ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ!

ಮುಂಬೈ, ಜೂನ್ 19: ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಸಂಪೂರ್ಣ ಸಾಲಮುಕ್ತ ಸಂಸ್ಥೆ ಎನಿಸಿಕೊಂಡಿದೆ. ಮಾರ್ಚ್ 31, 2021ರೊಳಗೆ ಈ ಗುರಿ ಮುಟ್ಟಲಾಗುವುದು ಎಂದಿದ್ದ ಮುಖೇಶ್ 2020ರ ಜೂನ್ ತಿಂಗಳಲ್ಲೇ ಈ ಸಾಧನೆ ಮಾಡಿದ್ದಾರೆ.

Recommended Video

      ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

      ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್‌ಟನ್ ಹಾಗೂ ಪಿಐಎಫ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ₹115,693.95 ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ. ಇದಲ್ಲದೆ RIL ಹಕ್ಕುಗಳ ಷೇರು ನೀಡಿಕೆ ಮೂಲಕ ₹ 53,124.20 ಕೋಟಿ ರು ಗಳಿಸಿದೆ.ಜೊತೆಗೆ ಬ್ರಿಟಿಷ್ ಪೆಟ್ರೋಲಿಯಂ ರೀಟೇಲ್ ಜೊತೆಗಿನ ಸಹಭಾಗಿತ್ವದಲ್ಲಿ 1.75 ಲಕ್ಷ ಕೋಟಿ ಹೂಡಿಕೆ ಕಂಡಿದ್ದಾರೆ.

      ಮಾರ್ಚ್ 31, 2020ಕ್ಕೆ ಅನ್ವಯವಾಗುವಂತೆ RIL ನಿವ್ವಳ ಸಾಲದ ಮೊತ್ತ ₹ 161,035 ಕೋಟಿ ರು ನಷ್ಟಿತ್ತು. ಈಗ ಒಟ್ಟಾರೆ ಶೇ 24ರಷ್ಟು ₹ 115,693.95 ಕೋಟಿ ಹೂಡಿಕೆ ಹಾಗೂ ₹ 53,124.20 ಕೋಟಿ ರು ಹಕ್ಕು ಮಾರಾಟ ಮೂಲಕ ಕಳೆದ 58 ದಿನಗಳಲ್ಲಿ ₹168,818.15 ಕೋಟಿ ರು ಗಳಿಸಿ ಸಾಲವನ್ನು ತೀರಿಸಿಕೊಂಡಿದೆ.

      Mukesh Ambani RIL is now net debt-free before deadline

      ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+