ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟೀವಿ ಅನುಭವ ಪಡೆಯಿರಿ!
ಮುಂಬೈ, ಅಕ್ಟೋಬರ್ 23: ಭಾರತದ ನಂ. 1 ಇಲೆಕ್ಟ್ರಾನಿಕ್ಸ್ ರೀಟೇಲರ್ ಎನಿಸಿರುವ ರಿಲಯನ್ಸ್ ಡಿಜಿಟಲ್, ತನ್ನ ರೀಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಖರೀದಿಸಬಹುದಾಗಿದೆ.
ಪ್ರಭಾದೇವಿಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಒನ್‌ಪ್ಲಸ್ ಟೀವಿ 55 Q1 ಹಾಗೂ ಒನ್‌ಪ್ಲಸ್ ಟೀವಿ 55 Q1 Proಗಳೆರಡನ್ನೂ ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಯಿತು.
ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, ರಿಲಯನ್ಸ್ ಡಿಜಿಟಲ್‌ನ ಇವಿಪಿ ಮತ್ತು ಸಿಎಂಓ ಕೌಶಲ್ ನೆವ್ರೇಕರ್, ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಉಪಸ್ಥಿತರಿದ್ದರು.

ರಿಲಯನ್ಸ್ ಡಿಜಿಟಲ್ ರಾಷ್ಟ್ರವ್ಯಾಪಿಯಾದ ಯಶಸ್ವಿ ಜಾಲವನ್ನು ಹೊಂದಿದೆ ಮತ್ತು 350+ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಸಾಧನಗಳು ಮಾರಾಟವಾಗುತ್ತಿವೆ. ಒನ್‌ಪ್ಲಸ್ ಟಿವಿಗಳ ಲೋಕಾರ್ಪಣೆಯು ನಮ್ಮ ಫಲಪ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಒನ್‌ಪ್ಲಸ್ ಟಿವಿಯನ್ನು ಖರೀದಿಸಲು ಬಯಸುವ ದೇಶದೆಲ್ಲೆಡೆಯ ಗ್ರಾಹಕರಿಗೆ ಇದು ಭೌತಿಕ ಅನುಭವ ಪಡೆದುಕೊಳ್ಳಲು ಅಮೂಲ್ಯವಾದ ಆಫ್‌ಲೈನ್ ವೇದಿಕೆಯನ್ನು ಒದಗಿಸುತ್ತದೆ," ಎಂದು ಹೇಳಿದರು.
ಇತ್ತೀಚೆಗೆ ಪರಿಚಯಿಸಲಾಗಿರುವ ಒನ್‌ಪ್ಲಸ್ ಟೀವಿ ಒನ್‌ಪ್ಲಸ್ ಟೀವಿ 55 Q1 ಹಾಗೂ ಒನ್‌ಪ್ಲಸ್ ಟೀವಿ 55 Q1 Pro ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಎರಡೂ ಮಾದರಿಗಳು 4K QLED ಅನುಭವ ನೀಡಲಿವೆ. ಎರಡೂ ಸ್ಮಾರ್ಟ್ ಟೀವಿಗಳು ಆಂಡ್ರಾಯ್ಡ್ ಟೀವಿಯ ಇತ್ತೀಚಿನ ಆವೃತ್ತಿ ಬಳಸಿ ಕೆಲಸಮಾಡುತ್ತವೆ. ಒನ್‌ಪ್ಲಸ್ ಟೀವಿ 55 Q1 Pro ಮಾದರಿಯಲ್ಲಿ 55-ಇಂಚಿನ QLED ಪರದೆ ಮತ್ತು ಡಾಲ್ಬಿ ವಿಶನ್ ಬೆಂಬಲವಿದ್ದು, 50W ಔಟ್‌ಪುಟ್ ನೀಡುವ ಎಂಟು ಸ್ಪೀಕರುಗಳಿವೆ.
ಎರಡೂ ಮಾದರಿಯ ಸ್ಮಾರ್ಟ್ ಟೀವಿಗಳಲ್ಲಿ ಡಾಲ್ಬಿ ಅಟ್ಮಾಸ್ ಬೆಂಬಲ ಹಾಗೂ ಕಸ್ಟಮ್ ಗ್ಯಾಮಾ ಕಲರ್ ಮ್ಯಾಜಿಕ್ ಪ್ರಾಸೆಸರ್ ಇದೆ. ಧ್ವನಿ ನಿಯಂತ್ರಣದ ಮೂಲಕ ಈ ಟೀವಿಯು ಗ್ರಾಹಕರಿಗೆ ವಿಸ್ತಾರವಾದ ಸ್ಮಾರ್ಟ್ ಟೀವಿ ಅನುಭವವನ್ನು ನೀಡುತ್ತದೆ. ಜೊತೆಗೆ, ಸಂಪರ್ಕಿತ ಸಾಧನಗಳ ಸಮ್ಮಿಲನದ ಮೂಲಕ ಚುರುಕಾದ ಸಂವಹನ ಮತ್ತು ತಡೆರಹಿತ ಸಂಪರ್ಕ ಅನುಭವವನ್ನು ನೀಡುವ ಒನ್‌ಪ್ಲಸ್ ಕನೆಕ್ಟ್ ಆಪ್‌ನ ಬೆಂಬಲವೂ ಒನ್‌ಪ್ಲಸ್ ಟಿವಿಯ ಜೊತೆಗಿದೆ.
ಇದಲ್ಲದೆ, ಒನ್‌ಪ್ಲಸ್ ಟೀವಿ ಖರೀದಿಸುವ ಗ್ರಾಹಕರಿಗೆ ಎಚ್‌ಡಿಎಫ್‌ಸಿ ಕಾರ್ಡುಗಳ ಮೇಲೆ ರೂ. 7000ವರೆಗಿನ ಕ್ಯಾಶ್‌ಬ್ಯಾಕ್, ನೋ ಕಾಸ್ಟ್ ಇಎಂಐ ಆಯ್ಕೆಗಳು, ವಿಸ್ತೃತ ವಾರಂಟಿ ಹಾಗೂ ಮಲ್ಟಿಬ್ಯಾಂಕ್ ಕ್ಯಾಶ್‌ಬ್ಯಾಕ್‌ನಂತಹ ಹಲವು ಕೊಡುಗೆಗಳ ಗುಚ್ಛವನ್ನೂ ರಿಲಯನ್ಸ್ ಡಿಜಿಟಲ್ ನೀಡುತ್ತಿದೆ. ಎರಡೂ ಮಾದರಿಗಳು 100+ ಭಾರತದ ವಿವಿಧ ನಗರಗಳ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಸ್ಟೋರ್‌ಗಳಲ್ಲಿ ಲಭ್ಯವಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications