• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್ಡೌನ್: ಕಾರು, ಬೈಕು ಸ್ಟಾರ್ಟ್ ಆಗ್ತಿಲ್ವ, ಪಿಟ್ ಸ್ಟಾಪ್ ಇದ್ಯಲ್ಲ!

|

ಬೆಂಗಳೂರು, ಏಪ್ರಿಲ್ 29: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ನಮ್ಮ ಜೀವನ ತೀರಾ ವಿಚಿತ್ರ ಹಾಗೂ ಸ್ತಬ್ಧವಾಗಿದೆ. ಮನೆಯಲ್ಲೇ ಸಿಕ್ಕಿಹಾಕಿಕೊಂಡು ಕಾರುಗಳು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಿಂತಿವೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಇದು ವಾಹನಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಾಹನ ಸುಧೀರ್ಘ ಅವಧಿಗೆ ನಿರುಪಯುಕ್ತವಾಗಿ ಉಳಿದಷ್ಟೂ ಸಮಸ್ಯೆ ಹದಗೆಡುತ್ತದೆ. ಬ್ಯಾಟರಿ ಒಣಗಿ ಹೋಗುತ್ತದೆ. ಟೈರುಗಳಲ್ಲಿ ಫ್ಲಾಟ್ ಸ್ಟಾಪ್‍ಗಳು ಕಾಣಿಸಿಕೊಳುತ್ತವೆ. ಲೋಹದ ಭಾಗ ತುಕ್ಕು ಹಿಡಿಯುತ್ತದೆ. ರಬ್ಬರ್ ಭಾಗ ಹದಗೆಡುತ್ತಾ ಕ್ರಮೇಣ ಎಂಜಿನ್ ಫ್ಲೂಯಿಡ್ ಹಾಳಾಗುತ್ತದೆ.

ಪೊಲೀಸ್, ಡಾಕ್ಟ್ರು ಅಗ್ನಿಶಾಮಕ ವಾಹನ ರಿಪೇರಿ, PitStopಗೆ ಕರೆ ಮಾಡಿ

ವಾರಕ್ಕೆ ಕನಿಷ್ಠ 10 ಕಿಲೋಮೀಟರ್ ದೂರದವರೆಗೆ ಕಾರನ್ನು ಚಾಲನೆ ಮಾಡಿದಲ್ಲಿ ಈ ಸಮಸ್ಯೆಯಿಂದ ಮುಕ್ತವಾಗಬಹುದು. ಆದರೆ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿರುವುದರಿಂದ ಸದ್ಯಕ್ಕೆ ಇದು ಸಾಧ್ಯವಿಲ್ಲ. ಈ ತಪ್ಪಿಸಿಕೊಳ್ಳಲಾಗದ ಸ್ವರೂಪದ ಪರಿಸ್ಥಿತಿಯಲ್ಲಿ ಜನರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಅರ್ಧ ದಾರಿಯಲ್ಲಿ ದೋಷಯುಕ್ತ ಬ್ರೇಕ್ ಅಥವಾ ನಿಷ್ಕ್ರಿಯ ಬ್ಯಾಟರಿಯಿಂದ ಎದುರಾಗುವ ಸಮಸ್ಯೆ ನಿವಾರಿಸಬಹುದು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲ

ವಾಹನ ಮಾಲೀಕರ ಈ ದ್ವಂದ್ವವನ್ನು ಬಗೆಹರಿಸುವ ದೃಷ್ಟಿಯಿಂದ ಭಾರತದ ಮೊಟ್ಟಮೊದಲ ಸ್ವತಂತ್ರ ಹಾಗೂ ಮನೆ ಬಾಗಿಲಲ್ಲೇ ಕಾರು ಸರ್ವೀಸಿಂಗ್ ಮತ್ತು ದುರಸ್ತಿ ಸೇವೆಯನ್ನು ಒದಗಿಸುವ ಪಿಟ್‍ಸ್ಟಾಪ್, ಪಿಟ್‍ಸ್ಟಾಪ್ ರಿವೈವ್ ಎಂಬ ವಿಶೇಷ ಯೋಜನೆಗೆ ಇಂದು ಚಾಲನೆ ನೀಡಿದೆ. ಇದು ಕಾಂಟ್ಯಾಕ್ಟ್‍ಲೆಸ್ ಹಾಗೂ ಸಮಗ್ರ ಆರು ಪಾಯಿಂಟ್ ತಪಾಸಣೆಯಾಗಿದ್ದು, ನಿಮ್ಮ ಕಾರಿನ ಪುನಶ್ಚೇತನಕ್ಕೆ ನೆರವಾಗುವ ಮೂಲಕ ನಿಮ್ಮ ಲಾಕ್‍ಡೌನ್ ಬಳಿಕದ ಚಲನೆಗೆ ಅನುಕೂಲ ಮಾಡಿಕೊಡುತ್ತದೆ.

ವಾಹನದ ಆರೋಗ್ಯವೂ ಮುಖ್ಯ

ವಾಹನದ ಆರೋಗ್ಯವೂ ಮುಖ್ಯ

"ವಾಹನಗಳನ್ನು ಸುಧೀರ್ಘ ಅವಧಿಗೆ ಬಳಸದೇ ಇರುವುದು ವಾಹನದ ಆರೋಗ್ಯಕ್ಕೆ ತೀರಾ ಕೆಟ್ಟದು. ಜನರು ತಮ್ಮ ವಾಹನವನ್ನು ರಸ್ತೆಗೆ ಹೊರತೆಗೆಯುವ ಮುನ್ನ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಈ ಮೂಲಕ ಎಂಜಿನ್ ದೋಷ ಮಾರ್ಗಮಧ್ಯದಲ್ಲಿ ಉಂಟಾಗುವ ಅಥವಾ ಬ್ರೇಕ್ ಕ್ಯಾಲಿಪರ್‍ಗಳು ತುಕ್ಕು ಹಿಡಿದು ಉಂಟಾಗುವ ಸಮಸ್ಯೆಯಿಂದ ಪಾರಾಗಬಹುದು. ಪಿಟ್‍ಸ್ಟಾಪ್ ಇದೀಗ ಪಿಟ್‍ಸ್ಟಾಪ್ ರಿವೈವ್ ಎಂಬ ವಿನೂತನ ಯೋಜನೆಯನ್ನು ಶೂನ್ಯ ಕಾಂಟೆಕ್ಟ್ ಸರ್ವೀಸ್ ಮೂಲಕ ಕಾರಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಆರಂಭಿಸಿದೆ. ಇದರಿಂದಾಗಿ ಕಾರಿಗೆ ಯಾವುದೇ ಸಮಸ್ಯೆಯ ಅಪಾರ ಎದುರಾಗುವ ಸಾಧ್ಯತೆ ಇಲ್ಲ" ಎಂದು ಪಿಟ್‍ಸ್ಟಾಪ್ ಸಿಇಓ ಹಾಗೂ ಸಂಸ್ಥಾಪಕ ಮಿಹಿರ್ ಮೋಹನ್ ಹೇಳಿದ್ದಾರೆ.

ಪಿಟ್‍ಸ್ಟಾಪ್‍ನ ಪುನಶ್ಚೇತನ ಪ್ಯಾಕೇಜ್

ಪಿಟ್‍ಸ್ಟಾಪ್‍ನ ಪುನಶ್ಚೇತನ ಪ್ಯಾಕೇಜ್

ಪಿಟ್‍ಸ್ಟಾಪ್‍ನ ಪುನಶ್ಚೇತನ ಪ್ಯಾಕೇಜ್, ಕಾರಿನ ಪ್ರಮುಖ ಕಾರ್ಯನಿರ್ವಹಣೆ ಕ್ಷೇತ್ರಗಳಾದ ಬ್ಯಾಟರಿ, ಟೈರು, ಬ್ರೇಕ್, ಫ್ಲೂಯಿಡ್ ಮತ್ತು ಅಲ್ಪಸ್ವಲ್ಪ ಸೋರಿಕೆಗಳ ತಪಾಸಣೆ ಮತ್ತು ಸರ್ವೀಸಿಂಗ್ ಒಳಗೊಂಡಿದೆ. ಇದರಲ್ಲಿ ನೃರ್ಮಲ್ಯದ ಅಂಶಗಳಾದ ಒಳಾಂಗಣವನ್ನು ಜಂತುಮುಕ್ತಗೊಳಿಸುವ ನೈರ್ಮಲ್ಯ, ಕ್ಯಾಬಿನ್ ಸ್ವಚ್ಛತೆ ಮತು ಮೈಕ್ರೋಬೈಲ್ ನಿರೋಧಕ ಶೀಲ್ಡ್, ಎಸಿ ಘಟಕವನ್ನು ಸೋಂಕುಮುಕ್ತಗೊಳಿಸುವುದು, ಹಾಗೂ ಅಂತಿಮವಾಗಿ ಹೊರಭಾಗದ ಎಕೋ ವಾಶ್ ಕೂಡಾ ಸೇರುತ್ತವೆ.

