ಮತ್ತಷ್ಟು ಎತ್ತರಕ್ಕೆ ಭಾರತೀಯ ಷೇರುಪೇಟೆ: ನಿಫ್ಟಿ 13,740 ಪಾಯಿಂಟ್ಸ್‌

ನವದೆಹಲಿ, ಡಿಸೆಂಬರ್ 18: ಭಾರತೀಯ ಷೇರುಪೇಟೆಯು ಗುರುವಾರ ಮತ್ತಷ್ಟು ಎತ್ತರಕ್ಕೆ ಸಾಗಿದ್ದು, ಸತತ ಐದನೇ ದಿನವೂ ಸಕರಾತ್ಮಕವಾಗಿಯೇ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 223 ಪಾಯಿಂಟ್ಸ್ ಜಿಗಿತ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 58 ಪಾಯಿಂಟ್ಸ್‌ ಏರಿಕೆ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 233.88 ಪಾಯಿಂಟ್ಸ್ ಅಥವಾ ಶೇಕಡಾ 0.48ರಷ್ಟು ಏರಿಕೆಗೊಂಡು 46,890 ಪಾಯಿಂಟ್ಸ್‌ಗೆ ಕೊನೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 58 ಪಾಯಿಂಟ್ಸ್‌ ಅಥವಾ ಶೇ. 0.48ರಷ್ಟು ಏರಿಕೆಗೊಂಡು 13,740.70 ಪಾಯಿಂಟ್ಸ್‌ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 403.29 ಪಾಯಿಂಟ್ಸ್ ನಿಫ್ಟಿ 114.80 ಪಾಯಿಂಟ್ಸ್‌ ಏರಿಕೆಗೊಂಡಿತ್ತು.

ಇಂದು ಸುಮಾರು 1234 ಷೇರುಗಳು ಲಾಭಗಳಿಸಿದರೆ, 1485 ಷೇರುಗಳು ಕುಸಿದವು, ಮತ್ತು 137 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Market Ends Fresh Record High: Sensex Up 223 Points: Nifty Above 13,700 Points

ಡಿವಿಸ್ ಲ್ಯಾಬ್ಸ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ. ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಅದಾನಿ ಪೋರ್ಟ್ಸ್, ಒಎನ್‌ಜಿಸಿ ಮತ್ತು ಪವರ್ ಗ್ರಿಡ್ ಕಾರ್ಪ್ ನಷ್ಟ ಅನುಭವಿಸಿದ ಷೇರುಗಳು.

ಇಂದು ಫಾರ್ಮಾ ಮತ್ತು ಬ್ಯಾಂಕುಗಳ ಸಂಬಂಧಿತ ಷೇರುಗಳನ್ನು ಹೊರತುಪಡಿಸಿ ಇತರ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಅಲ್ಪ ನಷ್ಟದೊಂದಿಗೆ ಕೊನೆಗೊಂಡಿತು.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಎಲ್ಲಾ ಇಂಟ್ರಾಡೇ ಲಾಭಗಳನ್ನು ಅಳಿಸಿ 73.58 ಕ್ಕೆ ಕೊನೆಗೊಂಡಿತು. ಇದು ಪ್ರತಿ ಡಾಲರ್‌ಗೆ 73.53 ಕ್ಕೆ ಸ್ವಲ್ಪ ಹೆಚ್ಚಾಗಿದೆ ಮತ್ತು ಬುಧವಾರದ 73.58 ರ ಸಮೀಪದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+