ರಾಜ್ಯವಾರು ನಿವ್ವಳ ದೇಶಿ ಉತ್ಪಾದನೆಯಲ್ಲಿ ಕರ್ನಾಟಕವೇ ಮುಂದೆ
ನವದೆಹಲಿ, ಡಿಸೆಂಬರ್ 19: ರಾಜ್ಯಗಳ ತಲಾ ಆಂತರಿಕ ಉತ್ಪಾದನಾ (ಎನ್‌ಎಸ್‌ಡಿಪಿ) ದರದಲ್ಲಿ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ.
2017-18ನೇ ಸಾಲಿನ ಎನ್‌ಎಸ್‌ಡಿಪಿಯಲ್ಲಿ ಕರ್ನಾಟಕದ ಕೊಡುಗೆ 1,81,788 ಇದೆ. ಇದು ದೇಶದಲ್ಲಿಯೇ ಅತ್ಯಧಿಕ. ಎರಡನೆಯ ಸ್ಥಾನದಲ್ಲಿ ಇರುವ ತೆಲಂಗಾಣ 1,81,034 ರೂ ಪಾಲು ಹೊಂದಿದ್ದರೆ, ಮಹಾರಾಷ್ಟ್ರ 1,80,596 ರೂ. ನೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಸರ್ಕಾರದ ವರದಿ ತಿಳಿಸಿದೆ.
ರಾಜಧಾನಿ ದೆಹಲಿಯು ಅತ್ಯಧಿಕ ತಲಾದಾಯ ಹೊಂದಿರುವ ರಾಜ್ಯವಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ ದೆಹಲಿ 3,29,093 ರೂ. ತಲಾದಾಯ ಹೊಂದಿದೆ.

ದೇಶದ ರಾಷ್ಟ್ರೀಯ ತಲಾದಾಯ 1,12,835 ಇದ್ದು, ದೆಹಲಿ ಇದಕ್ಕಿಂದಲೂ ಅಧಿಕ ತಲಾದಾಯ ಹೊಂದಿದೆ.
ರಾಜ್ಯಗಳ ತಲಾ ಆಂತರಿಕ ಉತ್ಪಾದನೆಯಲ್ಲಿ 38,860 ರೂ. ಹೊಂದಿರುವ ಬಿಹಾರ, ಈ ಬಾರಿಯೂ ಕೊನೆಯ ಸ್ಥಾನದಲ್ಲಿದೆ.












Click it and Unblock the Notifications