ಜಿಯೋ-ಬ್ಲ್ಯಾಕ್‌ರಾಕ್‌ನಿಂದ 5 ರೀತಿಯ ಹೊಸ ಫಂಡ್ಸ್ ಆಫರ್
ಜಿಯೋ ಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೊಸ ಫಂಡ್ ಆಫರ್ (ಎನ್‌ಎಫ್‌ಒ) ಅಡಿಯಲ್ಲಿ ಐದು ಇಂಡೆಕ್ಸ್ ಫಂಡ್‌ಗಳನ್ನ ಪ್ರಾರಂಭಿಸಿದೆ. ಈ ಹೊಸ ಫಂಡ್‌ಗಳು ಜಿಯೋಬ್ಲ್ಯಾಕ್‌ರಾಕ್ ನಿಫ್ಟಿ 50 ಇಂಡೆಕ್ಸ್ ಫಂಡ್, ಜಿಯೋಬ್ಲ್ಯಾಕ್‌ರಾಕ್ ನಿಫ್ಟಿ ನೆಕ್ಸ್ಟ್ 50 ಇಂಡೆಕ್ಸ್ ಫಂಡ್, ಜಿಯೋಬ್ಲ್ಯಾಕ್‌ರಾಕ್ ನಿಫ್ಟಿ ಮಿಡ್‌ಕ್ಯಾಪ್ 150 ಇಂಡೆಕ್ಸ್ ಫಂಡ್, ಜಿಯೋಬ್ಲ್ಯಾಕ್‌ರಾಕ್ ನಿಫ್ಟಿ ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಫಂಡ್ ಮತ್ತು ಜಿಯೋಬ್ಲ್ಯಾಕ್‌ರಾಕ್ ನಿಫ್ಟಿ ಜಿ-ಎಸ್‌ಇಸಿ ಇಂಡೆಕ್ಸ್ ಫಂಡ್ ಎಂಬ ಆಯ್ಕೆಗಳನ್ನು ನೀಡಿದೆ.
ಹೊಸ ಫಂಡ್ ಆಫರ್ ಆಗಸ್ಟ್ 5ರಿಂದ ಪ್ರಾರಂಭವಾಗಿ ಆಗಸ್ಟ್ 12ರವರೆಗೆ ಲಭ್ಯವಿರುತ್ತದೆ. ಜಿಯೋ ಬ್ಲ್ಯಾಕ್‌ರಾಕ್ ಆಸ್ತಿ ನಿರ್ವಹಣಾ ಕಂಪನಿಯು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಮತ್ತು ಬ್ಲ್ಯಾಕ್‌ರಾಕ್ ಮಧ್ಯದ ಜಂಟಿ ಉದ್ಯಮವಾಗಿದೆ. ಹೂಡಿಕೆಯ ಎಲ್ಲ ಹಂತಗಳಲ್ಲಿ ಹೂಡಿಕೆದಾರರಿಗೆ ಸೇವೆ ಸಲ್ಲಿಸುವುದು ಜಿಯೋಬ್ಲ್ಯಾಕ್‌ರಾಕ್‌ನ ಧ್ಯೇಯವಾಗಿದೆ ಎಂದು ಜಿಯೋಬ್ಲ್ಯಾಕ್‌ರಾಕ್ ಆಸ್ತಿ ನಿರ್ವಹಣೆ ಸಿಇಒ ಸಿದ್ ಸ್ವಾಮಿನಾಥನ್ ಹೇಳಿದ್ದಾರೆ.

