ವ್ಯಕ್ತಿ ಖರೀದಿಸಿದ ಖಾಲಿ ಜಮೀನಿನಲ್ಲಿ ಕೋಟಿಗಳ ವ್ಯವಹಾರ: ಕೆಲಸ ಮಾಡಿಕೊಂಡೇ ಬ್ಯುಸಿನೆಸ್‌ನಲ್ಲೂ ಭರ್ಜರಿ ಲಾಭ

ಯಾವುದೇ ಬ್ಯಸಿನೆಸ್‌ ಶುರು ಮಾಡಬೇಕು ಎಂದಾದರೆ ನಾವು ಸದ್ಯ ಮಾಡುತ್ತಿರುವ ಕೆಲಸವನ್ನು ಬಿಟ್ಟು ಬಿಡಬೇಕು ಎನ್ನುವ ಕಲ್ಪನೆ ಸಾಮಾನ್ಯವಾಗಿ ಎಲ್ಲರಲ್ಲಿ ಇರುವುದು. ನಮ್ಮ ಸಂಪೂರ್ಣ ಫೋಕಸ್‌ ಆ ವ್ಯವಹಾರದ ಮೇಲೆಯೇ ಇರಬೇಕು, ಬೇರೆ ಕೆಲಸಗಳತ್ತ ತಲೆ ಹಾಕಬಾರದು. ಹೀಗಾದರೆ ಮಾತ್ರ ಸಕ್ಸಸ್‌ ಸಿಗಲು ಸಾಧ್ಯ ಎನ್ನುವ ಮಾತು ಬಹುತೇಕರ ಬಾಯಲ್ಲಿ ಕೇಳಿರಬಹುದು. ಆದರೆ ಇದನ್ನು ಸುಳ್ಳು ಎಂದು ಸಾಬೀತು ಪಡಿಸಿದ್ದಾರೆ ಈ ವ್ಯಕ್ತಿ.

ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿರುವ ಈ ಪೋಸ್ಟ್‌ ಬ್ಯುಸಿನೆಸ್‌ ಬಗ್ಗೆ ಇರುವ ಚಿಂತನೆಯನ್ನೇ ಬದಲಾಯಿಸಿದೆ. ಇಲ್ಲಿ, ಒಬ್ಬ ವ್ಯಕ್ತಿ ತನ್ನ ಕೆಲಸವನ್ನು ಬಿಡದೆ ಬ್ಯುಸಿನೆಸ್‌ನಲ್ಲಿಯೂ ಯಶಸ್ಸು ಕಂಡಿದ್ದಾರೆ. ತಾನು ಖರೀದಿಸಿರುವ ಸಣ್ಣ ಭೂಮಿಯನ್ನೇ ಆದಾಯ ಗಳಿಸುವ ಆಸ್ತಿಯನ್ನಾಗಿ ಬದಲಿಸಿದ್ದಾರೆ.

Farm stay

ಖಾಲಿ ಜಮೀನಿನಿಂದ ಈಗ ಲಕ್ಷ ಲಕ್ಷ ಆದಾಯ

ಗುರಗಾಂವ್‌ನಲ್ಲಿ ಕೆಲಸ ಮಾಡುವ ಈ ವ್ಯಕ್ತಿ ಸುಮಾರು ಎರಡು ವರ್ಷಗಳ ಹಿಂದೆ ಭೂಮಿಯನ್ನು ಖರೀದಿಸಿದ್ದರು. ಆರಂಭದಲ್ಲಿ, ಸುಮಾರು ಒಂದೂವರೆ ವರ್ಷಗಳ ಕಾಲ ಆ ಭೂಮಿ ಹಾಗೆಯೇ ಖಾಲಿ ಬಿದ್ದಿತ್ತು. ನಂತರ, ಆ ಭೂಮಿಯನ್ನು ಹಾಗೆಯೇ ಸುಮ್ಮನೆ ಬಿಡುವ ಬದಲು ಅದರಿಂದಲೇ ಆದಾಯ ಬರುವಂತೆ ಬಳಸಿಕೊಂಡರೆ ಹೇಗೆ ಎನ್ನುವ ಯೋಚನೆ ಅವರಿಗೆ ಬಂದಿದೆ. ಕೂಡಲೇ ಅವರು ಅದನ್ನು ಫಾರ್ಮ್-ಸ್ಟೇಯಾಗಿ ಡೆವಲೆಪ್‌ ಮಾಡಿದ್ದಾರೆ.

