ಜನರ ಪ್ರೀತಿಗೆ ತಲೆ ಬಾಗಿದ ಮೈಕ್ರೋಸಾಫ್ಟ್, MS Paint ಜೀವಂತ

Posted By:
Subscribe to Oneindia Kannada

ಬೆಂಗಳೂರು, ಜುಲೈ 25:ಮೈಕ್ರೋಸಾಫ್ಟ್ ನ ಅತ್ಯಂತ ಜನಪ್ರಿಯ ಪೋಗ್ರಾಮ್ ಎಂಎಸ್ ಪೈಂಟ್ ಸೇವೆ ಇನ್ಮುಂದೆ ಇರಲ್ಲ ಎಂಬ ಸುದ್ದಿ ಹಬ್ಬಿತ್ತು.

ವಿಂಡೋಸ್ 10ರ ಹೊಸ ಅಪ್ಡೇಟ್ ಮಾಡಿಕೊಳ್ಳುತ್ತಲೇ ಎಂಎಸ್ ಪೈಂಟ್ ಕಥೆ ಮುಗಿಯಲಿದೆ ಎಂಬುದು ಅನೇಕರಿಗೆ ನೋವು ತಂದಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕ ಮಂದಿ ಈ ಬಗ್ಗೆ ನೋವು ತೋಡಿಕೊಂಡಿದ್ದರು.

Microsoft not to kill MS Paint after 32 years, dump in Windows Store

ಕೊನೆಗೆ ಸಾರ್ವಜನಿಕರ ಪ್ರೀತಿ ಹಾಗೂ ಪ್ರತಿಕ್ರಿಯೆಗೆ ಮಣಿದಿರುವ ಮೈಕ್ರೋಸಾಫ್ಟ್ ಸಂಸ್ಥೆ ತನ್ನ 32 ವರ್ಷ ಇತಿಹಾಸ ಹೊಂದಿರುವ ತಂತ್ರಾಂಶ ಎಂಎಸ್ ಪೈಂಟ್ ಅನ್ನು ಉಳಿಸಿಕೊಳ್ಳುವುದಾಗಿ ಘೋಷಿಸಿದೆ.

Microsoft Planning To Cut Huge Number Of Jobs | Oneindia Kannada

ಮೈಕ್ರೋಸಾಫ್ಟ್ ನ 3ಡಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಮೇಗನ್ ಸ್ಯಾಂಡರ್ಸ್ ಮಾತನಾಡಿ, MS Paint ಉಳಿಯಲಿದೆ. ಅದಕ್ಕೆ ಹೊಸ ಮನೆ ಸಿಗಲಿದೆ ವಿಂಡೋಸ್ ಸ್ಟೋರ್ ನಲ್ಲಿ ಉಚಿತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ವಿಂಡೋಸ್ 10ರ ಕ್ರಿಯೇಟಿವ್ ಅಪ್ಡೇಟ್ ಮಾಡಿಕೊಂಡ ಬಳಿಕವೂ ಎಂಎಸ್ ಪೈಂಟ್ ಬಳಕೆ ಸಾಧ್ಯ ಎಂದಿದ್ದಾರೆ. ಈ ಬಗ್ಗೆ ಮೈಕ್ರೋಸಾಫ್ಟ್ ಅಧಿಕೃತ ಬ್ಲಾಗಿನಲ್ಲಿ ವಿವರಣೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Microsoft has announced that it will save MS Paint by putting it on the Windows Store. Earlier software giant Microsoft announced that it will kill MS Paint one of the oldest programme after Microsoft’s next Windows 10 update, called the Autumn (or Fall in the US) Creators Update.
Please Wait while comments are loading...