ಮಹಿಳಾ ಉದ್ಯೋಗಿ ಜೊತೆ ಡೇಟಿಂಗ್ ಮಾಡಿದ್ದಕ್ಕೆ ಸಿಇಒಗೆ ಕೊಕ್

ನ್ಯೂಯಾರ್ಕ್, ನವೆಂಬರ್ 04: ಮೆಕ್‌ಡೊನಾಲ್ಡ್ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಟೀವ್ ಎಸ್ಟರ್ ಬ್ರೂಕ್(52) ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಮಹಿಳಾ ಉದ್ಯೋಗಿಯೊಬ್ಬರ ಜೊತೆ ಡೇಟಿಂಗ್ ಮಾಡಿದ ಆರೋಪ ಹೊತ್ತುಕೊಂಡಿದ್ದಾರೆ. ಸ್ಟೀವ್ ಅವರು ಸಂಸ್ಥೆಯ ನಿಯಮ ಮುರಿದಿರುವ ಕಾರಣ ಅವರನ್ನು ಸಿಇಒ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ.

ಉನ್ನತ ಹುದ್ದೆಯಲ್ಲಿರುವವರು ನೇರ ಅಥವಾ ಪರೋಕ್ಷ ಉದ್ಯೋಗಿಗಳ ಜತೆ ಪ್ರಣಯ ಸಂಬಂಧ ಇಟ್ಟುಕೊಳ್ಳುವುದನ್ನು ಮೆಕ್‌ಡೊನಾಲ್ಡ್ ಸಹಿಸುವುದಿಲ್ಲ, ಅದು ಒಪ್ಪಿಂದ ಸಂಬಂಧವಾದರೂ ಸರಿ ಎಂದು ಮೆಕ್ ಡೊನಾಲ್ಡ್ ಸಂಸ್ಥೆ ಹೇಳಿದೆ.

ತನ್ನ ಉದ್ಯೋಗಿಗಳಿಗೆ ಈ ಬಗ್ಗೆ ವಿವರಣೆ ನೀಡಿದ ಪತ್ರ ಬರೆದಿರುವ ಸ್ಟೀವ್, ಉದ್ಯೋಗಿಯೊಬ್ಬರ ಜತೆ ಸಂಬಂಧ ಹೊಂದಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ಕಂಪೆನಿಯ ಮೌಲ್ಯಗಳ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಯ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ. ಇದು ಹೊರಹೋಗಲು ಸೂಕ್ತ ಸಮಯ ಎಂದಿದ್ದಾರೆ.

McDonalds CEO Steve Easterbrook fired after dating employee

ಎಸ್ಟರ್‌ಬ್ರೂಕ್ ಅವರ ವಜಾ ನಿರ್ಧಾರದ ಪರವಾಗಿ ಮೆಕ್‌ಡೊನಾಲ್ಡ್ಸ್ ಆಡಳಿತ ಮಂಡಳಿಯ ಬಹುತೇಕ ಎಲ್ಲಾ ಸದಸ್ಯರು ಮತ ಚಲಾಯಿಸಿದ್ದಾರೆ. ಸಂಸ್ಥೆಯಿಂದ ಹೊರ ಹೋಗಲಿರುವ ಪ್ಯಾಕೇಜ್ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಸ್ಟೀವ್ 2011ರಲ್ಲಿ ಸಂಸ್ಥೆ ತೊರೆದು ಪಿಜ್ಜಾ ಎಕ್ಸ್ ಪ್ರೆಸ್ ಸೇರಿದ್ದರು, ನಂತರ ಏಷ್ಯದ ಸಂಸ್ಥೆ ವಗಮಾಮಾ ಸೇರಿಕೊಂಡಿದ್ದರು. ಆದರೆ 2013ರಲ್ಲಿ ಮೆಕ್ ಡೊನಾಲ್ಡ್ ಗೆ ಮರಳಿದರು. 2015ರಿಂದ ಮೆಕ್ ಡೊನಾಲ್ಡ್ ಸಿಇಒ ಆಗಿರುವ ಸ್ಟೀವ್ ಅವರು ಕಂಪನಿಯ ಆಡಳಿತ ಮಂಡಳಿಯಿಂದಲೂ ಹೊರ ಬಿದ್ದಿದ್ದಾರೆ. ಸ್ಟೀವ್ ಜೊತೆ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಇದು ಕಂಪನಿ ನಿಯಮಗಳಿಗೆ ವಿರುದ್ಧವಾಗಲ್ದೆ ಎಂದು ಫಾಸ್ಟ್ ಫುಡ್ ಕ್ಷೇತ್ರದ ಜನಪ್ರಿಯ ಸಂಸ್ಥೆ ಮೆಕ್‌ಡೊನಾಲ್ಡ್ಸ್ ಹೇಳಿದೆ. ಸಂಸ್ಥೆಯ ಹೊಸ ಸಿಇಒ ಹಾಗೂ ಅಧ್ಯಕ್ಷರಾಗಿ ಕ್ರಿಸ್ ಕೆಂಪ್‌ಝಿನ್‌ಸ್ಕಿ ನೇಮಕವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+