ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ತೈಲ ಆಮದು ಭಾರೀ ಇಳಿಕೆ:ಕಳೆದ 8 ವರ್ಷಗಳಲ್ಲಿ ಅತ್ಯಂತ ಕಡಿಮೆ

|
Google Oneindia Kannada News

ನವದೆಹಲಿ, ಜೂನ್ 24: ಕೊರೊನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತದಲ್ಲಿ ಮೇ ತಿಂಗಳಲ್ಲಿ ತೈಲ ಆಮದು ತೀವ್ರವಾಗಿ ಕುಸಿದಿದ್ದು, ಇದು ಎಂಟು ವರ್ಷಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಭಾರತೀಯ ತೈಲ ಕಂಪನಿಗಳು ಮೇ ತಿಂಗಳಲ್ಲಿ ದಿನಕ್ಕೆ 3.18 ಬ್ಯಾರೆಲ್ ತೈಲವನ್ನು (ಬಿಪಿಡಿ) ಆಮದು ಮಾಡಿಕೊಳ್ಳುತ್ತಿದ್ದು, ಏಪ್ರಿಲ್‌ನಿಂದ ಇದು 31 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷಕ್ಕಿಂತ 26 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೀರಿಸಿದ ಡೀಸೆಲ್ ದರದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೀರಿಸಿದ ಡೀಸೆಲ್ ದರ

ಕಡಿಮೆ ಬೆಲೆಯಲ್ಲಿ ತೈಲ ಸಂಗ್ರಹ

ಕಡಿಮೆ ಬೆಲೆಯಲ್ಲಿ ತೈಲ ಸಂಗ್ರಹ

ಕರೋನಾ-ಲಾಕ್‌ಡೌನ್‌ನಿಂದಾಗಿ ತೈಲ ಬೇಡಿಕೆ ಅನಿರೀಕ್ಷಿತ ಮಟ್ಟಕ್ಕೆ ಇಳಿದಿದೆ. ಇದರ ಜೊತೆಗೆ ಕಡಿಮೆ ಬೆಲೆಯಲ್ಲಿ ತೈಲ ಸಂಗ್ರಹ ಮಾಡಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಅಂತರರಾಷ್ಟ್ರೀಯ ತೈಲ ಬೆಲೆಗಳು ಕೂಡ ಕುಸಿದಿವೆ. ಭಾರತೀಯ ಸಂಸ್ಕರಣಾಗಾರಗಳು ಏಪ್ರಿಲ್‌ನಲ್ಲಿ ಕಡಿಮೆ ಬೆಲೆಯಲ್ಲಿ ತೈಲ ಸಂಗ್ರಹಿಸಿವೆ. ಸಂಸ್ಕರಣಾಗಾರಗಳು ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳ ಮುಂಚಿತವಾಗಿ ಕಾಯ್ದಿರಿಸುತ್ತವೆ. ಆದರೆ ಕೆಲವರು ಮುಂದೂಡಿದ್ದಾರೆ. ಮೇ ತಿಂಗಳಲ್ಲಿ ಸತತ ಎರಡನೇ ತಿಂಗಳು ತೈಲ ಆಮದು ಮಾಡಿಕೊಳ್ಳುವ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಆದರೆ, ತೈಲ ಆಮದು ಏಪ್ರಿಲ್‌ನಿಂದ 28 ಪರ್ಸೆಂಟ್‌ರಷ್ಟು ಕುಸಿದಿದೆ.

ರಿಲಯನ್ಸ್ ಸೇರಿದಂತೆ ಬೃಹತ್ ಕಂಪನಿಗಳ ಆಮದು ತಗ್ಗಿದೆ

ರಿಲಯನ್ಸ್ ಸೇರಿದಂತೆ ಬೃಹತ್ ಕಂಪನಿಗಳ ಆಮದು ತಗ್ಗಿದೆ

ಇರಾಕ್‌ನಿಂದ ಭಾರತೀಯ ತೈಲ ಆಮದು ದಿನಕ್ಕೆ 43 ಪರ್ಸೆಂಟ್‌ರಷ್ಟು ಇಳಿದು 5,54,000 ಬ್ಯಾರೆಲ್‌ಗೆ ತಲುಪಿದೆ. ಇದು ಅಕ್ಟೋಬರ್ 2016 ರ ನಂತರದ ಅತ್ಯಂತ ಕಡಿಮೆ. ವೆನೆಜುವೆಲಾದ ತೈಲ ಆಮದು 2011 ರ ಮೇ ತಿಂಗಳಿನಿಂದ ಹೋಲಿಸಿದರೆ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ವಿಶ್ವದ ಅತಿದೊಡ್ಡ ಸಂಸ್ಕರಣಾಗಾರ ಸಂಕೀರ್ಣವಾದ ರಿಲಯನ್ಸ್ ಇಂಡಸ್ಟ್ರೀಸ್ ಮೇ ತಿಂಗಳಲ್ಲಿ ವೆನೆಜುವೆಲಾದಿಂದ 2 ಮಿಲಿಯನ್ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿತ್ತು. ಮತ್ತೊಂದು ಖಾಸಗಿ ಸಂಸ್ಕರಣಾಗಾರ, ನಯಾರಾ ಎನರ್ಜಿ, ಮೇ ತಿಂಗಳಲ್ಲಿ ಲ್ಯಾಟಿನ್ ಅಮೆರಿಕನ್ ರಾಷ್ಟ್ರದಿಂದ ತೈಲ ಆಮದು ಮಾಡಿಕೊಳ್ಳಲಿಲ್ಲ. ಅಮೆರಿಕದ ನಿರ್ಬಂಧದ ಹಿನ್ನೆಲೆಯಲ್ಲಿ ಆಮದು ಸ್ಥಗಿತಗೊಂಡಿದೆ.

ಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿ

ಒಪೆಕ್ ರಾಷ್ಟ್ರಗಳಿಂದ ತೈಲ ಆಮದು ಇಳಿಕೆ

ಒಪೆಕ್ ರಾಷ್ಟ್ರಗಳಿಂದ ತೈಲ ಆಮದು ಇಳಿಕೆ

ಜಾಗತಿಕ ತೈಲ ಬೇಡಿಕೆ ಕುಸಿದಿರುವುದರಿಂದ ಒಪೆಕ್ ಮತ್ತು ವೆನೆಜುವೆಲಾ ಸೇರಿದಂತೆ ಇತರ ತೈಲ ಉತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ಕಡಿಮೆ ಮಾಡಿವೆ. ಕಚ್ಚಾ ತೈಲವನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ಒಪೆಕ್ ತೈಲ ಆಮದು 71.3 ಪರ್ಸೆಂಟ್‌ರಷ್ಟು ಕುಸಿದಿದೆ. ಅದೇ ಸಮಯದಲ್ಲಿ, ಯುಎಸ್ ತೈಲ ಪಾಲು ಮೇನಲ್ಲಿ ದಾಖಲೆಯ ಎಂಟು ಪರ್ಸೆಂಟ್ ತಲುಪಿದೆ.

ಆರ್ಥಿಕತೆಗಳು ಮತ್ತೆ ತೆರೆದಂತೆ ಜೂನ್‌ನಲ್ಲಿ ತೈಲ ಆಮದು ಹೆಚ್ಚಾಗುವ ನಿರೀಕ್ಷೆಯಿದೆ. ನಾಲ್ಕು ವರ್ಷಗಳಲ್ಲಿ, ಯುಎಸ್ ಆರನೇ ತೈಲ ಪೂರೈಕೆದಾರವಾಯಿತು. 2017 ರಿಂದ ಆಮದು ಪ್ರಾರಂಭವಾಗಿದೆ. ಮೊದಲ ಹಣಕಾಸು ವರ್ಷದಲ್ಲಿ ಇದು ದಿನಕ್ಕೆ 38,000 ಬ್ಯಾರೆಲ್ ಆಗಿದ್ದು, 2018-19ರ ವೇಳೆಗೆ ಅದು 1,24,000 ಬ್ಯಾರೆಲ್‌ಗಳನ್ನು ತಲುಪಿದೆ.

ಸೌದಿ ಅರೇಬಿಯಾದಿಂದ ತೈಲ ಪಡೆದಿದ್ದೇ ಹೆಚ್ಚು

ಸೌದಿ ಅರೇಬಿಯಾದಿಂದ ತೈಲ ಪಡೆದಿದ್ದೇ ಹೆಚ್ಚು

ಸತತ ಎರಡನೇ ತಿಂಗಳು ಸೌದಿ ಅರೇಬಿಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ದೇಶಾದ್ಯಂತ ಪೂರೈಕೆ ಏಪ್ರಿಲ್‌ನಿಂದ 28 ಪರ್ಸೆಂಟ್‌ರಷ್ಟು ಕುಸಿಯಿತು. ರಾಯಿಟರ್ಸ್ ಸಂಗ್ರಹಿಸಿದ ರಾಯಿಟರ್ಸ್ ಮಾಹಿತಿಯ ಪ್ರಕಾರ, ಇದು ಅಕ್ಟೋಬರ್ 2016 ರ ನಂತರದ ಅತ್ಯಂತ ಕಡಿಮೆ ದರವಾಗಿದೆ.

English summary
India's oil imports in May hit the lowest since Oct 2011 as refiners with brimming storage cut purchases after a continuous decline in fuel demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X