LPG: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಕುರಿತು ಬಿಗ್ ಗುಡ್ ನ್ಯೂಸ್: ಯಾರಿಗೆಲ್ಲಾ ಅನ್ವಯ?
LPG Gas Cylinder: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲೇ ಪರಿಷ್ಕರಣೆ ಮಾಡುತ್ತಲಿರುತ್ತದೆ. ಕಳೆದ ಕೆಲ ತಿಂಗಳುಗಳ ಹಿಂದೆ ಗೃಹಬಳಕೆ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಿತ್ತು. ಈ ನಡುವೆಯೇ ಇದೀಗ ಸಬ್ಸಿಡಿ ಪಡೆಯುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ದೇಶದಲ್ಲಿನ ಬಡವರಿಗೆ ಒದಗಿಸಲಾಗುವ ಎಲ್‌ಪಿಜಿಗೆ ಸಬ್ಸಿಡಿ ನೀಡಲಾಗುತ್ತದೆ. ಇದೀಗ ಕೇಂದ್ರ ಸರ್ಕಾರ ಇಂತಹ ಕುಟುಂಬಗಳಿಗೆ ಭರ್ಜರಿ ಶುಭ ಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಪ್ರಶ್ನೆಗೆ ಉತ್ತರ ಉತ್ತರ ಇಲ್ಲಿದೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳು ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಈಗಾಗಲೇ ಕೆಲಸ ದಿನಗಳ ಹಿಂದೆಯಷ್ಟೇ ಕಡಿಮೆ ಮಾಡಿದ್ದು, ಮತ್ತೆ ಸೆಪ್ಟೆಂಬರ್ 1ಕ್ಕೆ ಈ ಮಾದರಿಯ ಸಿಲಿಂಡರ್ ದರ ಪರಿಷ್ಕರಣೆ ಆಗಲಿದೆ. ಇದೆಲ್ಲದರ ನಡುವೆ ಇದೀಗ ಗೃಹಬಳಕೆ ಗ್ಯಾಲ್ ಸಿಲಿಂಡರ್ ಸಬ್ಸಿಡಿ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದಕ್ಕೆ ಬಂದಿದ್ದು, ಇಂತಹ ಫಲನಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 14.2 ಕೆಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗಿದ್ದು, ಇದಕ್ಕಾಗಿಯೇ ಸರ್ಕಾರವು ಸುಮಾರು 12,000 ಕೋಟಿ ರೂಪಾಯಿ ವೆಚ್ಚ ಖರ್ಚು ಮಾಡಲಿದೆ ಎಂದು ತಿಳಿಸಲಾಗಿದೆ.
ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಸಬ್ಸಿಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಆದರೆ, ಸಬ್ಸಿಡಿ ಪಡೆಯಲು ಕೆಲವು ನಿಯಮಗಳನ್ನ ಪಾಲನೆ ಮಾಡಬೇಕಾಗುತ್ತದೆ. ಫಲಾನುಭವಿಗಳು 9 ಬಾರಿ ಸಿಲಿಂಡರ್ ಅನ್ನು ತುಂಬಿಸಿದ ಬಳಿಕ 300 ರೂಪಾಯಿ ಸಬ್ಸಿಡಿ ಪಡೆಯಬಹದಾಗಿದ್ದು, ಇದು ಎಲ್‌ಪಿಜಿಯ ಸಮರ್ಪಕ ಮತ್ತು ಜವಾಬ್ದಾರಿಯುತ ಬಳಕೆಯನ್ನ ಉತ್ತೇಜನ ಮಾಡುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಈ ಮಧ್ಯಯೇ ಸಬ್ಸಿಡಿ ಹೆಚ್ಚಳದಿಂದ 1,00,0,0000ಕ್ಕೂ ಅಧಿಕ ಅಧಿಕ ಕುಟುಂಬಗಳಿಗೆ ಅರ್ಥಿಕ ಸಹಾಯ ಸಿಕ್ಕಂತಾಗಲಿದೆ.
ಮತ್ತೊಂದೆಡೆ ನೋಡೋದಾದ್ರೆ, ಭಾರತ ತನ್ನ ಎಲ್‌ಪಿಜಿ ಅಗತ್ಯಗಳಲ್ಲಿ ಸುಮಾರು 60 ಪ್ರತಿಶತವನ್ನು ಆಮದುಗಳ ಮೇಲೆ ಅವಲಂಬನೆ ಆಗಿರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಗಳಲ್ಲಿ ಏರಿಳಿತ ಕಂಡುಬರುವ ಹಿನ್ನೆಲೆ ಬಡ ಕುಟುಂಬಗಳ ಮೇಲೆ ಅದರ ಪರಿಣಾಮ ಬೀರುತ್ತದೆ.
ಬಡಕುಟುಂಬಗಳ ಮೇಲೆ ಬರುವ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮೇ 2022ರಲ್ಲಿ ಸರ್ಕಾರ ಪ್ರತಿ ಗೃಹಬಳಕೆ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲು ಪ್ರಾರಂಭ ಮಾಡಿತ್ತು. ಇದೀಗ ಆ ಮೊತ್ತವನ್ನು 300 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಇದು 5 ಕೆಜಿ ಸಿಲಿಂಡರ್‌ಗಳಿಗೂ ಅನ್ವಯ ಆಗಲಿದೆ.
ಈ ಹಿಂದೆ ಪ್ರತಿವರ್ಷ ಗರಿಷ್ಠ 12 ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಆದರೆ, ಇದೀಗ ಹೊಸ ನಿಯಮದ ಪ್ರಕಾರ, ಉಜ್ವಲ ಯೋಜನೆಯ ಫಲಾನುಭವಿಗಳ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯ ಉದ್ದೇಶ ಬಡ ಮಹಿಳೆಯರಿಗೆ ಯಾವುದೇ ಠೇವಣಿ ಇಲ್ಲದೆ, ಎಲ್‌ಪಿಜಿ ಸಂಪರ್ಕವನ್ನು ಒದಗಿಸುವುದಾಗಿದೆ. ಜುಲೈ 1, 2025ರ ವೇಳೆಗೆ ದೇಶಾದ್ಯಂತ 10.33 ಕೋಟಿ ಸಂಪರ್ಕಗಳನ್ನು ವಿತರಣೆ ಮಾಡಲಾಗಿದೆ. ಇದೀಗ ಬಹುತೇಕ ಮನೆಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಈ ಮೂಲಕ ಇದರ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.












Click it and Unblock the Notifications