ಬೆಂಗಳೂರಿನಲ್ಲಿ ರಿವೈವ್ ಸೇವೆ ಲಭ್ಯ

ಬೆಂಗಳೂರಿನಲ್ಲಿ ರಿವೈವ್ ಸೇವೆ ಲಭ್ಯ

ಪುನಶ್ಚೇತನ ಸೇವೆಯು ಬೆಂಗಳೂರಿನಲ್ಲಿ ಇಂದಿನಿಂದ ಲಭ್ಯವಿದ್ದು, ಸರ್ಕಾರದ ನಿರ್ದೇಶನಗಳನ್ನು ಆಧರಿಸಿ ಮುಂದೆ ಇತರ ನಗರಗಳಲ್ಲೂ ವಿಸ್ತರಿಸಲಾಗುವುದು. ಬಳಕೆದಾರರು ತಮ್ಮ ಬುಕ್ಕಿಂಗ್ ಮನವಿಯನ್ನು 6262621234ಕ್ಕೆ ಕರೆ ಮಾಡಿ ಅಥವಾ www.getpitstop.com ಲಾಗ್ ಆನ್ ಮಾಡಿ ಸಲ್ಲಿಸಬಹುದು. ಕಾರು ಸರ್ವೀಸಿಂಗ್ ಪ್ಯಾಕೇಜ್ ರೂ. 1199ರಿಂದ ಆರಂಭವಾಗುತ್ತದೆ. ಕಾರು ಮಾಲೀಕರಿಗೆ ನಿರ್ದಿಷ್ಟವಾದ ಸೋಂಕುರಹಿತಗೊಳಿಸುವಿಕೆ ಮತ್ತು ಒಳಾಂಗಣ ಸ್ವಚ್ಛಗೊಳಿಸುವಿಕೆ ಸೇವೆ ರೂ. 699ರಿಂದಲೂ ಲಭ್ಯ. ಎಲ್ಲ ಸೇವೆಗಳು ಕಾಂಟ್ಯಾಕ್ಟ್ ಲೆಸ್ ಆಗಿದ್ದು, ನಿಮ್ಮ ಮನೆಬಾಗಿಲಲ್ಲೇ ಲಭ್ಯ.

ಸಿಬ್ಬಂದಿ, ಸರ್ವೀಸ್, ವಾಹನ ಎಲ್ಲವೂ ಸ್ಯಾನಿಟೈಸ್

ಸಿಬ್ಬಂದಿ, ಸರ್ವೀಸ್, ವಾಹನ ಎಲ್ಲವೂ ಸ್ಯಾನಿಟೈಸ್

"ಕೋವಿಡ್‍ಮುಕ್ತಗೊಳಿಸುವುದನ್ನು ಖಾತರಿಪಡಿಸುವ ಸಲುವಾಗಿ ಪ್ರತಿ ವಾಹನವನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸರ್ವೀಸ್ ಬಳಿಕ ಬಳಸಿದ ಸಾಧನ ಸಲಕರಣೆಗಳು ಸೇರಿದಂತೆ ಎಲ್ಲವನ್ನು ಸ್ಯಾನಿಟೈಸ್ ಮಾಡಲಾಗುತ್ತದೆ" ಎಂದು ಮಿಹಿರ್ ಹೇಳಿದರು.

