N.R.Narayana Murthy: ಕೋಟಿ.. ಕೋಟಿ ಗಳಿಸುತ್ತಿರುವ '70 ಗಂಟೆ ನಾರಾಯಣ ಮೂರ್ತಿ'ಯವರ 17 ತಿಂಗಳ ಮೊಮ್ಮಗ
N.R.Narayana Murthy: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ಸುದ್ದಿಯಲ್ಲಿರುತ್ತಲೇ ಇರುತ್ತಾರೆ. ಈಗಾಗಲೇ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳು ವಿವಾದಕ್ಕೆ ಒಳಗಾಗಿದ್ದರು. ಇದೀಗ ಅವರ 17 ತಿಂಗಳ ವಯಸ್ಸಿನ ಮೊಮ್ಮಗ ಕೋಟಿ.. ಕೋಟಿ ಗಳಿಸುತ್ತಿದ್ದಾನೆ. ಹಾಗಾದರೆ ಇದು ಹೇಗೆ ಸಾಧ್ಯ ಎಂದು ಇಲ್ಲಿ ತಿಳಿಯಿರಿ.
ಎನ್‌ಆರ್ ನಾರಾಯಣ ಮೂರ್ತಿ ಅವರ 17 ತಿಂಗಳ ಮೊಮ್ಮಗ ಏಕಗ್ರಹ ರೋಹನ್ ಮೂರ್ತಿ ಇನ್ಫೋಸಿಸ್‌ನ ಇತ್ತೀಚಿನ ಲಾಭಾಂಶದಿಂದ 3.3 ಕೋಟಿ ರೂಪಾಯಿ ಪಡೆಯಲಿದ್ದಾರೆ. ಮಾರ್ಚ್ 2025ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಪ್ರತಿ ಷೇರಿಗೆ 22 ರೂ. ಡಿವಿಡೆಂಡ್ ಘೋಷಿಸಿದ್ದು, 3.3 ಕೋಟಿ ರೂ. ಪಡೆಯಲಿದ್ದಾನೆ.

ಏಪ್ರಿಲ್ 17ರಂದು ಇನ್ಫೋಸಿಸ್ ಪ್ರತಿ ಷೇರಿಗೆ 22 ರೂಪಾಯಿ ಡಿವಿಡೆಂಡ್ ಘೋಷಿಸಿದ್ದರಿಂದ, ಏಕಾಗ್ರಹ್ ಬಳಿ ಇರುವ 15 ಲಕ್ಷ ಷೇರುಗಳಿಗೆ 3.3 ಕೋಟಿ ರೂಪಾಯಿ ಡಿವಿಡೆಂಡ್ ಸಿಗಲಿದೆ. ಈ ಮೂಲಕ ಏಕಾಗ್ರಹ್ ಭಾರತದ ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿಗೆ ಸೇರಿದ್ದಾರೆ.
ಈ ವರ್ಷದ ಒಟ್ಟು ಡಿವಿಡೆಂಡ್ ಆದಾಯವೇ 10.65 ಕೋಟಿ ರೂಪಾಯಿ ತಲುಪಿದೆ. ಈ ಹಿಂದೆ, ಕಂಪನಿಯು ಮಧ್ಯಂತರ ಡಿವಿಡೆಂಡ್ ಮೂಲಕ 7.35 ಕೋಟಿ ರೂಪಾಯಿ ನೀಡಿತ್ತು. ಅಂದರೆ ಪ್ರತಿ ಷೇರಿಗೆ 49 ರೂಪಾಯಿ ಸಿಕ್ಕಿತ್ತು. ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ದಂಪತಿಯ ಪುತ್ರ ಏಕಾಗ್ರಹ ಇನ್ಫೋಸಿಸ್‌ನಲ್ಲಿ 15,00,000 ಷೇರುಗಳನ್ನು ಹೊಂದಿದ್ದು, ಇದು ಕಂಪನಿಯ 0.04% ಪಾಲನ್ನು ಹೊಂದಿದೆ. ಈ ಷೇರುಗಳನ್ನು ಅವರ ತಾತಾ ನಾರಾಯಣ ಮೂರ್ತಿ ಅವರು ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ ಉಡುಗೊರೆಯಾಗಿ ನೀಡಿದ್ದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಏಕಾಗ್ರಹ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿದ್ದು, ಮಾರ್ಚ್ 2024ರ ವೇಳೆಗೆ ಅವರ ಷೇರುಗಳ ಮೌಲ್ಯ ₹240 ಕೋಟಿಗಳಷ್ಟಿದೆ ಎಂದು ತಿಳಿದುಬಂದಿದೆ. ನವೆಂಬರ್ 2023ರಲ್ಲಿ ಬೆಂಗಳೂರಿನಲ್ಲಿ ರೋಹನ್ ಮೂರ್ತಿ ಮತ್ತು ಅಪರ್ಣ ಕೃಷ್ಣನ್ ಅವರ ಮಗನಾಗಿ ರೋಹನ್ ಜನಿಸಿದ್ದ.
