ಇಂಡಿಗೋ 'ಬೇಸಿಗೆ ಆಫರ್', ಕಡಿಮೆ ಮೊತ್ತದಲ್ಲಿ ವಿಮಾನಯಾನ
ನವದೆಹಲಿ, ಜೂನ್ 11: ಕಡಿಮೆ ಬಜೆಟ್ ವಿಮಾನಯಾನ ಒದಗಿಸುವ ಇಂಡಿಗೋ ಏರ್ ಲೈನ್ 'ಬೇಸಿಗೆ ಆಫರ್' ಘೋಷಿಸಿದೆ. ನಾಲ್ಕು ದಿನಗಳ ವಿಶೇಷ ಕೊಡುಗೆ ಇದಾಗಿದೆ. ಜೂನ್ 16 ರಿಂದ ಸೆಪ್ಟೆಂಬರ್ 28ರ ಅವಧಿಯಲ್ಲಿ ಪ್ರಯಾಣಿಸಬೇಕಾಗುತ್ತದೆ.
'ಜೂನ್ 11, 2019 ರಿಂದ ಜೂನ್ 14, 2019ರ ಅವಧಿಯಲ್ಲಿ ಇಂಡಿಗೋ ಗ್ರಾಹಕರು ಟಿಕೆಟ್ ಬುಕ್ ಮಾಡಬಹುದಾಗಿದೆ. ದೇಶಿ ಪ್ರಯಾಣ ದರ 999 ರು ನಿಂದ ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ವಿಮಾನಯಾನದ ದರ 3499 ರು ನಿಂದ ಆರಂಭವಾಗಲಿದೆ. ಪ್ರಯಾಣಿಕರು ಜೂನ್ 16 ರಿಂದ ಸೆಪ್ಟೆಂಬರ್ 28ರ ಅವಧಿಯಲ್ಲಿ ಮಾತ್ರ ಪ್ರಯಾಣಿಸಬಹುದು ಎಂದು ಇಂಡಿಗೋ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಡಿಜಿಸಿಎ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಂತೆ, ದೇಶಿ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಶೇ 50ರಷ್ಟು ಪಾಲು ಹೊಂದಿದೆ.

'ಕಳೆದ ತಿಂಗಳ ಟಿಕೆಟ್ ಮಾರಾಟ ಉತ್ತಮವಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಅನುಗುಣವಾಗಿ ವಿಶೇಷ ಸಮ್ಮರ್ ಆಫರ್ ನೀಡುತ್ತಿದ್ದೇವೆ' ಎಂದು ಇಂಡಿಗೋ ಸಂಸ್ಥೆ ಮುಖ್ಯ ಕಮರ್ಷಿಯಲ್ ಅಧಿಕಾರಿ ವಿಲಿಯಂ ಬೌಲ್ಟರ್ ಪ್ರತಿಕ್ರಿಯಿಸಿದ್ದಾರೆ.
'ಕೊನೆ ಕ್ಷಣದಲ್ಲಿ ವಿಹಾರ ಯಾತ್ರೆಗಾಗಿ ಟಿಕೆಟ್ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಕೊಡುಗೆಗಳನ್ನು ನೀಡಲಾಗುತ್ತಿದೆ' ಎಂದು ಇಂಡಿಗೋ ಸಂಸ್ಥೆ ಹೇಳಿದೆ.












Click it and Unblock the Notifications