Get Updates
Get notified of breaking news, exclusive insights, and must-see stories!

ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ, ನವೆಂಬರ್ 30: ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಶುಕ್ರವಾರ(ನವೆಂಬರ್ 30)ದಂದು ಇಳಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳ ಏರಿಳಿತ, ಡಾಲರ್ ಎದುರು ರುಪಾಯಿ ಮೌಲ್ಯ ಚೇತರಿಕೆ ಕಾರಣ ನೀಡಲಾಗಿದೆ. ಸಬ್ಸಿಡಿ ಸಹಿತ ಹಾಗೂ ರಹಿತ ಎಲ್ ಪಿಜಿ ಪ್ರತಿ ಸಿಲಿಂಡರ್ ಮೇಲೆ ಎರಡು ಇಳಿಕೆಯಾಗಿರುವುದು ಗ್ರಾಹಕರಿಗೆ ಶುಭ ಸುದ್ದಿ ಎನ್ನಬಹುದು.

ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 6.52ರು ನಷ್ಟು ಇಳಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 133ರು ತಗ್ಗಿದೆ.

ಜೂನ್ 2018ರಿಂದ ಸತತವಾಗಿ ಏರಿಕೆ ಕಂಡಿದ್ದ ಅಡುಗೆ ಅನಿಲ ದರದಲ್ಲಿ ಈಗ ಇಳಿಕೆ ಕಂಡು ಬಂದಿದೆ. ನವೆಂಬರ್ 30ರ ಮಧ್ಯರಾತ್ರಿಯಿಂದ ನೂತನ ದರಗಳು ಜಾರಿಗೆ ಬರಲಿವೆ.

LPG cooking gas cylinder rates slashed

ದೆಹಲಿಯಲ್ಲಿ ಸಬ್ಸಿಡಿಯುಳ್ಳ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ 500.90ರುಾಗಲಿದೆ. ಈ ಮುಂಚೆ 507.42ರು ನಷ್ಟಿತ್ತು. ಸಬ್ಸಿಡಿರಹಿತ ಅಡುಗೆ ಅನಿಲ ಬೆಲೆಯಲ್ಲಿ 133ರು ತಗ್ಗಿಸಲಾಗಿದ್ದು, 14.2ಕೆಜಿ ತೂಗುವ ಸಿಲಿಂಡರ್ ಬೆಲೆ 809.50ರು ಆಗಲಿದೆ.

ನವೆಂಬರ್ 2018ರಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಸೇರಲಿರುವ ಸಬ್ಸಿಡಿ ವರ್ಗಾವಣೆ ಮೊತ್ತವನ್ನು 433.6 ರು ಪ್ರತಿ ಸಿಲಿಂಡರ್ ಗೆ ಏರಿಕೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 376.60ರು ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಯದಿಂದ ಎಲ್ ಪಿಜಿ ಗ್ರಾಹಕರನ್ನು ಈ ಮೂಲಕ ರಕ್ಷಿಸಲಾಗಿದೆ ಎಂದು ಐಒಸಿ ಹೇಳಿದೆ.

ಜೂನ್ ನಿಂದ ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳೂ ಏರಿಕೆಯಾಗಿದೆ. ಇದುವರೆಗೆ ಒಟ್ಟು ಬೆಲೆ 16.21 ರೂ.ಏರಿಕೆ ದಾಖಲಾಗಿತ್ತು.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+