ಕಮರ್ಶಿಯಲ್‌ ಫಾರ್ಮ್‌ಸ್ಟೇಯಾಗಿ ಡೆವಲೆಪ್‌

ಇನ್‌ಸ್ಟಾಗ್ರಾಮ್‌ನಲ್ಲಿ 'ದಿ ರಿವರ್‌ವುಡ್‌ಫಾರ್ಮ್ಸ್' ಖಾತೆಯಲ್ಲಿ ಈ ವೀಡಿಯೊವನ್ನು ಶೇರ್‌ ಮಾಡಲಾಗಿದೆ. ಇಲ್ಲಿ ತಮ್ಮ ಆಸ್ತಿಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಫಾರ್ಮ್‌ಸ್ಟೇ ಮಾಲೀಕರ ಬಗ್ಗೆ ವೈಯಕ್ತಿಕವಾಗಿ ತನಗೆ ತಿಳಿದಿಲ್ಲ, ಆದರೆ ಈ ಆಸ್ತಿ ಬೆಳೆದು ಬಂದ ರೀತಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎನ್ನುತ್ತಾರೆ ವಿಡಿಯೋ ಶೇರ್ ಮಾಡಿರುವ ಅಭಿಷೇಕ್.‌ ಅವರ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಖರೀದಿಸಿದ ಭೂಮಿ ಸ್ವಲ್ಪ ಸಮಯದವರೆಗೆ ಹಾಗೆಯೇ ಇತ್ತು. ಆದರೆ ನಂತರ ಕಮರ್ಶಿಯಲ್‌ ಫಾರ್ಮ್‌ಸ್ಟೇ ಆಗಿ ಬದಲಾಗಿದೆ. ಸ್ವಲ್ಪ ಸಮಯದೊಳಗೆ, ಅಲ್ಲಿ ಏಳು ಮಡ್ಡಿ ವಿಲ್ಲಾಗಳನ್ನು ನಿರ್ಮಿಸಲಾಗಿದೆ.

ಸುಮಾರು 3 ಲಕ್ಷ ರೂ.ಯಲ್ಲಿ ನಿರ್ಮಿಸಿದ ಮಡ್ಡಿ ವಿಲ್ಲಾ

ಈ ಯೋಜನೆಯ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಅದರ ನಿರ್ಮಾಣ ವೆಚ್ಚ. ಅಭಿಷೇಕ್ ಪ್ರಕಾರ, ಒಂದು ವಿಲ್ಲಾ ನಿರ್ಮಿಸಲು ಸುಮಾರು 3 ಲಕ್ಷ ವೆಚ್ಚ ಮಾಡಲಾಗಿದೆ. ಇದು ಏಳು ಮಟ್ಟಿ ವಿಲ್ಲಾಗಳಿಗೆ 21 ಲಕ್ಷ ಖರ್ಚಾಗಿದೆ. ಇಲ್ಲಿ ವಿಲ್ಲಾಗಳು ಮಾತ್ರವಲ್ಲದೆ, ಈಜುಕೊಳಗಳು, ಲಾನ್‌, ವಾಚ್‌ಟವರ್‌ಗಳು ಮತ್ತು ಇತರ ಸೌಕರ್ಯಗಳನ್ನು ಕೂಡಾ ನೀಡಲಾಗಿದೆ. ನಗರದಿಂದ ದೂರವಿರುವ ಶಾಂತ ಸ್ಥಳದಲ್ಲಿ ಇರಲು ಬಯಸುವ ಅತಿಥಿಗಳಿಗೆ ಒಂದೊಳ್ಳೆ ಪರಿಸರವನ್ನು ಒದಗಿಸಿ ಕೊಡುವಂಥಹ ರೀತಿಯಲ್ಲಿ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಒಪನ್‌ ಸ್ಪೇಸ್‌, ಹಸಿರು ಪರಿಸರ ಮತ್ತು ಆಸನ ವ್ಯವಸ್ಥೆಗಳು ಈ ಫಾರ್ಮ್‌ಸ್ಟೇ ಅನ್ನು ವಿಶಿಷ್ಟವನ್ನಾಗಿಸುತ್ತದೆ.

ಗುರಗಾಂವ್‌ನಲ್ಲಿ ಕೆಲಸ ಮಾಡುವ ಮಾಲೀಕ

ಈ ವ್ಯವಹಾರದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಇಲ್ಲಿ ಮಾಲೀಕರು ಎಲ್ಲಾ ಸಮಯದಲ್ಲೂ ಇರಬೇಕಾಗಿಲ್ಲ.ಹಾಗಾಗಿ ಈ ಆಸ್ತಿಯ ಮಾಲೀಕರು ಕೂಡಾ ಗುರಗಾಂವ್‌ನಲ್ಲಿ ಕೆಲಸ ಮಾಡುತ್ತಾರೆ. ಆಸ್ತಿಯನ್ನು ನಿರ್ವಹಿಸಲು ಫುಲ್‌ ಟೈಂ ಮ್ಯಾನೇಜರ್, ಅಡುಗೆಯವರು ಮತ್ತು ಕೇರ್‌ ಟೇಕರ್‌ ಅವರನ್ನು ನೇಮಿಸಿಕೊಂಡಿದ್ದಾರೆ. ಇತರ ಸಿಬ್ಬಂದಿ ಸಹ ಅಗತ್ಯವಿರುವಂತೆ ಕೆಲಸ ಮಾಡುತ್ತಾರೆ. ಇದರರ್ಥ ಬುಕಿಂಗ್‌ನಿಂದ ಹಿಡಿದು ಆಹಾರದವರೆಗೆ ಎಲ್ಲವನ್ನೂ ಸ್ಥಳೀಯ ತಂಡ ನೋಡಿಕೊಳ್ಳುತ್ತದೆ.

ಲಾಭದ ಲೆಕ್ಕಾಚಾರವನ್ನು ಹೀಗೆ ಅರ್ಥಮಾಡಿಕೊಳ್ಳಬಹುದು

ಈ ಫಾರ್ಮ್-ಸ್ಟೇನ ವಿಲ್ಲಾಗಳು 80% ದಷ್ಟು ಬುಕ್ಕಿಂಗ್‌ ಆಗಿರುತ್ತವೆ. ಆಹಾರ ಸೇರಿದಂತೆ ವೆಚ್ಚವು ಪ್ರತಿ ವ್ಯಕ್ತಿಗೆ ಸರಿಸುಮಾರು 3,000 ರೂಪಾಯಿ. ಏಳು ವಿಲ್ಲಾಗಳಲ್ಲಿ ಸರಾಸರಿ ಇಬ್ಬರು ಬಂದರೂ 14 ಜನ ಇದ್ದ ಹಾಗೆ ಆಗುತ್ತದೆ. ಪ್ರತಿ ವ್ಯಕ್ತಿಗೆ 3,000 ರೂಪಾಯಿಗಳಂತೆ, ಸಂಪೂರ್ಣವಾಗಿ ಬುಕ್ ಮಾಡಿದರೆ ದೈನಂದಿನ ಒಟ್ಟು ಹಣ 42,000 ರೂಪಾಯಿಗಳಾಗಿರುತ್ತದೆ.

ಈಗ, 80% ಜನವಸತಿಯನ್ನು ಊಹಿಸಿದರೆ, ಈ ಅಂಕಿ ಅಂಶವು ದಿನಕ್ಕೆ ಸುಮಾರು 33,600 ರೂ.ಗಳಿಗೆ ಬರುತ್ತದೆ. 30 ದಿನಗಳವರೆಗೆ, ಮಾಸಿಕ ಒಟ್ಟು ಆದಾಯ ಸುಮಾರು 10 ಲಕ್ಷ ರೂ. ವಾರ್ಷಿಕವಾಗಿ ನೋಡುವುದಾದರೆ ಇದು ಸುಮಾರು 1.2 ಕೋಟಿ ರೂ.ಗಳಷ್ಟಾಗುವುದು. ಇದು ಒಟ್ಟು ಆದಾಯದ ಅಂದಾಜು. ನಿವ್ವಳ ಲಾಭವಲ್ಲ. ಇದರಲ್ಲಿ ಸಿಬ್ಬಂದಿ ಸಂಬಳ, ಆಹಾರ, ವಿದ್ಯುತ್, ನೀರು, ಶುಚಿಗೊಳಿಸುವಿಕೆ, ನಿರ್ವಹಣೆ, ಮಾರ್ಕೆಟಿಂಗ್, ತೆರಿಗೆಗಳು, ಬುಕಿಂಗ್ ಪ್ಲಾಟ್‌ಫಾರ್ಮ್ ಶುಲ್ಕಗಳು ಮತ್ತು ಇತರ ವೆಚ್ಚಗಳನ್ನು ತೆಗೆದುಹಾಕಬೇಕಾಗುತ್ತದೆ. ಇಷ್ಟಾದ ಮೇಲೆ ನಿವ್ವಳ ಲಾಭವು ಕಡಿಮೆಯಾಗಬಹುದು.

ಅಭಿಷೇಕ್ ಈ ಮಾದರಿಯ ಬಗ್ಗೆ ಅತ್ಯಂತ ಮಹತ್ವದ ವಿಷಯವನ್ನು ವೀಡಿಯೊದಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಈ ವ್ಯಕ್ತಿ ಭೂಮಿಯನ್ನು ಖರೀದಿಸಿ ಖಾಲಿ ಬಿಡಲಿಲ್ಲ, ಬದಲಾಗಿ ಅದನ್ನು ಆದಾಯ ಗಳಿಸುವ ಆಸ್ತಿಯನ್ನಾಗಿ ಪರಿವರ್ತಿಸಿದ್ದಾರೆ. ಇಂದು, ರಿಯಲ್ ಎಸ್ಟೇಟ್‌ನಲ್ಲಿ, ಕೇವಲ ಭೂಮಿಯನ್ನು ಖರೀದಿಸಿ ಅದರ ಮೌಲ್ಯ ಏರಿಕೆಗಾಗಿ ಕಾಯುವ ಬದಲು, ಅನೇಕ ಜನರು ಆ ಭೂಮಿಯನ್ನು ಬಾಡಿಗೆ ಉದ್ದೇಶಗಳಿಗಾಗಿ, ಕೃಷಿ ವಾಸ್ತವ್ಯಕ್ಕಾಗಿ, ಮದುವೆ ಸ್ಥಳಗಳಿಗೆ ಅಥವಾ ಇತರ ವ್ಯವಹಾರ ಮಾದರಿಗಳಿಗೆ ಬಳಸಲು ಉಪಯೋಗಿಸುತ್ತಿದ್ದಾರೆ. ಆದರೆ, ಅಂತಹ ಮಾದರಿಯು ಪ್ರತಿಯೊಂದು ಭೂಮಿಯಲ್ಲಿಯೂ ಯಶಸ್ವಿಯಾಗುತ್ತದೆ ಎಂದು ಖಡಾ ಖಂಡಿತವಾಗಿ ಹೇಳುವುದು ಸಾಧ್ಯವಿಲ್ಲ.

ಕೇವಲ ಭೂಮಿ ಖರೀದಿಸಿದರೆ ಸಾಲದು, ಸರಿಯಾದ ಯೋಜನೆ ಕೂಡ ಅಗತ್ಯ : ಈ ಫಾರ್ಮ್-ಸ್ಟೇ ಮಾದರಿ ಸರಳವಾಗಿ ಕಂಡುಬಂದರೂ, ಇದು ಸ್ಥಳ, ಪ್ರವಾಸಿಗರ ಬೇಡಿಕೆ, ಸಂಪರ್ಕ, ಲೈಸನ್ಸ್‌, ನಿರ್ಮಾಣ ವೆಚ್ಚಗಳು ಮತ್ತು ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡಿದೆ. ಭೂಮಿಯನ್ನು ಖರೀದಿಸಿ ಕೆಲವು ಕೊಠಡಿಗಳನ್ನು ನಿರ್ಮಿಸುವುದರಿಂದ ಕೋಟ್ಯಂತರ ರೂಪಾಯಿಗಳ ಆದಾಯ ಬರುವುದಿಲ್ಲ.

ಇಲ್ಲಿ ನೀಡಿರುವ ಆದಾಯ ಮತ್ತು ಆಕ್ಯುಪೆನ್ಸಿ ಅಂಕಿಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾದ ಕ್ಲೈಂ ಅನ್ನು ಆಧರಿಸಿವೆ. ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ನೋಡಿಲ್ಲ. ಆದ್ದರಿಂದ, ಇದನ್ನು ಖಾತರಿ ಆದಾಯದ ಭರವಸೆಯಾಗಿ ನೋಡದೆ, ವ್ಯವಹಾರ ಕಲ್ಪನೆ ಅಥವಾ ಪ್ರಕರಣ ಅಧ್ಯಯನವಾಗಿ ನೋಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+