ನಿಸ್ಸಾನ್ ಕಂಪನಿಯಿಂದ ಹೊಸ ಕಾರು ಬಿಡುಗಡೆ
ಕಾರು ಉತ್ಪಾದಕ ಸಂಸ್ಥೆಯಾದ ನಿಸಾನ್ ನಿಂದ ಮೈಕ್ರಾ ಬ್ರಾಂಡ್ ನಲ್ಲಿ ಸರಣಿಯ ಕಾರು ಬಿಡುಗಡೆ. ಗುರುಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾರಿಂದ ಕಾರು ಅನಾವರಣ.
ಗುರುಗ್ರಾಮ, ಸೆಪ್ಟೆಂಬರ್ 13: ಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ನಿಸ್ಸಾನ್ ಸಂಸ್ಥೆಯು ತನ್ನ ಮೈಕ್ರಾ ಬ್ರಾಂಡ್ ಸರಣಿಯಲ್ಲಿ ಫ್ಯಾಷನ್ ಎಡಿಷನ್ ಎಂಬ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಗುರುಗ್ರಾಮದಲ್ಲಿ ನಡೆದ ಭವ್ಯ ಸಮಾರಂಭವೊಂದರಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು, ಈ ಕಾರನ್ನು ಅನಾವರಣಗೊಳಿಸಿದರು.

ಇದೊಂದು ಲಿಮಿಟೆಡ್ ಎಡಿಷನ್ ಸರಣಿಯೆಂದು ಕಂಪನಿ ಹೇಳಿದ್ದರೂ, ಕಾರುಗಳ ಮಾರಾಟವನ್ನು ಅವುಗಳ ಬೇಡಿಕೆಗೆ ತಕ್ಕಂತೆ ಹೆಚ್ಚೆಚ್ಚು ತಯಾರಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದೆ.
ಈಗ, ಭಾರತದಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಗಳು ಆಗಮಿಸುತ್ತಿದ್ದು ಈ ಹೊತ್ತಿನಲ್ಲಿ ಮನೆಗೆ ಹೊಸ ಕಾರು ಖರೀದಿಸುವವರ ಸಂಖ್ಯೆಯೂ ಅಧಿಕವಾಗಿರುತ್ತಾದ್ದರಿಂದ ಸದ್ಯದ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸ ಬಗೆಯ ಅತ್ಯಾಕರ್ಷಕ ಕಾರುಗಳನ್ನು ಬಿಡುಗಡೆ ಮಾಡಿರುವುದಾಗಿ ನಿಸ್ಸಾನ್ ಹೇಳಿದೆ.
ಮೈಕ್ರಾ ಫ್ಯಾಷನ್ ಎಡಿಷನ್ ನ ಎಕ್ಸ್ ಷೋ ರೂಂ (ದೆಹಲಿ) ಬೆಲೆ 6 ಲಕ್ಷ ರು. ಆಗಿದ್ದು, ವಿಶಿಷ್ಠವಾದ ಬಣ್ಣಗಳ ಕಾಂಬಿನೇಷನ್ ನ ಮೇಲ್ಮೈ ಹೊಂದಿದೆ ಎಂದು ಅದು ತಿಳಿಸಿದೆ.












Click it and Unblock the Notifications