ಟೆಲಿಕಾಂ ದರ ಸಮರ: ಬಂಪರ್ ಆಫರ್ ಘೋಷಿಸಿದ ವೋಡಾಫೋನ್
ಮುಂಬೈ, 27 : ರಿಲಯನ್ಸ್ ಜಿಯೋ ಬಂದಾಗಿನಿಂದ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಶುರುಗಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಜಿಯೋಗೆ ಪ್ರತಿಸ್ಫರ್ಧಿಯಾಗಿ ವೋಡಾಫೋನ್ ಹೊಸ ಕೊಡುಗೆ ನೀಡಲು ಮುಂದಾಗಿದೆ.
ವೋಡಾಫೋನ್ ಹೊಸ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ 244 ರು. ಗೆ 70 ಜಿಬಿ 4ಜಿ ಉಚಿತ ಡಾಟಾ ಹಾಗೂ ಅನಿಯಮಿತ ವಾಯ್ಸ್ ಕರೆಗಳ ಹೊಸ ಕೊಡುಗೆಯನ್ನು ಘೋಷಿಸಿದೆ.

244 ರು. ರಿಚಾರ್ಜ್ ಮಾಡಿಸಿದರೆ 70 ಜಿಬಿ 4ಜಿ ಉಚಿತ ಡಾಟಾ ಹಾಗೂ ಅನಿಯಮಿತ ವಾಯ್ಸ್ ಕರೆಗಳನ್ನು ಮಾಡಬಹುದಾದಗಿದೆ ಅದು 70ದಿನಗಳ (3 ತಿಂಗಳು) ವರೆಗೆ ವ್ಯಾಲಿಡಿಟಿ.
ಈ ಕೊಡುಗೆಯಲ್ಲಿ ಹೊಸ ಗ್ರಾಹಕರು 2ನೇ ಬಾರಿ ರಿಚಾರ್ಜ್ ಮಾಡಿಸಿದಲ್ಲಿ ಅನಿಯಮಿತ ಕರೆಗಳು ಮತ್ತು ದಿನಕ್ಕೊಂದು ಜಿಬಿ ಡಾಟಾ ದೊರೆಯಲಿದೆ. ಆದರೆ, ಇದರ ವ್ಯಾಲಿಡಿಟಿ 35 ದಿನಗಳಿಗೆ ಮಾತ್ರ ಸಿಮೀತವಾಗಿರುತ್ತದೆ.
ಅದೇ ರೀತಿ 346 ರು. ರಿಚಾರ್ಜ್ ಮಾಡಿಸಿದರೆ ನಿತ್ಯ 1 ಜಿಬಿ 4ಜಿ ಡಾಟಾ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ ದಿನಕ್ಕೆ 300 ನಿಮಿಷ ಹಾಗೂ ವಾರಕ್ಕೆ 1,200 ನಿಮಿಷ ಉಚಿತ ವಾಯ್ಸ್ ಕರೆಗಳು 56 ದಿನಗಳ ವರೆಗೆ ವ್ಯಾಲಿಡಿಟಿ.












Click it and Unblock the Notifications