Gold Price Pridiction 2026: ಈ ಕಾರಣಗಳಿಂದ 10 ಗ್ರಾಂ ಚಿನ್ನದ ದರ ₹2,10,000ಕ್ಕೆ ಏರಿಕೆ ಸಾಧ್ಯತೆ
ನವದೆಹಲಿ: ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಸದ್ಯ ಚಿನ್ನವು ಪ್ರತಿ 1 ಔನ್ಸ್‌ಗೆ (31.103 ಗ್ರಾಂ) ಶೇಕಡಾ 1 ರಷ್ಟು ಹೆಚ್ಚಾಗಿದೆ. ಯುಎಸ್ ಸೇರಿದಂತೆ ಇತರ ದೇಶಗಳ ಆರ್ಥಿಕ ನೀತಿ, ರೂಪಾಯಿ ಮೌಲ್ಯ ಕುಸಿತ, ಯುದ್ಧಗಳು ಹಾಗೂ ಇತರ ಜಾಗತಿಕ ಕಾರಣಗಳಿಂದ 2026ರಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ವರ್ಷದ ಮೊದಲ ಅರ್ಧದಲ್ಲಿ ಭಾರೀ ಏರಿಕೆ ಆಗಲಿದೆ. ಬೆಳ್ಳಿ ದರವು ಸಹ ಚಿನ್ನಕ್ಕಿಂತ ಮೊದಲೇ ಏರಿಕೆ ಕಾಣುವ ಲೋಹವಾಗಿದೆ.
ವಿವಿಧ ಜಾಗತಿಕ ಆರ್ಥಿಕ ಅಂಶಗಳನ್ನು ಪರಿಗಣಿಸಿ ಆರ್ಥಿಕ ತಜ್ಞರ ಹೇಳುವ ಪ್ರಕಾರ, ಈ ವರ್ಷದ ಜೂನ್ 2026 ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,50,000 ರೂ.ನಿಂದ 1,75,000 ರೂಪಾಯಿಗೆ ತಲುಪುವ ಸಾಧ್ಯತೆ ಇದ ಎಂದು ಹೇಳಲಾಗುತ್ತಿದೆ. ಪ್ರಸ್ತುತದಲ್ಲಿ ಅದರ ಬೆಲೆ 1,32,000 ರೂಪಾಯಿ ಇದೆ.

ಇನ್ನೂ 24 ಕ್ಯಾರಟ್ ಚಿನ್ನವು ಇದೇ ವರ್ಷ 2026 ಡಿಸೆಂಬರ್ ಹೊತ್ತಿಗೆ 10 ಗ್ರಾಂಗೆ 1,80,000 ರೂ.ನಿಂದ 2,10,000 ರೂಪಾಯಿವರೆಗೆ ಹೆಚ್ಚಾಗುವ ನಿರೀಕ್ಷೆ ಇದೆ. ಸದ್ಯ ಅದರ ಬೆಲೆ ಜನವರಿ 14ರಂದು 1,44,000 ರೂಪಾಯಿಯಷ್ಟಿದೆ. ಕಳೆದ ವರ್ಷ ಹಾಗೂ ಈ ವರ್ಷದ ಬೆಳವಣಿಗೆ ಗಮನಿಸಿ ತಜ್ಞರು ಈ ರೀತಿ ಅಂದಾಜಿಸಿದ್ದಾರೆ. ಜಾಗತಿಕವಾಗಿ ದಿಢೀರ್ ಬದಲಾವಣೆ ಆದಲ್ಲಿ ದರ ಕುಸಿಯಲುಬಹುದು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಏರಿಕೆ ಮಟ್ಟ ಹೆಚ್ಚಿದ್ದು, ಇಳಿಕೆ ಕಡಿಮೆ ನಿರೀಕ್ಷೆ ಇದೆ.
ದರ ಹೆಚ್ಚಳಕ್ಕೆ ಕಾರಣವೇನು?
