ಇನ್ಫೋಸಿಸ್ ಷೇರು ಜಿಗಿತ: 1 ಗಂಟೆಯಲ್ಲಿ 50,000 ಕೋಟಿ ಗಳಿಸಿದ ಹೂಡಿಕೆದಾರರು
ನವದೆಹಲಿ, ಜುಲೈ 16: ಗುರುವಾರದ ವ್ಯವಹಾರದಲ್ಲಿ, ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಷೇರುಗಳು ಶೇಕಡಾ 15 ರಷ್ಟು ಜಿಗಿದು ಸಾರ್ವಕಾಲಿಕ ಗರಿಷ್ಠ 952 ರುಪಾಯಿಗೆ ತಲುಪಿದೆ. ಅದ್ಭುತ ಆರ್ಥಿಕ ಫಲಿತಾಂಶಗಳು ಕಂಪನಿಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಇನ್ಫೋಸಿಸ್‌ನ ಆರ್ಥಿಕ ಫಲಿತಾಂಶಗಳು ಉತ್ತಮವಾಗಿವೆ.
Recommended Video
ಇನ್ಫೋಸಿಸ್ ಷೇರುಗಳು ಗುರುವಾರ ಏಳು ವರ್ಷಗಳಿಗಿಂತ ಹೆಚ್ಚು ಅವಧಿಯಲ್ಲಿ ತನ್ನ ಅತ್ಯುತ್ತಮ ದಿನದತ್ತ ಸಾಗುತ್ತಿದೆ. ದಿನದ ವಹಿವಾಟು ಆರಂಭದ ಮೊದಲ ಗಂಟೆಯಲ್ಲಿ ಹೂಡಿಕೆದಾರರ ಸಂಪತ್ತು 50000 ಕೋಟಿ ರುಪಾಯಿ ಏರಿಕೆಗೊಂಡಿತು.
ಇನ್ಫೋಸಿಸ್ ಷೇರುಗಳು ಇಂದು 900 ರೂ.ಗೆ ಪ್ರಾರಂಭವಾಗಿದ್ದು, ಹಿಂದಿನ ಮುಕ್ತಾಯದ 831.45 ರೂ.ಗಿಂತ ಶೇ .8.24 ರಷ್ಟು ಏರಿಕೆ ಕಂಡಿತು. ನಂತರ ವಹಿವಾಟಿದಲ್ಲಿ ದಿನದ ಗರಿಷ್ಟ 952 ರೂ.ಗೆ ತಲುಪಿ, ದಿನದ ವಹಿವಾಟು ಅಂತ್ಯಕ್ಕೆ 911 ರುಪಾಯಿಗೆ ತಲುಪಿದೆ. ಇನ್ಫೋಸಿಸ್ ಷೇರು ಬೆಲೆ ಒಂದು ವಾರದಲ್ಲಿ ಶೇ. 15.7, ತಿಂಗಳಲ್ಲಿ ಶೇ. 29 ಮತ್ತು 2020 ರ ಆರಂಭದಿಂದ ಶೇ. 23ರಷ್ಟು ಏರಿಕೆಯಾಗಿದೆ.

ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರರಾದ ಇನ್ಫೋಸಿಸ್ ಜೂನ್ 30 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 4,233 ಕೋಟಿ ರುಪಾಯಿ ಲಾಭ ಗಳಿಸಿದೆ. ಈ ಅವಧಿಯಲ್ಲಿ ಇನ್ಫೋಸಿಸ್ ಆದಾಯವು ಶೇಕಡಾ 8.5 ರಷ್ಟು ಏರಿಕೆಯಾಗಿ 21,803 ಕೋಟಿ ರೂ.ಗಳಿಂದ 23,665 ಕೋಟಿ ರುಪಾಯಿಗೆ ತಲುಪಿದೆ.












Click it and Unblock the Notifications