ಇನ್ನು ಕೃಷ್ಣ ಮತ್ತು ಅನೌಷ್ಕಾ ಅವರು ಅಕ್ಷತಾ ಮೂರ್ತಿ ಮತ್ತು ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರು ಆಗಿದ್ದಾರೆ. ಅಕ್ಷತಾ ಮೂರ್ತಿ ಅವರು ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಪುತ್ರಿಯಾಗಿದ್ದಾರೆ.
ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ 3.89 ಲಕ್ಷ ಷೇರುಗಳನ್ನು ಹೊಂದಿದ್ದು, ಅವರು ಲಾಭಾಂಶದಿಂದ ₹85.7 ಕೋಟಿ ಪಡೆಯಲಿದ್ದಾರೆ.
ಬ್ರಿಟಿಷ್ ಉದ್ಯಮಿ ರಿಷಿ ಸುನಕ್ ಅವರನ್ನು ವಿವಾಹವಾದ ಅಕ್ಷತಾ ಅವರು, ಕುಟುಂಬ ವ್ಯವಹಾರ ಮತ್ತು ಇತರ ಹಲವಾರು ಉದ್ಯಮಗಳಲ್ಲಿ ದೀರ್ಘಕಾಲದಿಂದ ತೊಡಗಿಸಿಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರಿಗೆ ಲಾಭಾಂಶದಿಂದ ₹33.3 ಕೋಟಿ ದೊರೆಯಲಿದ್ದು, ಅವರ ಪತ್ನಿ ಸುಧಾ ಮೂರ್ತಿ ಅವರಿಗೆ ₹76 ಕೋಟಿ ಸಿಗಲಿದೆ.
ಏಕಾಗ್ರಹ್ ಪ್ರಸ್ತುತ ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಈ ಮೂಲಕ ಐಟಿ ಸೇವಾ ಸಂಸ್ಥೆಯಲ್ಲಿ ಈತನ ಪಾಲು ಶೇಕಡ 0.04ರಷ್ಟಿದೆ. ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗ ನಾಲ್ಕು ತಿಂಗಳಿದ್ದಾಗಲೇ ಈ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಷೇರುದಾರರನ್ನು ನಿರ್ಧರಿಸಲು ಮೇ 30 ಅನ್ನು ರೆಕಾರ್ಡ್ ದಿನಾಂಕವಾಗಿ ಘೋಷಿಸಲಾಗಿದೆ. ಜೂನ್ 30ರಂದು ಡಿವಿಡೆಂಡ್ ಪಾವತಿ ಆಗಲಿದೆ ಎಂದು ಇನ್ಫೋಸಿಸ್ ತಿಳಿಸಿದೆ.
ಹೀಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನೂ ಅವರ ಮೊಮ್ಮಗನ ಷೇರು ಕೇಳಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಇವರು ಮಾತ್ರ ಕೋಟಿ.. ಕೋಟಿ ಹಣ ಮಾಡಿಕೊಳ್ಳುತ್ತಾರೆ. ಉದ್ಯೋಗಿಗಳಿಗೆ ಮಾತ್ರ ವಾರಕ್ಕೆ 70 ಗಂಟೆ ಕೆಲಸ ಮಾಡಿ ಅಂತಾ ಹೇಳುತ್ತಾರರ. ಅವರಿಗೇನು ಕುಟುಂಬ ಇರುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications