ರಾಡಿಕೊ ಖೈತಾನ್ 'ದಿ ಸ್ಪಿರಿಟ್ ಆಫ್ ಕಾಶ್ಮೀರ್' ಹೊಸ ಇತಿಹಾಸ ಸೃಷ್ಟಿ: ಬಿಡುಗಡೆಯಾದ ಮೊದಲ ತಿಂಗಳಲ್ಲೇ ರಾಷ್ಟ್ರೀಯ ಮನ್ನಣೆ
ಭಾರತದ ಸುಪ್ರಸಿದ್ಧ ಮದ್ಯಪಾನ ಸಂಸ್ಥೆ ರಾಡಿಕೊ ಖೈತಾನ್ ಇತ್ತೀಚಿನ ಹೊಸ ಮಾದರಿಯ "ದಿ ಸ್ಪಿರಿಟ್ ಆಫ್ ಕಾಶ್ಮೀರ್" ಬಿಡುಗಡೆಯಾದ ಕೇವಲ ಒಂದು ತಿಂಗಳಲ್ಲಿ ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಪ್ರಾರಂಭಿಕ ಮನ್ನಣೆಯು ಬ್ರ್ಯಾಂಡ್‌ನ ವಿನ್ಯಾಸ, ರುಚಿ, ಗುಣಮಟ್ಟ ಮತ್ತು ಭಾರತೀಯ ಐಷಾರಾಮಿ ಮಾರುಕಟ್ಟೆಯಲ್ಲಿ ಹೊಸ ಎತ್ತರವನ್ನು ಸ್ಥಾಪಿಸುವಲ್ಲಿ ಮೈಲಿಗಲ್ಲು ಸೃಷ್ಟಿ ಮಾಡಿದೆ.
TV9 ನೆಟ್‌ವರ್ಕ್ ಆಯೋಜಿಸಿದ ಐಕಾನಿಕ್ ಪ್ರಶಸ್ತಿಗಳ 7ನೇ ಆವೃತ್ತಿಯಲ್ಲಿ ನೀತಿ ಆಯೋಗ ಮತ್ತು G20 ಶೆರ್ಪಾನ ಮಾಜಿ ಸಿಇಒ ಶ್ರೀ ಅಮಿತಾಬ್ ಕಾಂತ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ನಾವೀನ್ಯತೆ, ಸುಸ್ಥಿರತೆ ಮತ್ತು ಹೊಸ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಐಷಾರಾಮಿ, ಪ್ರವಾಸ ಮತ್ತು ಪ್ರವಾಸೋದ್ಯಮ ಹಾಗೂ ಸಂಬಂಧಿತ ಕೈಗಾರಿಕೆಗಳ ಭವಿಷ್ಯವನ್ನು ರೂಪಿಸುತ್ತಿರುವ ಉದ್ಯಮಗಳು ಹಾಗೂ ಉದ್ಯಮಿಗಳಿಗೆ ICONIC ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ರಾಡಿಕೊ ಖೈತಾನ್ ಅವರ ಹೊಸ ಉತ್ಪನ್ನ ದಿ ಸ್ಪಿರಿಟ್ ಆಫ್ ಕಾಶ್ಮೀರ್, ಆಗಸ್ಟ್ 26, 2025 ರಂದು TV9 ನೆಟ್‌ವರ್ಕ್ ಆಯೋಜಿಸಿದ 7 ನೇ ಐಕಾನಿಕ್ ಪ್ರಶಸ್ತಿಗಳಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಶ್ರೀ ಅಮಿತಾಬ್ ಕಾಂತ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯು ಭಾರತೀಯ ಐಷಾರಾಮಿ ಮಾರುಕಟ್ಟೆಯಲ್ಲಿ ರಾಡಿಕೊ ಖೈತಾನ್ ಗುಣಮಟ್ಟ ಮತ್ತು ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. 1943ರಲ್ಲಿ ಸ್ಥಾಪಿಸಲಾದ ರಾಡಿಕೊ ಖೈತಾನ್ ಪ್ರೀಮಿಯಂ ಬ್ರ್ಯಾಂಡ್‌ಗಳ ಮೇಲೆ ಕೇಂದ್ರೀಕರಿಸಿದೆ.
