N.R.Narayana Murthy: ಬೆಂಗಳೂರಿನಲ್ಲಿ ₹50 ಕೋಟಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಇನ್ಫೋಸಿಸ್ ನಾರಾಯಣಮೂರ್ತಿ
N.R.Narayana Murthy: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಮೂರ್ತಿಯವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂದು ಹೇಳುವ ಮೂಲಕ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದ್ನು ಖರೀದೀ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹಾಗಾದರೆ ಎಲ್ಲಿ ಹಾಗೂ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ 50,00,00,000 ರೂಪಾಯಿ ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ ಮಾಡುವ ಮೂಲಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಿಂಗ್‌ಫಿಶರ್ ಟವರ್ಸ್‌ನಲ್ಲಿ ಐಷಾರಾಮಿ ಫ್ಲಾಟ್‌ವೊಂದಬ್ನು ಖರೀದಿಸಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.

ಭಾರತದ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರು ತಮ್ಮ ವ್ಯಾಪಾರ ವ್ಯವಹಾರ, ಸಿದ್ಧಾಂತಗಳಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂಪಾಯಿ ಷೇರು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಖರೀದಿಸಿ ಗಮನ ಸೆಳೆದಿದ್ದಾರೆ.
ಐಷಾರಾಮಿ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಖರೀದಿ: ನಗರದ ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಶರ್ ಟವರ್ಸ್‌ನಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ದುಬಾರಿ ಬೆಲೆಯ ತನ್ನ ಎರಡನೇ ಅಪಾರ್ಟ್‌ಮೆಂಟ್ ಅನ್ನು ಖರೀದಿ ಮಾಡಿದ್ದಾರೆ. 4.5 ಹೆಕ್ಟೇರ್ ಜಾಗದಲ್ಲಿ ನಿರ್ಮಿಸಲಾಗಿರುವ 34 ಅಂತಸ್ತಿತ ಐಶಾರಾಮಿ ಕಟ್ಟಡವಾದ ಕಿಂಗ್‌ಫಿಶರ್ ಟವರ್ಸ್‌ನಲ್ಲಿ ನಾರಾಯಣ ಮೂರ್ತಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್‌ವೊಂದನ್ನಿ ಖರೀದಿಸಿದ್ದಾರೆ.
ಕಿಂಗ್‌ಫಿಶರ್ ಟವರ್‌ನ 16ನೇ ಮಹಡಿಯಲ್ಲಿರುವ ಹಾಗೂ 8,400 ಚದರ ಅಡಿಗಳಷ್ಟು ಜಾಗದಲ್ಲಿರುವ ಈ ದುಬಾರಿ ಫ್ಲಾಟ್ 4 ಮಲಗುವ ಕೋಣೆಗಳು, 5 ಕಾರ್ ಪಾರ್ಕಿಂಗ್ ವ್ಯವಸ್ಥೆಗಳನ್ನು ಹೊಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 50 ಕೋಟಿ ಬೆಲೆಯ ಈ ದುಬಾರಿ ಅಪಾರ್ಟ್‌ಮೆಂಟ್‌ನ ಪ್ರತಿ ಚದರ ಅಡಿ ವೆಚ್ಚವು 59,500 ರೂಪಾಯಿಗಳಿಷ್ಟಿದೆ. ಇದು ನಗರದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾಗಿದೆ.
ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಇದೇ ಕಾಂಪ್ಲೆಕ್ಸ್‌ನ 23ನೇ ಮಹಡಿಯಲ್ಲಿರುವ ಪ್ಲಾಟ್‌ವೊಂದನ್ನು 2020ರಲ್ಲಿ 29 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಇದೀಗ ನಾರಾಯಣ ಮೂರ್ತಿ ಅವರು ಇದೇ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50,00,00,000 ರೂಪಾಯಿ ಬೆಲೆಯ ಐಷಾರಾಮಿ ಫ್ಲಾಟ್ ಖರೀದಿಸಿ ಗಮನ ಸೆಳೆದಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಯಾರೆಲ್ಲಾ ವಾಸವಿದ್ದಾರೆ?: ಈ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಕೋಟ್ಯಾಧಿಪತಿಗಳು ವಾಸವಾಗಿದ್ದಾರೆ. ಬಯೋಕಾನ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಕಿರಣ ಮಜುಂದಾರ್ ಶಾ, ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ಅಮೇರಿಕಾ ಮೂಲದ ಉದ್ಯಮಿ ಕೃಷ್ಣ ಚಿವುಕುಲ ಅವರಂತಹ ಹಲವು ಪ್ರಮುಖರು ಇಲ್ಲಿ ವಾಸ ಇದ್ದಾರೆ ಎಂದು ತಿಳಿದುಬಂದಿದೆ.
ಒಂದು ಕಾಲದಲ್ಲಿ ಆರ್‌ಸಿಬಿ ತಂಡದ ಮಾಲಿಕತ್ವವನ್ನು ವಹಿಸಿಕೊಂಡಿದ್ದ ವಿಜಯ್ ಮಲ್ಯ ಅವರ ಪೂರ್ವಜರ ಇಲ್ಲಿನ ಭೂಮಿಯನ್ನು 2010ರಲ್ಲಿ ಪ್ರೆಸ್ಟೀಜ್ ಗ್ರೂಪ್ ಮತ್ತು ಮಲ್ಯ ಕಂಪನಿಯ ಜಂಟಿ ಉದ್ಯಮದಲ್ಲಿ ಅಭಿವೃದ್ಧಿಪಡಿಸಲಾಯಿತು. ಈ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಆರಂಭದಲ್ಲಿ ಚದರ ಅಡಿಗೆ ₹22,000 ಲೆಕ್ಕಾದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಈ ಬೆಲೆ ದುಪ್ಪಟ್ಟಾಗಿದೆ.
ಈ ವರ್ಷದ ಆರಂಭದಲ್ಲಿ ಬೆಂಗಳೂರು ಮೂಲದ ಕಂಪನಿ ಕ್ವೆಸ್ ಕಾರ್ಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಅವರು ಐಟಿ ರಾಜಧಾನಿಯ ಕೋಟ್ಯಾಧಿಪತಿಗಳು ನೆಲೆಯೂರಿರುವ ಕೋರಮಂಗಲ ಪ್ರದೇಶದಲ್ಲಿ ₹67.5 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದರು. ಇಲ್ಲಿ ಇದೀಗ ಪ್ರತಿ ಚದರ ಅಡಿ ಭೂಮಿ ಬೆಲೆ ಸುಮಾರು ₹70,300 ಆಗಿದ್ದು, ಇದು ಬೆಂಗಳೂರಿನಲ್ಲಿ ಇದುವರೆಗಿನ ಅತ್ಯಂತ ದುಬಾರಿ ಪ್ರದೇಶದ ಸಾಲಿನಲ್ಲಿದೆ.












Click it and Unblock the Notifications