ಕೋವಿಡ್-19 ಹರಡುವುದನ್ನು ತಡೆಯುವ ಸಾಧ್ಯತೆಯನ್ನು ತೊಡೆದುಹಾಕಲು ಪಿಟ್‍ಸ್ಟಾಪ್ ಹಲವು ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತದೆ. ಗ್ರಾಹಕರು ತಮ್ಮ ಅನುಕೂಲತೆಗೆ ಅನುಗುಣವಾಗಿ ಭೇಟಿ ನಿಗದಿಪಡಿಸಿಕೊಳ್ಳಬಹುದು. ನಮ್ಮ ಮನೆಬಾಗಿಲ ತಂಡ ಅವರನ್ನು ಭೇಟಿ ಮಾಡುತ್ತದೆ. ವಾಹನದ ಕೀಗಳನ್ನು ಸ್ಯಾನಿಟೈಸ್ಡ್ ಟ್ರೇನಲ್ಲಿ ಇಡಲಾಗುತ್ತದೆ ಹಾಗೂ ತಂಡವು ಮನೆ ಬಾಗಿಲಲ್ಲೇ ಇದನ್ನು ಸುರಕ್ಷಿತವಾಗಿ ಸಂಗ್ರಹಿಸುತ್ತದೆ.

ಗ್ಯಾರೇಜ್ ಸ್ಯಾನಿಟೈಸ್‍ಮಾಡುತ್ತದೆ

ಗ್ಯಾರೇಜ್ ಸ್ಯಾನಿಟೈಸ್‍ಮಾಡುತ್ತದೆ

ಈ ತಂಡ ಕಾರನ್ನು ನಿಮ್ಮದೇ ಸ್ಥಳದಲ್ಲಿ ಸರ್ವೀಸ್ ಮಾಡಿದ ಬಳಿಕ ಸಂಪೂರ್ಣ ಸೋಂಕುರಹಿತಗೊಳಿಸಿ ಪಾಲುದಾರರ ಗ್ಯಾರೇಜ್ ಸ್ಯಾನಿಟೈಸ್‍ಮಾಡುತ್ತದೆ. ಸರ್ವೀಸ್/ ದುರಸ್ತಿ ಮಾಡಿದ ಬಳಿಕ ಕಾರು ಹಾಗೂ ಕೀಗಳನ್ನು ಕೂಡಾ ಸ್ಯಾನಿಟೈಸ್ ಮಾಡಿ ಸ್ಯಾನಿಟೈಸ್ಡ್ ಟ್ರೇನಲ್ಲಿ ಕಾರಿನ ಕೀಲಿಯನ್ನು ಮಾಲೀಕರಿಗೆ ಮರಳಿಸಲಾಗುತ್ತದೆ. ಗ್ರಾಹಕರು ಕಾಂಟ್ಯಾಕ್ಟ್ ಲೆಸ್ ಡಿಜಿಟಲ್ ಪಾವತಿ ವಿಧಾನದ ಮೂಲಕ ಎಲ್ಲ ಸೇವೆಗಳಿಗೆ ಪಾವತಿಸಲು ಅವಕಾಶವಿದ್ದು, ತಮ್ಮ ಮನೆಗಳ ಸುರಕ್ಷತೆಯನ್ನು ಬಿಡಬೇಕಾಗಿಲ್ಲ. ಪಿಟ್‍ಸ್ಟಾಪ್ ಸಿಬ್ಬಂದಿ ಮಾಸ್ಕ್, ಕೈಗವಸು ಮತ್ತು ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಹೊಂದಿ ಸುಸಜ್ಜಿತರಾಗಿರುತ್ಥಾರೆ ಹಾಗೂ ಅವರ ಮೈ ಶಾಖವನ್ನು ಪ್ರತಿ ಸರ್ವೀಸ್‍ಗೆ ಮುನ್ನ ಪರೀಕ್ಷಿಸಲಾಗುತ್ತದೆ. ಸುರಕ್ಷಿತ ಹಾಗೂ ವಿಶ್ವಾಸಾರ್ಹ ಕೀಟ ಮುಕ್ತ ಸರ್ವೀಸ್ ಖಾತರಿಪಡಿಸುವ ಸಲುವಾಗಿ ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

English summary
Due to COVID-19 lockdown, our lives have come pretty much to a standstill. Stuck at home, the cars are stationary for over a month, something that negatively affects the vehicle. These problems become worse the longer a vehicle sits idle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X