ಈ ಸಾಧನೆಯ ಕುರಿತು ಮಾತನಾಡಿದ ರಾಡಿಕೊ ಖೈತಾನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮರ್ ಸಿನ್ಹಾ ಅವರು, ದಿ ಸ್ಪಿರಿಟ್ ಆಫ್ ಕಾಶ್ಮೀರ್‌ಗೆ ಮೊದಲ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ. ಅದೂ ಸಹ ಪ್ರಾರಂಭವಾದ ಕೆಲವೇ ವಾರಗಳಲ್ಲಿ. 7ನೇ ಐಕಾನಿಕ್ ಪ್ರಶಸ್ತಿಗಳಲ್ಲಿ ಈ ಪ್ರಶಸ್ತಿಯನ್ನು ಗೆದ್ದಿರುವುದು ನಮಗೆ ಹೆಮ್ಮೆಯ ಮೈಲಿಗಲ್ಲು. ಕಾಶ್ಮೀರಿ ಶೈಲಿ ಹಾಗೂ ಸಂಪ್ರದಾಯದಿಂದ ಪ್ರೇರಿತರಾಗಿ ಮತ್ತು ಅದರ ಅಪರೂಪದ ಸಂಪತ್ತಿನಿಂದ ತುಂಬಿರುವ ದಿ ಸ್ಪಿರಿಟ್ ಆಫ್ ಕಾಶ್ಮೀರ್ ತಯಾರಿಸಲಾಗಿದೆ. ಇದು ಕೇವಲ ಉತ್ಪನ್ನ ಮಾತ್ರವಲ್ಲ.
ಇದು ಕಣಿವೆಯ ಹಿಮದಷ್ಟೇ ತಣ್ಣಗೆ, ಪಂಪೋರ್ ಕೇಸರಿ ಬಣ್ಣದ ರಾಜಮನೆತನದ ಉಷ್ಣತೆ ಮತ್ತು ಮುಂಜಾನೆ ದಾಲ್ ಸರೋವರದ ಕಾವ್ಯಾತ್ಮಕ ಪರಿಕಲ್ಪನೆಯಿಂದ ಮೂಡಿ ಬಂದಿದೆ. ಈ ಮೆಚ್ಚುಗೆಯು ಗಡಿಗಳನ್ನು ಮೀರಿ ಭಾರತದಿಂದ ವಿಶ್ವ ದರ್ಜೆಗೆ ಬ್ರ್ಯಾಂಡ್ ಬೆಳೆಯುವ ಪರಿಕಲ್ಪನೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಟಿವಿ9 ನೆಟ್‌ವರ್ಕ್ ಮತ್ತು ರೆಡ್ ಹ್ಯಾಟ್ ಕಮ್ಯುನಿಕೇಷನ್ಸ್ ಐಕಾನಿಕ್ ಪ್ರಶಸ್ತಿಗಳ ಅಧಿಕೃತ ಪಾಲುದಾರರಾಗಿದ್ದವು. ಟಿವಿ9 ನೆಟ್‌ವರ್ಕ್‌ನ ಮುಖ್ಯ ಗ್ರೌತ್ ಆಫಿಸರ್ ಶ್ರೀ ರಕ್ತಿಮ್ ದಾಸ್ ಅವರು, ರಾಡಿಕೊ ಖೈತಾನ್ ನಿರಂತರವಾಗಿ ನಾಯಕತ್ವ ಹಾಗೂ ನಾವೀನ್ಯತೆಯನ್ನು ಪ್ರದರ್ಶಿಸಿದೆ. ಕಾಶ್ಮೀರದ ಸಂಪ್ರದಾಯವನ್ನು ಆಧರಿಸಿರುವ ಬ್ರ್ಯಾಂಡ್ ಇಷ್ಟು ಬೇಗ ಮನ್ನಣೆಯನ್ನು ಗಳಿಸಿರುವುದು ಶ್ಲಾಘನೀಯ. ಇಂತಹ ಮೈಲಿಗಲ್ಲುಗಳು ಜಾಗತಿಕವಾಗಿ ಹೊಸ ಛಾಪು ಮೂಡಿಸಲಿದೆ. ಅಲ್ಲದೇ ಭಾರತದ ಸಾಮರ್ಥ್ಯವನ್ನು