ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಐಟಿ ನೀತಿ ಜಾರಿ, 60 ಲಕ್ಷ ಹೊಸ ಉದ್ಯೋಗ ಅವಕಾಶ

|
Google Oneindia Kannada News

ಬೆಂಗಳೂರು, ಸೆ. 3: ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿ ಹೊರ ತರಲಾಗಿದೆ.

Recommended Video

Bollywood ಹಾಗು ನಮ್ಮ ಇಂಡಸ್ಟ್ರಿಗೂ Drugs link ತಿಳಿಸಿದ Prashanth Sambargi | Oneindia Kannada

ಇದರ ಬೆನ್ನಲ್ಲೇ ಇಂದು ನೂತನ ಮಾಹಿತಿ ಮತ್ತು ತಂತ್ರಜ್ಞಾನ ನೀತಿ(IT policy) 2020-2025ಗೆ ಕರ್ನಾಟಕ ಸಚಿವ ಸಂಪುಟ ಸಮ್ಮತಿಸಿದೆ. ಈ ಹೊಸ ನೀತಿಯ ಪ್ರಕಾರ, ಸುಮಾರು 60 ಲಕ್ಷ ಹೊಸ ಉದ್ಯೋಗ ಅವಕಾಶಗಳು ರಾಜ್ಯದಲ್ಲಿ ಸೃಷ್ಟಿಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಹೇಳಿದರು.

ರಾಜ್ಯ ಕೈಗಾರಿಕಾ ನೀತಿಗೆ ಅಸ್ತು, ಲಕ್ಷಾಂತರ ಉದ್ಯೋಗ ಸೃಷ್ಟಿರಾಜ್ಯ ಕೈಗಾರಿಕಾ ನೀತಿಗೆ ಅಸ್ತು, ಲಕ್ಷಾಂತರ ಉದ್ಯೋಗ ಸೃಷ್ಟಿ

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಹೊಸ ನೀತಿ ರೂಪಿಸಲಾಗಿದೆ. ನೂತನ ಐಟಿ ನೀತಿ 2020ರಿಂದ 2025 ರ ತನಕ ಜಾರಿಯಲ್ಲಿರಲಿದೆ ಎಂದರು.

New IT policy gets green signal, to create 60 lakh jobs

ಹೊಸ ನೀತಿ ಜಾರಿ ಅವಧಿಯಲ್ಲಿ ಅಂದರೆ ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿ, ಪೇಟೆಂಡ್ ಹಕ್ಕಿನಲ್ಲಿ ರಕ್ಷಣೆ, ಏಕಗವಾಕ್ಷಿ ವೇದಿಕೆಯಲ್ಲಿ ಕ್ಲಿಯೆರೆನ್ಸ್ ಸಿಗಲಿದೆ. ಕೊವಿಡ್ 19 ಸಂದರ್ಭದಲ್ಲಿ ಹೆಚ್ಚು ಸಮರ್ಥವಾಗಿ ವರ್ಕ್ ಫ್ರಂ ಹೋಮ್ ಜಾರಿಗೆ ಬಂದಿದೆ.

ಚಿಕ್ಕಮಗಳೂರಿನಲ್ಲಿ ಕಾಫಿ ಪಾರ್ಕ್ ಸ್ಥಾಪನೆ: ಜಗದೀಶ್ ಶೆಟ್ಟರ್ಚಿಕ್ಕಮಗಳೂರಿನಲ್ಲಿ ಕಾಫಿ ಪಾರ್ಕ್ ಸ್ಥಾಪನೆ: ಜಗದೀಶ್ ಶೆಟ್ಟರ್

ಐಟಿ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ 5ಜಿ ಇಂಟರ್ನೆಟ್ ಸಂಪರ್ಕ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

English summary
Karnataka cabinet on Thursday (Sept 03) approved the new IT (information technology) policy for 2020 -25 that aims to generate over 60 lakh direct and indirect jobs in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X