ಯುದ್ಧಗಳು, ಯುಎಸ್ ಹಣದುಬ್ಬರ, ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಕಾರಣಗಳಿಗೆ ಚಿನ್ನದ ಮಾರುಕಟ್ಟೆಯಲ್ಲಿ ಒಂದಷ್ಟು ಬದಲಾವಣೆ ಆಗುವ ಸಂಭವವಿದೆ. ಕೇಂದ್ರೀಯ ಬ್ಯಾಂಕ್‌ಗಳು ನಿರಂತರವಾಗಿ ಚಿನ್ನ ಖರೀದಿಸುತ್ತಿವೆ. ಖರೀದಿ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾಗುತ್ತದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್‌ನ ಇತ್ತೀಚಿನ ಜಾಗತಿಕ ದೃಷ್ಟಿಕೋನದ ಪ್ರಕಾರ, 2026 ರಲ್ಲಿ ಚಿನ್ನ ದರ ಮತ್ತಷ್ಟು ಗಮನ ಸೆಳೆಯುವ ಸಾಧ್ಯತೆ ಇದೆ. ಹೂಡಿಕೆದಾರರಿಗೆ ಲಾಭದ ಹಾದಿ ತೋರಿಸಲಿದೆ. ಒಂದು ಔನ್ಸ್ ಲೆಕ್ಕದಲ್ಲಿ ನೋಡುವುದಾದರೆ ಈ ವರ್ಷದ ಮಾರ್ಚ್‌ನಲ್ಲಿ ಒಂದು ಔನ್ಸ್ ಬಂಗಾರವು ₹3,61,050 ರೂ. ಹಾಗೂ ಡಿಸೆಂಬರ್ ನಲ್ಲಿ ₹3,98,400 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ.
ಹಣದುಬ್ಬರ ಹೊಂದಾಣಿಕೆ ಪ್ರಭಾವದಿಂದ ಚಿನ್ನದ ಬೆಲೆಗಳು ಈಗಾಗಲೇ ದಾಖಲೆಯ ಗರಿಷ್ಠ ಮಟ್ಟಕ್ಕೇರುತ್ತಿದೆ. ಜಾಗತಿಕ ಷೇರುಗಳಿಗೆ, ವಿಶೇಷವಾಗಿ ಯುಎಸ್ ಎಸ್ ಆಂಡ್ ಪಿ 500 ಗೆ ಹೋಲಿಸಿದರೆ ಲೋಹವು ಅಗ್ಗವಾಗಿದೆ. ಇಕ್ವಿಟಿ ಮೌಲ್ಯಮಾಪನಗಳು ಏರುಗತಿಯಲ್ಲಿವೆ.
ಚಿನ್ನಕ್ಕೂ ಮೊದಲೇ ಬೆಳ್ಳಿ ದರ ಹೆಚ್ಚಳ
ಪ್ರಸ್ತುತದಲ್ಲಿ ಚಿನ್ನದ ದರವು 100 ಗ್ರಾಂಗೆ 29000 ರೂಪಾಯಿ ಹಾಗೂ 01 ಕೆಜಿಗೆ 2,90,000 ರೂಪಾಯಿ ಇದೆ. 2026ರ ಡಿಸೆಂಬರ್ ನಲ್ಲಿ ಇದರ ಬೆಲೆಯು ಬರೋಬ್ಬರಿ 3,50,000 ರೂಪಾಯಿವರೆಗೂ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ಈಗಾಗಲೇ ಪ್ರತಿದಿನ 5ಸಾವಿರ, ಹತ್ತು ಸಾವಿರ ಹಾಗೂ ಜನವರಿ 14ರಂದು 15000 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಚಿನ್ನಕ್ಕೂ ಮೊದಲೇ ಬೆಳ್ಳಿ ದುಬಾರಿ ಆಗುವ ಲಕ್ಷಣಗಳು ಹೆಚ್ಚಿವೆ.












Click it and Unblock the Notifications