ಸಾಬೀತು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪ್ರದಾನ ಸಮಾವೇಶನದಲ್ಲಿ ಚರ್ಚೆ ಮತ್ತು ವಿಚಾರ ವಿನಿಮಯವೂ ನಡೆದಿದೆ. ಅದರಲ್ಲಿ ವಿಯೆಟ್ನಾಂನ ರಾಯಭಾರಿ ಕಚೇರಿಯ ರಾಯಭಾರಿ ಘನತೆವೆತ್ತ ನ್ಗುಯೆನ್ ಥಾನ್ ಹೈ; ಜಿಂಬಾಬ್ವೆ ಗಣರಾಜ್ಯದ ರಾಯಭಾರಿ ಕಚೇರಿಯ ರಾಯಭಾರಿ ಘನತೆವೆತ್ತ ಸ್ಟೆಲ್ಲಾ ನ್ಕೊಮೊ; ಬಲ್ಗೇರಿಯಾ ಗಣರಾಜ್ಯದ ರಾಯಭಾರಿ ಕಚೇರಿಯ ರಾಯಭಾರಿ ಡಾ. ನಿಕೋಲಾಯ್ ಯಾಂಕೋವ್; ಮಾಲ್ಟಾದ ಹೈಕಮಿಷನ್‌ನ ಹೈಕಮಿಷನರ್ ರೂಬೆನ್ ಗೌಸಿ; ಗ್ರೀಸ್‌ನ ಹೆಲೆನಿಕ್ ಗಣರಾಜ್ಯದ ರಾಯಭಾರಿ ಘನತೆವೆತ್ತ ಅಲಿಕಿ ಕೌಟ್ಸೊಮಿಟೊಪೌಲೌ; ಐಸ್‌ಲ್ಯಾಂಡ್ ರಾಯಭಾರಿ ಕಚೇರಿಯ ರಾಯಭಾರಿ ಘನತೆವೆತ್ತ ಬೆನೆಡಿಕ್ಟ್ ಹೊಸ್ಕುಲ್ಡ್ಸನ್; ಗ್ರೀಕ್ ರಾಯಭಾರಿ ಕಚೇರಿಯ ರಾಯಭಾರಿ ಘನತೆವೆತ್ತ ಬೆನೆಡಿಕ್ಟ್ ಹೊಸ್ಕುಲ್ಡ್ಸನ್; ಗ್ರೀಕ್ ಗಣರಾಜ್ಯದ ರಾಯಭಾರಿ ಘನತೆವೆತ್ತ ಡಾ. ನಿಕೋಲಾಯ್ ಯಾಂಕೋವ್ ಸೇರಿದಂತೆ ಪ್ರತಿಷ್ಠಿತ ಜಾಗತಿಕ ನಾಯಕರು ಮತ್ತು ಗಣ್ಯರ ಉಪಸ್ಥಿತಿರಿದ್ದರು.
ಸೀಶೆಲ್ಸ್ ಗಣರಾಜ್ಯದ ಹೈಕಮಿಷನರ್, ಹೈ ಕಮಿಷನರ್, ಲಲಾಟಿಯಾನಾ ಅಕೌಚೆ; ಕೀನ್ಯಾ ಗಣರಾಜ್ಯದ ಹೈ ಕಮಿಷನರ್, ಹೈ ಕಮಿಷನರ್, ಎಚ್.ಇ. ಅಂಬ್ ಪೀಟರ್ ಮುನ್ಯಿರಿ; ಮತ್ತು ಕೊಮೊರೊ ಗಣರಾಜ್ಯದ ರಾಯಭಾರಿ ಕಚೇರಿಯ ಕಾನ್ಸುಲ್ ಜನರಲ್ (ಗೌರವ) ಎಚ್.ಇ. ಕೆ.ಎಲ್. ಗಂಜು ಇದ್ದರು.
ವಿಚಾರ ವಿನಿಮಯ ಹಾಗೂ ಸಂವಾದದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ವಲಯಗಳಲ್ಲಿ ಶ್ರೇಷ್ಠ ದೃಷ್ಟಿಕೋನ ಮತ್ತು ಸ್ಫೂರ್ತಿಯನ್ನು ಹೊಂದಿರುವ ನಾಯಕರು ಮತ್ತು ಬ್ರ್ಯಾಂಡ್‌ಗಳನ್ನು ಗೌರವಿಸಲಾಯಿತು. ದಿ ಸ್ಪಿರಿಟ್ ಆಫ್ ಕಾಶ್ಮೀರ್‌ಗೆ ತನ್ನ ಮೊದಲ ಮೈಲಿಗಲ್ಲು ಮನ್ನಣೆಯನ್ನು ಪಡೆಯಲು ಸೂಕ್ತ ವೇದಿಕೆ ಇದಾಗಿದೆ.
