ಸಾಲ ತುಂಬದ ವಿಜಯ್ ಮಲ್ಯರ ಮುಂಬೈ ಮನೆ ಹರಾಜು?
ಬೆಂಗಳೂರು, ಫೆಬ್ರವರಿ .20: ಸಾಲ ಮರುಪಾವತಿ ಮಾಡದ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಆಸ್ತಿ ಹರಾಜಿನ ಸಂಕಷ್ಟ ಎದುರಾಗಿದೆ. 'ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಬ್ಯಾಂಕ್ ಗಳು ವಿಜಯ್ ಮಲ್ಯರನ್ನು ಘೋಷಣೆ ಮಾಡಿದ್ದು ಅವರ ಆಸ್ತಿ ಹರಾಜಿಗೆ ಮುಂದಾಗಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 17 ಬ್ಯಾಂಕ್‌ಗಳು ಒಕ್ಕೂಟ ರಚಿಸಿ, 6,963 ಕೋಟಿ ರೂ. ಸಾಲ ಹಿಂಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿವೆ. ಆರಂಭಿಕವಾಗಿ ನಾಲ್ಕು ಬ್ಯಾಂಕ್‌ಗಳು ಹರಾಜು ಹಾಕಲು ಹಕ್ಕು ಮಂಡನೆಗೆ ಮುಂದಾಗಿವೆ. ಆದರೆ ಹಕ್ಕು ಮಂಡಿಸುವ ಬ್ಯಾಂಕ್‌ಗಳ ಹೆಸರನ್ನು ಇದುವರೆಗೆ ಬಹಿರಂಗಪಡಿಸಿಲ್ಲ.[ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]

ಕಿಂಗ್‌ಫಿಷರ್ ಏರ್‌ಲೈನ್ಸ್ ಗ್ಯಾರಂಟಿದಾರ ವಿಜಯ ಮಲ್ಯ, ಯುನೈಟೆಡ್ ಬ್ರುವರೀಸ್ ಸಂಸ್ಥೆ ಉದ್ದೇಶ ಪೂರ್ವಕ ಸುಸ್ತಿದಾರ ಎಂದು ವಾರದ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಘೋಷಿಸಿತ್ತು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾದ ಪಿಎನ್‌ಬಿಯು ಕಿಂಗ್‌ಫಿಷರ್‌ಗೆ ಸಾಲ ನೀಡಿದ 3ನೇ ಅತೀ ದೊಡ್ಡ ಹಣಕಾಸು ಸಂಸ್ಥೆಯಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಮಲ್ಯ ಅವರನ್ನು ಸುಸ್ತಿದಾರ ಎಂದು ಕರೆದಿದ್ದವು. [ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಹೂರ್ತ]
ಕಿಂಗ್‌ಫಿಷರ್ ಹೌಸ್ ಹರಾಜು
ಎಸ್‌ಬಿಐ ಒಕ್ಕೂಟ ಮುಂಬೈನಲ್ಲಿರುವ ಕಿಂಗ್ ಫಿಷರ್ ಹೌಸನ್ನು ಮುಂದಿನ ತಿಂಗಳೊಳಗಾಗಿ ಹರಾಜು ನಡೆಸಲು ನಿರ್ಧರಿಸಿದೆ. ಮುಂಬೈ ಮಹಾನಗರದ ಈ ಟ್ಟಡ 150 ಕೋಟಿ ರು. ಬೆಲೆಬಾಳಲಿದೆ. ನಿಗದಿಯಂತೆ ಮಾರ್ಚ್ 17ರಂದು ಮುಂಬೈನ ಕಿಂಗ್ ಫಿಷರ್ ಹೌಸ್ ನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ.
ಯಾವ ಯಾವ ಬ್ಯಾಂಕ್ ಗಳಲ್ಲಿ ಸಾಲ
ಸ್ಟೇಟ್ ಬ್ಯಾಂಕ್ ಆಫ್ ಇಂಡುಯಾ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮತ್ತು ಐಡಿಬಿಐಯಲ್ಲಿ ತಲಾ 800 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ, ಬ್ಯಾಂಕ್ ಆಫ್ ಬರೋಡ 550 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 410 ಕೋಟಿ, ಯುಕೋ ಬ್ಯಾಂಕ್ 320 ಕೋಟಿ, ಕಾರ್ಪೊರೇಷನ್ ಬ್ಯಾಂಕ್ 310 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 150 ಕೋಟಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ 140 ಕೋಟಿ, ಫೆಡರಲ್ ಬ್ಯಾಂಕ್ 90 ಕೋಟಿ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 60 ಕೋಟಿ ಹಾಗೂ ಆಕ್ಸಿಸ್ ಬ್ಯಾಂಕ್ ಗಳಲ್ಲಿ 50 ಕೋಟಿ ರು. ಸಾಲ ಮಾಡಿದ ಮಲ್ಯ ಸುಸ್ತಿದಾರ ಎಂದು ಹೆಸರು ಪಡೆದುಕೊಂಡಿದ್ದಾರೆ.












Click it and Unblock the Notifications