ಇವು ದೇಶದ ಅತ್ಯುತ್ತಮ ಹನ್ನೆರಡು ಬ್ಯಾಂಕ್ ಗಳು...
ಮುಂಬೈ, ಜೂನ್ 14: ದೇಶದ ಅತ್ಯುತ್ತಮ ಬ್ಯಾಂಕ್ ಎಂದು ಹನ್ನೆರಡರ ಪಟ್ಟಿಯೊಂದನ್ನು ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆಫ್ ಇಂಡಿಯಾ (ಬಿಸಿಎಸ್ ಬಿಸಿ) ಬಿಡುಗಡೆ ಮಾಡಿದೆ. ಸದ್ಯಕ್ಕೆ ಸರಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳೆಲ್ಲ ಒಟ್ಟು ಸೇರಿ ಐವತ್ತೊಂದು ಬ್ಯಾಂಕ್ ಗಳು ಸೇವೆ ಒದಗಿಸುತ್ತಿವೆ.
ಈ ಪೈಕಿ ಹನ್ನೆರಡು ಬ್ಯಾಂಕ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ ಎಂದು ಹೇಳಲಾಗಿದೆ. ಅಂದಹಾಗೆ ಈ ಸಮೀಕ್ಷೆ ಮಾಡಿರುವ ಸಂಸ್ಥೆ ಸ್ಥಾಪನೆ ಆಗಿರುವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ. ನಿಯಮಗಳ ಪಾಲನೆ, ಅತ್ಯುತ್ತಮ ಸೇವೆಯನ್ನು ಪ್ರೋತ್ಸಾಹಿಸುವುದು ಸೇರಿದ ಹಾಗೆ ಕೆಲ ಮಹತ್ವದ ಕೆಲಸಗಳನ್ನು ಈ ಸಂಸ್ಥೆ ಮಾಡುತ್ತದೆ.

ಈ ಬಾರಿ ಸಂಸ್ಥೆ ಬಿಡುಗಡೆ ಮಾಡಿದ ರೇಟಿಂಗ್ಸ್ ಆಧಾರದಲ್ಲಿ ಹನ್ನೆರಡು ಬ್ಯಾಂಕ್ ಅತ್ಯುತ್ತಮ ಸೇವೆ ನೀಡುತ್ತಿವೆ. ಅದರಲ್ಲಿ ಐಡಿಬಿಐ ಒಂದನ್ನು ಬಿಟ್ಟರೆ ಉಳಿದೆಲ್ಲವೂ ಖಾಸಗಿ ಬ್ಯಾಂಕ್ ಗಳೇ ಇವೆ. ಉತ್ತಮ ಬ್ಯಾಂಕ್ ಗಳ ಪಟ್ಟಿ ಇಂತಿದೆ.
* ಆರ್ ಬಿಎಲ್
* ಆಕ್ಸಿಸ್ ಬ್ಯಾಂಕ್
*ಎಚ್ ಡಿಎಫ್ ಸಿ
*ಡಿಸಿಬಿ
* ಇಂಡಸ್ ಇಂಡ್
* ಕೊಟಕ್ ಮಹೀಂದ್ರಾ
* ಐಸಿಐಸಿಐ
* ಯೆಸ್ ಬ್ಯಾಂಕ್
* ಸ್ಟ್ಯಾಂಡರ್ಡ್ ಚಾರ್ಟರ್ಡ್
* ಎಚ್ಎಸ್ ಬಿಐ
* ಸಿಟಿ ಬ್ಯಾಂಕ್
ಇವುಗಳಲ್ಲೆಲ್ಲ ಆರ್ ಬಿಎಲ್ ಬ್ಯಾಂಕ್ ಶೇ ತೊಂಬತ್ತೈದರಷ್ಟು ಅಂಕ ಪಡೆದಿದೆ.












Click it and Unblock the Notifications