ನ.30ಕ್ಕೆ ಇನ್ಫೋಸಿಸ್ ನಿಂದ 13 ಸಾವಿರ ಕೋಟಿ ಷೇರು ಹಿಂತೆಗೆತ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 19: ದೇಶದ ಎರಡನೇ ಅತಿದೊಡ್ಡ ಕಂಪನಿ ಇನ್ಫೋಸಿಸ್ ಷೇರು ಮರು ಖರೀದಿಗೆ ಹೊಸ ಮುಹೂರ್ತ ನಿಗದಿ ಪಡಿಸಿದೆ. ನವೆಂಬರ್ 30ಕ್ಕೆ ಷೇರು ಬೈಬ್ಯಾಕ್ ಆರಂಭಗೊಳ್ಳಲಿದ್ದು, ಡಿಸೆಂಬರ್ 14ಕ್ಕೆ ಕೊನೆಗೊಳ್ಳಲಿದೆ.

ಈಗ ಇನ್ಫೋಸಿಸ್ ನಲ್ಲಿ ಎಲ್ಲ ಸರಿ ಇದೆ ಎಂದ ನಾರಾಯಣಮೂರ್ತಿ

ಸರಿ ಸುಮಾರು 13 ಸಾವಿರ ಕೋಟಿ ರುಪಾಯಿಯಷ್ಟು ಕಂಪನಿ ಷೇರುಗಳನ್ನು ಮರು ಖರೀದಿ ಮಾಡಲಾಗುತ್ತದೆ. ಯಾರ ಡಿಮ್ಯಾಟ್ ಖಾತೆಯಲ್ಲಿ ಇನ್ಫೋಸಿಸ್ ಷೇರುಗಳು ಆ ದಿನಂದು (ನವೆಂಬರ್ 30) ಇರುತ್ತವೋ ಅಂಥವರಿಗೆ ಷೇರು ಮರು ಖರೀದಿಯ ಪ್ರಸ್ತಾವ ಮಾಡಲಾಗುತ್ತದೆ.

Infosys Rs 13,000 crore buyback to open on November 30

ಕಂಪನಿ ಷೇರುಗಳ ಖರೀದಿಗೆ ಬೋರ್ಡ್ ನಿಂದ ಆಗಸ್ಟ್ 19ಕ್ಕೆ ಒಪ್ಪಿಗೆ ಸಿಕ್ಕಿತ್ತು. ಷೇರುದಾರರಿಂದ ಸೋಮವಾರದಂದು ಒಪ್ಪಿಗೆ ಸಿಕ್ಕಾಗಿದೆ. ಇನ್ಫೋಸಿಸ್ ನ ಮೂವತ್ತಾರು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 11.30 ಕೋಟಿ ಷೇರುಗಳನ್ನು ತಲಾ ರು. 1,150ಕ್ಕೆ ಮರು ಖರೀದಿ ಮಾಡುತ್ತಿದೆ.

ಕಂಪನಿಯ ಕೆಲವು ಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳು ಷೇರು ಮರು ಖರೀದಿಗೆ ಬೇಡಿಕೆ ಇಟ್ಟಿದ್ದರು. ಹೆಚ್ಚುವರಿ ಬಂಡವಾಳವನ್ನು ಷೇರುದಾರರಿಗೆ ಹಿಂತಿರುಗಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿತ್ತು. ಈ ರೀತಿ ಷೇರು ಮರು ಖರೀದಿ ಮಾಡಿದರೆ ಇಪಿಎಸ್(ಅರ್ನಿಂಗ್ ಪರ್ ಷೇರ್) ಹೆಚ್ಚಾಗುತ್ತದೆ.

ಸದ್ಯಕ್ಕೆ ಕಂಪನಿ ಬಳಿ 6.1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೆಚ್ಚು ನಗದು ಇದೆ. ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಷೇರು ಹಿಂತೆಗೆತದ ನಂತರ ಈ ನಗದ ಪ್ರಮಾಣ ಮೂರನೇ ಒಂದು ಭಾಗದಷ್ಟು ಕಡಿಮೆ ಆಗುತ್ತದೆ.

ಇತ್ತೀಚೆಗೆ ಟಿಸಿಎಸ್ ಕಂಪನಿ 16 ಸಾವಿರ ಕೋಟಿ, ವಿಪ್ರೋ 11 ಸಾವಿರ ಕೋಟಿ ಹಾಗೂ ಎಚ್ ಸಿಎಲ್ ಟೆಕ್ನಾಲಜಿ 3,500 ಕೋಟಿ ಮೌಲ್ಯದ ಷೇರು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's second largest IT company Infosys today said its Rs 13,000-crore buyback offer will open on November 30 and end on December 14.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