ಕರ್ನಾಟಕ ಬ್ಯಾಂಕ್ ತ್ರೈಮಾಸಿಕ ನಿವ್ವಳ ಲಾಭ ಶೇಕಡಾ 10ರಷ್ಟು ಏರಿಕೆ
ಬೆಂಗಳೂರು, ಜನವರಿ 12: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಕರ್ನಾಟಕ ಬ್ಯಾಂಕ್ ಪ್ರಕಟಿಸಿದ್ದು, ನಿವ್ವಳ ಲಾಭವು ಶೇಕಡಾ 10ರಷ್ಟು ಏರಿಕೆಗೊಂಡು 135 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿ ಮಾಡಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 123 ಕೋಟಿಗಳಷ್ಟಿದ್ದು, ಶೇಕಡಾ 10ರಷ್ಟು ಲಾಭ ಸಾಧಿಸಿದೆ.
ಬ್ಯಾಂಕ್‌ನ ಆಸ್ತಿಯ ಗುಣಮಟ್ಟವು ತ್ರೈಮಾಸಿಕದಲ್ಲಿ ಒಟ್ಟು ವಸೂಲಾಗದ ಸಾಲ (ಎನ್‌ಪಿಎ) ಶೇಕಡಾ 3.16ರಷ್ಟಿದ್ದು, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 3.97ಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಎ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 2.21 ರಷ್ಟಿದ್ದರೆ, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 1.74ರಷ್ಟಿದೆ.
ಬ್ಯಾಂಕ್‌ನ ನಿವ್ವಳ ಲಾಭದ ಪ್ರಮಾಣ ಪ್ರಕಟವಾದ ಬಳಿಕ ಮಂಗಳವಾರ, ಎನ್‌ಎಸ್‌ಇಯಲ್ಲಿ ಕಂಪನಿಯ ಷೇರುಗಳ ಮೌಲ್ಯ ದಿನದ ವಹಿವಾಟು ಅಂತ್ಯಕ್ಕೆ ಶೇಕಡಾ 5.61ರಷ್ಟು ಹೆಚ್ಚಾಗಿ ಪ್ರತಿ ಷೇರು ಬೆಲೆ 67.75ಕ್ಕೆ ವಹಿವಾಟು ನಡೆಸುತ್ತಿದೆ.

ತೃತೀಯ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯವು ಶೇಕಡಾ 21ರಷ್ಟು ಏರಿಕೆಯಾಗಿದ್ದು, 508 ಕೋಟಿಯಿಂದ 614 ಕೋಟಿ ರೂಪಾಯಿಗೆ ತಲುಪಿದೆ.












Click it and Unblock the Notifications