್ ಟಾಟಾ ಅವರು ತಮ್ಮ 85ನೇ ಹುಟ್ಟುಹಬ್ಬಕ್ಕೂ ಮೊದಲು ಒಂದು ಅಶ್ಚರ್ಯಕರ ಉಡುಗೊರೆಯನ್ನು ಪಡೆದುಕೊಂಡರು. ಅದೇನೆಂದರೆ ದಿನದ ವಹಿವಾಟಿನಲ್ಲಿ ಟಾಟ್ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಭಾರೀ ಏರಿಕೆ ಕಂಡವು.

ಕಂಪನಿಗಳ ಷೇರುಗಳು ಬುಧವಾರ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಟಾಟಾ ಸ್ಟೀಲ್ 52 ವಾರದ ಗರಿಷ್ಠ 137.15 ರೂ.ಗೆ ಹೋಲಿಸಿದರೆ 138.80 ರೂ.ಗೆ ಕೊನೆಗೊಂಡಿತು. ಇದರೊಂದಿಗೆ ಟಾಟಾ ಮೋಟಾರ್ಸ್ ಷೇರು ಪ್ರತಿಯೊಂದಕ್ಕೆ 52 ವಾರಗಳ ಗರಿಷ್ಠ ಬೆಲೆ ರೂ 740.60 ಕ್ಕೆ ಹೋಲಿಸಿದರೆ 2.91 ಪ್ರತಿಶತ ಏರಿಕೆಯಾಗಿ ರೂ 741.80 ಗೆ ಕೊನೆಗೊಂಡವು. ಈ ವಾರ ಷೇರುಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಟಾಟಾ ಸ್ಟೀಲ್ ಷೇರುಗಳು ಏರಿಕೆ:
ಬುಧವಾರದಂದು ಮಾರುಕಟ್ಟೆ ಪ್ರಾರಂಭವಾದ 70 ನಿಮಿಷಗಳಲ್ಲಿ ಟಾಟಾ ಸ್ಟೀಲ್ ಷೇರುಗಳು ದಾಖಲೆಯ ಏರಿಕೆ ಕಂಡವು. ಬೆಳಗ್ಗೆ 10.25ಕ್ಕೆ 52 ವಾರದ ಗರಿಷ್ಠ 138.80 ರೂ.ಗೆ ಏರಿಕೆಯಾದವು, ಕಂಪನಿಯ ಷೇರುಗಳು 136.15 ರೂ.ಗೆ ಆರಂಭವಾಗಿದ್ದವು, ಮಂಗಳವಾರ 135.20 ರೂ.ಗೆ ಮುಕ್ತಾಯವಾಗಿತ್ತು.
ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯ 1,70,809.67 ಕೋಟಿ ರೂ.ಗೆ ಏರಿಕೆಯಾಯಿತು. ಮಂಗಳವಾರದ ಮುಕ್ತಾಯವಾದಾಗ 1,66,379.45 ಕೋಟಿ ರೂ. ಇತ್ತು. ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಅಟಾ ಸ್ಟೀಲ್‌ನ ಮಾರುಕಟ್ಟೆ ಮೌಲ್ಯ 1,68,656.76 ಕೋಟಿ ರೂ. ಇತ್ತು. ದಿನದಲ್ಲಿ ಅದರ ಮೌಲ್ಯಮಾಪನದಲ್ಲಿ ಸುಮಾರು 2,000 ಕೋಟಿ ರೂ.ಗಳ ಏರಿಕೆಯಾಗಿರುವುದು ಇಲ್ಲಿ ಕಾಣಬಹುದು.

ಟಾಟಾ ಮೋಟಾರ್ಸ್ ಮೈಲುಗೈ:
ಟಾಟಾ ಮೋಟಾರ್ಸ್ ಷೇರುಗಳು 727.35 ಆರಂಭಿಕ ಬೆಲೆಯಿಂದ 52 ವಾರದ ಗರಿಷ್ಠ 741.80 ರೂ.ಗೆ ಏರಿದವು. ಮಂಗಳವಾರದಂದು 719.65 ರೂ.ಗೆ ಮುಕ್ತಾಯವಾದವು. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ಮಂಗಳವಾರದ ಅಂತ್ಯಕ್ಕೆ 2,39,193.93 ಕೋಟಿ ರೂ.ಗೆ ಹೋಲಿಸಿದರೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದಾಗ 2,46,488.80 ಕೋಟಿ ರೂ. ಇತ್ತು.
ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಷೇರುಗಳು 52 ವಾರಗಳ ಗರಿಷ್ಠ ರೂ 738.20 ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯ 2,46,090.06 ಕೋಟಿ ರೂ. ಆಯಿತು. ಕಂಪನಿಯ ಮಾರುಕಟ್ಟೆ ಮೌಲ್ಯ ಏರಿಕೆಯಾಗಿ ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ ರೂ.6,896.13 ಕೋಟಿಗಳಷ್ಟು ಏರಿಕೆ ಕಂಡಿದೆ.












Click it and Unblock the Notifications