ರಾಡಿಕೊ ಖೈತಾನ್ ಲಿಮಿಟೆಡ್ ಬೆಳೆದು ಬಂದ ದಾರಿ
ರಾಡಿಕೊ ಖೈತಾನ್ ಲಿಮಿಟೆಡ್ ("ರಾಡಿಕೊ ಖೈತಾನ್" ಅಥವಾ ಕಂಪನಿ) ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ಉದ್ಯಮಗಳಲ್ಲಿ ಒಂದಾಗಿದೆ. ಇದು 1943 ರಲ್ಲಿ ರಾಂಪುರ್ ಡಿಸ್ಟಿಲರಿ ಕಂಪನಿಯಾಗಿ ಮಾರುಕಟ್ಟೆ ಪ್ರವೇಶಿಸಿತ್ತು. ಪ್ರಾರಂಭವಾದಾಗಿನಿಂದಲೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ದಶಕಗಳಲ್ಲಿ, ರಾಡಿಕೊ ಖೈತಾನ್ ಗುಣಮಟ್ಟ, ನಾವೀನ್ಯತೆ ಮತ್ತು ಜಾಗತಿಕ ಶ್ರೇಷ್ಠತೆಯ ಮಾನದಂಡಗಳ ಮೇಲೆ ಕೇಂದ್ರೀಕರಿಸಿದೆ. ವೈವಿಧ್ಯಮಯ ಗ್ರಾಹಕ ಮತ್ತು ಜೀವನಶೈಲಿ ಹೊಂದಿರುವವರ ಮೆಚ್ಚಿನ ಕಂಪನಿಯಾಗಿ ಬೆಳೆದಿದೆ.
ಕಂಪನಿಯು ಸಂಶೋಧನೆ, ವಿನ್ಯಾಸ ಮತ್ತು ಅತ್ಯಾಧುನಿಕ ಉತ್ಪಾದನೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡಿದೆ. ಇದು ಭಾರತದಲ್ಲಿ ಮತ್ತು 100ಕ್ಕೂ ಹೆಚ್ಚು ಅಂತಾರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಂಬಿಕೆ ಮತ್ತು ಮನ್ನಣೆಯನ್ನು ಗಳಿಸಿದೆ. ಪ್ರೀಮಿಯಂ ಬ್ರ್ಯಾಂಡ್‌ಗಳ ಬಂಡವಾಳವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇದರ ಕೊಡುಗೆಗಳು ವಿಭಿನ್ನ, ಸುಸ್ಥಿರತೆ ಮತ್ತು ಹೊಸ ಮಾದರಿಯಲ್ಲಿ ವಿಶ್ವ ದರ್ಜೆಯ ಅನುಭವಗಳನ್ನು ನೀಡುವ ಬದ್ಧತೆಯನ್ನು ಒಳಗೊಂಡಿದೆ.
ರಾಡಿಕೊ ಖೈತಾನ್ ಇಂದು ರಾಂಪುರ್, ಸೀತಾಪುರ ಮತ್ತು ಔರಂಗಾಬಾದ್‌ನಾದ್ಯಂತ ದೊಡ್ಡ ಪ್ರಮಾಣದ ವಹಿವಾಟನ್ನು ನಿರ್ವಹಿಸುತ್ತಿದ್ದು. 321 ಮಿಲಿಯನ್ ಲೀಟರ್‌ಗಳ ಒಡೆತನದ ಸಾಮರ್ಥ್ಯ ಮತ್ತು 44 ಬಾಟ್ಲಿಂಗ್ ಘಟಕಗಳನ್ನು (5 ಒಡೆತನ, 39 ಒಪ್ಪಂದ ಮತ್ತು ರಾಯಲ್ಟಿ ಘಟಕಗಳು) ಹೊಂದಿದೆ. ಚಿಲ್ಲರೆ ವ್ಯಾಪಾರ, ಸಾಂಸ್ಥಿಕ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾದ ಮೈಲಿಗಲ್ಲನ್ನು ಸೃಷ್ಟಿ ಮಾಡಿದೆ. ಕಂಪನಿಯು ಭಾರತವನ್ನು ನಾವೀನ್ಯತೆ - ನೇತೃತ್ವದ ಗ್ರಾಹಕ ಉದ್ಯಮಗಳ ಜಾಗತಿಕ ನಕ್ಷೆಯಲ್ಲಿ ಗುರುತಿಸುವ ಜವಾಬ್ದಾರಿಯನ್ನು ಪ್ರದರ್ಶಿಸುತ್ತದೆ.












Click it and Unblock the Notifications