ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಮರ್ಕೆಲ್ ಮುಂದೆ, ಮೋದಿ ಹಿಂದೆ
ನ್ಯೂಯಾರ್ಕ್, ಅ. 06: ಬ್ಲೂಮ್‌ಬರ್ಗ್ ಮಾರ್ಕೆಟ್ಸ್ ಪ್ರಕಟಿಸಿರುವ ವಿಶ್ವದ ಟಾಪ್ 50 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 13ನೇ ಸ್ಥಾನ ಪಡೆದುಕೊಂಡಿದ್ದಾರೆ. ಯುಎಸ್ ಫೆಡರಲ್ ರಿಸರ್ವ್‌ನ ಮುಖ್ಯಸ್ಥೆ ಜಾನೆಟ್ ಯೆಲೆನ್ ಮೊದಲ ಸ್ಥಾನದಲ್ಲಿದ್ದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.
ಜಗತ್ತಿನ ಜನಪ್ರಿಯ ರಾಜಕಾರಣಿಗಳು, ಆರ್ಥಿಕ ತಜ್ಞರು, ಬ್ಯಾಂಕರ್‌ಗಳು, ತಂತ್ರಜ್ಞಾನ ಮುಖ್ಯಸ್ಥರು, ಉದ್ಯಮಿಗಳು, ಹೂಡಿಕೆದಾರರು ಹಾಗೂ ಹಣಕಾಸು ನಿರ್ವಾಹಕರನ್ನು ಶ್ರೇಣೀಕರಿಸುವ ವಾರ್ಷಿಕ ಪಟ್ಟಿಯನ್ನು ಬ್ಲೂಮ್ ಬರ್ಗ್ ಮಾರ್ಕೆಟ್ಸ್ ಪ್ರಕಟಿಸುತ್ತದೆ. ಇದು ಐದನೇ ವಾರ್ಷಿಕ ಪಟ್ಟಿಯಾಗಿದೆ. ಈ ಬಾರಿ ಪಟ್ಟಿಗೆ ಸೇರಿರುವವರ ಪೈಕಿ ಅರ್ಧದಷ್ಟು ಜನ ಹೊಸಬರಾಗಿರುವುದು ವಿಶೇಷ.

ರಾಜಕಾರಣಿಗಳ ಪೈಕಿ ಮೋದಿಗಿಂತ ಉನ್ನತ ಸ್ಥಾನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದಾರೆ. ಆಪಲ್ ಸಿಇಒ ಟಿಮ್ ಕುಕ್ ಮೂರನೇ ಸ್ಥಾನದಲ್ಲಿದ್ದು, ಬ್ಲಾಕ್‌ರಾಕ್‌ನ ಸಹಸಂಸ್ಥಾಪಕ ಲ್ಯಾರಿ ಫಿಂಕ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಇತರ ಭಾರತೀಯರ ಪೈಕಿ ಮೋರ್ಗನ್ ಸ್ಟಾನ್ಲಿ ಇನ್‌ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥ 41ರ ಹರೆಯದ ರುಚಿರ್ ಶರ್ಮಾ(50ನೇ ಸ್ಥಾನ) ಸೇರಿದ್ದಾರೆ.












Click it and Unblock the Notifications