ತೆರಿಗೆ ಸಂಗ್ರಹ: ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ ತೆರಿಗೆ ಇಲಾಖೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ಕರ್ನಾಟಕ ತೆರಿಗೆ ಇಲಾಖೆಯು 2016-17ರ ಆರ್ಥಿಕ ವರ್ಷದಲ್ಲಿ ತನಗೆ ನೀಡಲಾಗಿದ್ದ ಗುರಿಯನ್ನು ಫೆ. 16ರಂದೇ ಮುಟ್ಟಿರುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ- ಗೋವಾ ಪ್ರಾದೇಶಿಕ ಮುಖ್ಯ ತೆರಿಗೆ ಆಯುಕ್ತರಾದ ನೂತನ್ ಒಡೆಯರ್ ಅವರು, ಈ ವಿಷಯ ತಿಳಿಸಿದರು.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

Karnataka IT achieves targed set by the Government before the deadline

ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನು ಕೆಲವೇ ದಿನ (ಮಾರ್ಚ್ 30) ಬಾಕಿ ಇವೆ. ಈವರೆಗೆ 13 ಸಾವಿರ ಕೋಟಿ ತೆರಿಗೆಯನ್ನು ವಸೂಲಿ ಮಾಡಲಾಗಿದೆ ಎಂದು ಆಯುಕ್ತರು ಅಂಕಿ-ಅಂಶ ಸಹಿತ ವಿವರಿಸಿದರು.

ಕಳೆದ ವರ್ಷ 2,135 ಕೋಟಿ ರು. ಪತ್ತೆಯಾಗಿದ್ದರೆ, 4, 828 ಕೋಟಿ ರು. ಆಸ್ತಿ ಪತ್ತೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ. 22.48ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದ್ದು, ನೀಡಲಾಗಿದ್ದ ಗುರಿಯನ್ನು ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೇ ಮುಟ್ಟಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ 6ನೇ ಸ್ಥಾನದಲ್ಲಿದ್ದರೆ, ವೈಯಕ್ತಿಕ ಆದಾಯ ಸಂಗ್ರಹದಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

ಶೇ. 64ರಷ್ಟು ಸಿಬ್ಬಂದಿ ಕೊರತೆ, ಸತತ ನಾಲ್ಕು ವರ್ಷಗಳ ಬರಗಾಲದ ಪರಿಸ್ಥಿತಿಗಳ ಹೊರತಾಗಿಯೂ ಇಲಾಖೆಯು ನಿಗದಿತ ಗುರಿಯನ್ನು ಮುಟ್ಟಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karanataka Income Tax department has announced that it has achieved the target befor deadline. In a press meet in Bengaluru on Monday (March 20), the Income tax regional Commissioner for Karnataka-Goa, Nutan Wodeyar announced it.
Please Wait while comments are loading...