ಈ ಎನ್‌ಎಫ್‌ಒ ಭಾರತೀಯರಿಗೆ ನಮ್ಮ ಡಿಜಿಟಲ್-ಮೊದಲು ಮತ್ತು ಡೇಟಾ-ಚಾಲಿತ ಆಫರ್ ಲಾಭವನ್ನು ಪಡೆಯಲು ಆಹ್ವಾನವಾಗಿದೆ. ಬ್ಲ್ಯಾಕ್‌ರಾಕ್ ಇಂಡೆಕ್ಸ್ ಫಂಡ್‌ಗಳಲ್ಲಿ ದಶಕಗಳ ಅನುಭವವನ್ನು ಹೊಂದಿದೆ. ಭಾರತದಲ್ಲಿ ಎಲ್ಲರಿಗೂ ಹೂಡಿಕೆ ಮಾಡುವುದಕ್ಕೆ ಅವಕಾಶ ದೊರೆಯುವಂತೆ ಮಾಡಲು ಹಾಗೂ ನಾವು ಎಲ್ಲ ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಶೈಕ್ಷಣಿಕ ಉಪಕ್ರಮಗಳ ಸರಣಿಯನ್ನು ಸಹ ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.
ಜಿಯೋಬ್ಲ್ಯಾಕ್‌ರಾಕ್ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಸ್ಥಿರವಾಗಿ ಬಲಪಡಿಸುತ್ತಿದೆ. ಜೂನ್ 30ರಂದು ಕಂಪನಿಯು ಮೂರು ಡೆಟ್ ಫಂಡ್‌ಗಳನ್ನು ಪ್ರಾರಂಭಿಸಿತು. ಕಂಪನಿಯು ಈ ಮೂರು ಫಂಡ್‌ಗಳ ಎನ್‌ಎಫ್‌ಒನಲ್ಲಿ ದಾಖಲೆಯ 17,500 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಒಟ್ಟಾರೆಯಾಗಿ ಜಿಯೋ ಇಲ್ಲಿಯವರೆಗೆ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಎಂಟು ಫಂಡ್‌ಗಳನ್ನು ಪ್ರಾರಂಭಿಸಿದೆ.
ಜಿಯೋಬ್ಲಾಕ್‌ರಾಕ್‌ನ ಸೂಚ್ಯಂಕ ಫಂಡ್‌ಗಳು ಗ್ರೋವ್, ಝೆರೋಧಾ, ಪೇಟಿಎಂ, ಇಂಡ್‌ಮನಿ, ಧನ್, ಕುವೇರಾ ಮತ್ತು ಇತರ ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರು ಸೇರಿದಂತೆ ಪ್ರಮುಖ ಡಿಜಿಟಲ್ ಹಣಕಾಸು ಪ್ಲಾಟ್ ಫಾರ್ಮ್‌ಗಳಲ್ಲಿ, ಜಿಯೋಫೈನಾನ್ಸ್ ಅಪ್ಲಿಕೇಷನ್ ಜೊತೆಗೆ ಹೂಡಿಕೆಗೆ ಲಭ್ಯವಿದೆ ಎಂದು ಮಾಹಿತಿ ನೀಡಿದೆ.
ಜಿಯೋ ಬ್ಲ್ಯಾಕ್‌ರಾಕ್ ಆಸ್ತಿ ನಿರ್ವಹಣೆಯು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಬ್ಲ್ಯಾಕ್‌ರಾಕ್ ನಡುವಿನ 50:50 ಜಂಟಿ ಉದ್ಯಮವಾಗಿದೆ. ಬ್ಲ್ಯಾಕ್‌ರಾಕ್‌ನ ಜಾಗತಿಕ ಹೂಡಿಕೆ ಪರಿಣತಿ ಮತ್ತು ಪ್ರಮುಖ ಅಪಾಯ ನಿರ್ವಹಣಾ ತಂತ್ರಜ್ಞಾನವನ್ನು ಜೆಎಫ್‌ಎಸ್‌ಎಲ್‌ನ ಡಿಜಿಟಲ್ ವ್ಯಾಪ್ತಿ ಮತ್ತು ಭಾರತದಲ್ಲಿನ ಸ್ಥಳೀಯ ಮಾರುಕಟ್ಟೆಯ ಜ್ಞಾನದೊಂದಿಗೆ ಸಂಯೋಜಿಸಲು ಇದು ಪ್ರಯತ್ನಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications