2019ರಲ್ಲಿ ಮುಕೇಶ್ ಅಂಬಾನಿ ಸಂಪತ್ತು $17 ಬಿಲಿಯನ್ ಹೆಚ್ಚಳ
Recommended Video
ನವದೆಹಲಿ, ಡಿಸೆಂಬರ್ 24: ಪ್ರಸಕ್ತ ವರ್ಷ ಬಹುತೇಕ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, 2019 ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಉದ್ಯಮಿ ಮುಕೇಶ್ ಅಂಬಾನಿ ಸಂತಸದ ವರ್ಷವಾಗಿದೆ.
ಈ ವರ್ಷ ಮುಕೇಶ್ ಅಂಬಾನಿ ಅವರ ಸಂಪತ್ತು ಸುಮಾರು $17 ಬಿಲಿಯನ್‌ನಷ್ಟು ಹೆಚ್ಚಳವಾಗಿದೆ. ಅವರ ಒಟ್ಟಾರೆ ಸಂಪತ್ತು ಸುಮಾರು $61 ಬಿಲಿಯನ್ ತಲುಪಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.
ಮುಕೇಶ್ ಅವರಿಗೆ ಪೈಪೋಟಿ ನೀಡುತ್ತಿದ್ದ ಇತರೆ ಸಿರಿವಂತ ವ್ಯಕ್ತಿಗಳಾದ ಅಲಿಬಾಬಾ ಸಮೂಹದ ಸಂಸ್ಥಾಪಕ ಜ್ಯಾಕ್ ಮಾ ಸಂಪತ್ತು $11.3 ಬಿಲಿಯನ್ ಏರಿಕೆಯಾಗಿದ್ದರೆ, ಜೆಫ್ ಬೆಜೋಸ್ $13.3 ಬಿಲಿಯನ್ ನಷ್ಟ ಅನುಭವಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಶೇರುಗಳು ಶೇ 40ರಷ್ಟು ಏರಿಕೆಯಾಗಿದ್ದು, ಅಂಬಾನಿ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗಿದೆ. ಹೂಡಿಕೆದಾರರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಿಲಯನ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಜತೆಗೆ ಅವರ ದೂರಸಂಪರ್ಕ ಸಂಹವನ ಮತ್ತು ರೀಟೈನ್ ಉದ್ಯಮವೂ ಲಾಭದಾಯಕವಾಗಿದೆ. ಇ-ಕಾಮರ್ಸ್ ಉದ್ಯಮ ಅಮೇಜಾನ್ ಡಾಟ್ ಕಾಂಗೆ ಸವಾಲೊಡ್ಡುವ ಸಲುವಾಗಿ ಭಾರತದ್ದೇ ಇ-ಕಾಮರ್ಸ್ ವ್ಯವಸ್ಥೆ ಸ್ಥಾಪಿಸಲು ಮುಕೇಶ್ ಅಂಬಾನಿ ಸಿದ್ಧತೆ ನಡೆಸಿದ್ದಾರೆ. ಅದರ ನಡುವೆಯೇ ಜಿಯೋ ಮೇಲೆ ಸುಮಾರು $50 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಮೂರು ವರ್ಷಗಳಲ್ಲಿಯೇ ದೇಶದ ನಂ.1 ಮೊಬೈಲ್ ಸೇವೆಯನ್ನಾಗಿ ಮಾಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮೂಲಕ ತೈಲ ಮತ್ತು ಅನಿಲ ವಲಯಗಳಲ್ಲದೆ, ಚಿಲ್ಲರೆ ಹಾಗೂ ದೂರಸಂಪರ್ಕ ಕ್ಷೇತ್ರಗಳಲ್ಲಿಯೂ ಮುಕೇಶ್ ಅಂಬಾನಿ ದೇಶಿ ಮಾರುಕಟ್ಟೆಯ ಸ್ಥಿತಿಯನ್ನು ಬದಲಿಸಿದ್ದಾರೆ. ಹೊಸ ವಲಯಗಳಲ್ಲಿ ಅವರು ಹೂಡಿಕೆ, ಸ್ಥಾಪನೆ ಮತ್ತು ಬೆಳೆಸುವ ಕಾರ್ಯವನ್ನು ವೇಗವಾಗಿ ಮಾಡಿದ್ದರ ಫಲವಾಗಿ ಅವರು ಯಶಸ್ಸು ಕಂಡಿದ್ದಾರೆ ಎಂದು ಟಿಸಿಜಿ ಅಸೆಟ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆ ಅಧಿಕಾರಿ ಚಕ್ರಿ ಲೋಕಪ್ರಿಯ ಹೇಳಿದ್ದಾರೆ.
2016ರ ಅಂತ್ಯದ ಬಳಿಕ ರಿಲಯನ್ಸ್ ಶೇರು ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಜಿಯೋ ನೆಟ್‌ವರ್ಕ್. 350 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ, ಸೆಪ್ಟೆಂಬರ್ ತ್ರೈಮಾಸಿಕದ ವೇಳೆಗೆ $140 ಮಿಲಿಯನ್ ಒಟ್ಟಾರೆ ಆದಾಯವನ್ನು ಘೋಷಿಸಿಕೊಂಡಿದೆ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications