ಫೇಸ್‌ಬುಕ್‌ ಡಿಲೀಟ್ ಮಾಡಿ: ವಾಟ್ಸಾಪ್ ಸಹ ಸ್ಥಾಪಕ

ಬೆಂಗಳೂರು, ಮಾರ್ಚ್ 21: ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಡಿಲೀಟ್ ಮಾಡುವಂತೆ ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಟ್ವೀಟ್ ಮಾಡಿರುವುದು ಭಾರಿ ಸಂಚಲನ ಮೂಡಿಸಿದೆ.

ಕೇಂಬ್ರಿಜ್‌ ಅನಾಲಿಟಿಕಾ ಕಂಪೆನಿಯು 5 ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಕದ್ದು ಚುನಾವಣಾ ಕಾರ್ಯತಂತ್ರಗಳಿಗೆ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಸುದ್ದಿ ಹೊರ ಬಂದಿರುವ ಬೆನ್ನಲ್ಲೇ ಬ್ರಿಯಾನ್ ಆಕ್ಟನ್ ಟ್ವೀಟ್ ಮಾಡಿದ್ದಾರೆ.

Know Why WhatsApp co-founder tells everyone to delete Facebook

ಕೇಂಬ್ರಿಜ್‌ ಅನಾಲಿಟಿಕಾ ಡೇಟಾ ಸೋರಿಕೆ ಸುದ್ದಿ ಹೊರ ಬಂದ ನಂತರ ಫೇಸ್‌ಬುಕ್‌ ಕಂಪನಿಯ ಷೇರುಗಳ ಮೌಲ್ಯ ಶೇ.7ರಷ್ಟು ಕುಸಿತ ಕಂಡಿದೆ.

ರಾಜಕೀಯ ಜಾಹೀರಾತುಗಳೊಂದಿಗೆ ಉದ್ದೇಶಿತ ಮತದಾರರನ್ನು ತಲುಪಲು ಫೇಸ್‌ಬುಕ್‌ ಮೂಲಕ ಪಡೆದ ವೈಯಕ್ತಿಕ ಮಾಹಿತಿಯನ್ನು ಕೇಂಬ್ರಿಜ್‌ ಅನಾಲಿಟಿಕಾ ಅಕ್ರಮವಾಗಿ ಬಳಸಿಕೊಂಡಿದೆ ಎಂದು ಗಾರ್ಡಿಯನ್, ಅಬ್ಸರ್ವರ್ ಮತ್ತು ನ್ಯೂ ಯಾರ್ಕ್ ಟೈಮ್ಸ್‌ ವರದಿ ಮಾಡಿವೆ.

ಯಾರೀತ ಆಕ್ಟನ್: ಸ್ಟಾನ್ ಫೋರ್ಡ್‌ನ ಹಳೆಯ ವಿದ್ಯಾರ್ಥಿ, 2009ರಲ್ಲಿ ಯಾಹೂ ಮಾಜಿ ಉದ್ಯೋಗಿ ಜಾನ್ ಕೌಮ್ ಅವರೊಡನೆ ವಾಟ್ಸಾಪ್‌ ಪ್ರಾರಂಭಿಸಿದರು. 2014ರಲ್ಲಿ 19 ಶತಕೋಟಿ ಡಾಲರ್ ನಗದು ಮತ್ತು ಸ್ಟಾಕ್ ಗಳ ಮೂಲಕ ವಾಟ್ಸಾಪ್‌ನ್ನು ಫೇಸ್‌ಬುಕ್‌ ತನ್ನ ಸ್ವಾದೀನಪಡಿಸಿಕೊಂಡಿತ್ತು. ವಾಟ್ಸಾಪ್ ಸಂಸ್ಥೆಯ ಮಾರಾಟವಾದರೂ ಆಕ್ಟನ್ ಸ್ವತಂತ್ರ ಹುದ್ದೆ ಹೊಂದಿದ್ದು ವಿಶೇಷ. ಈ ವರ್ಷಾರಂಭದಲ್ಲಿ ಆಕ್ಟನ್ ಅವರು ಹುದ್ದೆ ತೊರೆದು, ಸಿಗ್ನಲ್ ಫೌಂಡೇಶನ್ ಎಂಬ ಕಂಪನಿ ಆರಂಭಿಸಿದ್ದರು.

ವಾಟ್ಸಾಪ್‌ ಆಕ್ಟನ್‌ ಅವರ ಟ್ವೀಟ್‌ ಬಂದ ನಂತರ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಗೌಪ್ಯತೆ ಮತ್ತು ನೀತಿ, ಮಾಹಿತಿ ದುರ್ಬಳಕೆ ಬಗ್ಗೆ ಚರ್ಚೆ ಮತ್ತೆ ಆರಂಭವಾಗಿದೆ. ಫೇಸ್ಬುಕ್ ಸಿಇಒ ಮಾರ್ಕ್ ಜ್ಯೂಕರ್ಬರ್ಗ್‌ಗೆ ಗೌಪ್ಯತಾ ನಿಯಮದ ಬಗ್ಗೆ ಸಾಕ್ಷ್ಯ ನೀಡಬೇಕು ಎಂದು ಬ್ರಿಟನ್ ಸಂಸದೀಯ ಮಾಧ್ಯಮ ಸಮಿತಿಯ ಅಧ್ಯಕ್ಷ ಡಾಮಿಯನ್ ಕಾಲಿನ್ಸ್ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+