ಜಿಎಸ್ ಟಿ ಕಡತಕ್ಕೆ ರಾಷ್ಟ್ರಪತಿ ಮುಖರ್ಜಿ ಅಂಕಿತ
ಮಾರ್ಚ್ 29ರಂದು ಲೋಕಸಭೆಯಲ್ಲಿ, ಏಪ್ರಿಲ್ 6ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಸೂದೆಗೆ ಇದೀಗ ರಾಷ್ಟ್ರಪತಿಗಳ ಮೊಹರು.
ನವದೆಹಲಿ, ಏಪ್ರಿಲ್ 13: 'ಒಂದು ದೇಶ, ಒಂದು ತೆರಿಗೆ' ಪರಿಕಲ್ಪನೆಯಡಿಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ 'ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)' ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಕಿತ ಹಾಕಿದ್ದಾರೆ.
ಇದರೊಂದಿಗೆ,ಇದೇ ವಿಧೇಯಕದಡಿ ಜಾರಿಗೊಳ್ಳಲಿರುವ ನಾಲ್ಕು ಶಾಸನಗಳಿಗೂ ರಾಷ್ಟ್ರಪತಿಯವರ ಹಸಿರು ನಿಶಾನೆ ಸಿಕ್ಕಂತಾಗಿದೆ. ಹಾಗಾಗಿ, ಜಿಎಸ್ ಟಿಯು ಇದೇ ವರ್ಷದ ಜುಲೈ 1ರಿಂದ ಜಾರಿಗೆ ಬರುವ ಹಾದಿ ಸುಗಮವಾಗಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಇದೀಗ ಸಿದ್ಧಗೊಂಡಿರುವ ಜಿಎಸ್ ಟಿ ಕರಡು ಪ್ರತಿಯಲ್ಲಿ, ಕೇಂದ್ರ ಜಿಎಸ್ ಟಿ ಕಾಯ್ದೆ 2017, ಸಮಗ್ರ ಜಿಎಸ್ ಟಿ ಕಾಯ್ದೆ 2017, ರಾಜ್ಯಗಳ ಜಿಎಸ್ ಟಿ ಕಾಯ್ದೆ 2017 ಹಾಗೂ ಕೇಂದ್ರಾಡಳಿತ ಪ್ರದೇಶ ಜಿಎಸ್ ಟಿ ಕಾಯ್ದೆ 2017 ಎಂಬ ನಾಲ್ಕು ಶಾಸನಗಳನ್ನು ಒಳಗೊಂಡಿದೆ.[ಜಿಎಸ್ ಟಿ ಜಾರಿಯಾದರೆ ಆಗುವ 9 ಅನುಕೂಲಗಳು]
ಈ ವಿಧೇಯಕವು ಲೋಕಸಭೆಯಲ್ಲಿ ಮಾರ್ಚ್ 29ರಂದು ಅಂಗೀಕಾರವಾಗಿ ಮೇಲ್ಮನೆಯ ಒಪ್ಪಿಗೆಗಾಗಿ ರಾಜ್ಯಸಭೆಗೆ ಕಳುಹಿಸಲಾಗಿತ್ತು. ಏಪ್ರಿಲ್ 6ರಂದು ರಾಜ್ಯಸಭೆಯ ಒಪ್ಪಿಗೆ ದೊರೆತ ನಂತರ, ಆ ಕಡತವನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು.[ಜಿಎಸ್ ಟಿ ಜಾರಿಯಾದರೆ ಮೊಬೈಲ್ ಎಕ್ಸ್ ಚೇಂಜ್ ದುಬಾರಿ!]












Click it and Unblock the Notifications