ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023 Expectations : ಖಾಲಿ ನಿವೇಶನಗಳ ಮೇಲೆಯೂ ಬಾಡಿಗೆ ತೆರಿಗೆ: ಏನಾಗಿರಲಿದೆ ಕೇಂದ್ರ ಸರ್ಕಾರದ ಮುಂದಿನ ನಡೆ?

|
Google Oneindia Kannada News

ನವದೆಹಲಿ, ಜನೆವರಿ 06: ಫೆಬ್ರುವರಿ 1ರಂದು ಕೇಂದ್ರ ಸರ್ಕಾರದಿಂದ ಬಜೆಟ್‌ ಮಂಡನೆಯಾಗಲಿದೆ. ಹೊಸ ವರ್ಷದ ಬಜೆಟ್ ಜನರಲ್ಲಿ ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಮನೆ ಬಾಡಿಗೆ ನೀಡುವವರು ಸುಭ ಸುದ್ದಿಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹಣಕಾಸು ಸಂಸ್ಥೆಗಳು ಸಲಹೆ ನೀಡುತ್ತಿವೆ. ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ICAI) ಉಪಯುಕ್ತವಾದ ಸಲಹೆಯೊಂದನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.

ಜನರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಖರೀದಿಸಿ ಅಥವಾ ಕಟ್ಟಿಸಿ ಬಾಡಿಗೆಗೆ ಕೊಡುವುದುಂಟು. ಈಗಿರುವ ನೀತಿಯ ಪ್ರಕಾರ, ಬಾಡಿಗೆಯಿಂದ ಬಂದಿರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಅದು ಸರಿಯಾದ ಕ್ರಮವಾಗಿದೆ. ಆದರೆ, ಬಾಡಿಗೆ ಇಲ್ಲದೇ ಖಾಲಿ ಉಳಿದಿರುವ ನಿವಾಸಗಳ ಮೇಲೆಯೂ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಮರುಪರಿಶೀಲಿಸುವಂತೆ ಐಸಿಎಐ ಸಲಹೆ ನೀಡಿದೆ.

ಜನರು ಈ ವಿಚಾರದ ಬಗ್ಗೆ ಗೊಂದಲದಲ್ಲಿ ಇದ್ದಾರೆ. ಹೀಗಾಗಿ, ಮುಂದಿನ ಬಜೆಟ್‌ನಲ್ಲಿ ಈ ಗೊಂದಲವನ್ನು ಪರಿಹರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ.

Income Tax on rent: Even vacant property is taxed as let out. Will Budget 2023 change this for homebuyers?

ಬಾಡಿಗೆ ಇಲ್ಲದೇ ಖಾಲಿ ಉಳಿದ ಅಥವಾ ಬಾಡಿಗೆಯನ್ನೇ ನೀಡದ ಆಸ್ತಿಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಕೈಬಿಡುವುದು ಒಳ್ಳೆಯದು ಎಂದು ಐಸಿಎಐ ಹೇಳಿದೆ.

ಒಬ್ಬ ವ್ಯಕ್ತಿ ಎರಡು ಸ್ವ ಬಳಕೆಯ ಆಸ್ತಿಯನ್ನು ಹೊಂದಬಹುದು. ಇದು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಸಹಕಾರಿಯಾಗಲಿದೆ. ಹಿಂದಿನ ವರ್ಷ ಬಾಡಿಗೆಗೆ ಕೊಡಲಾಗಿದ್ದ ಮನೆ ಈಗ ಖಾಲಿ ಬಿದ್ದರೂ, ಅದರ ಮೇಲೆ ತೆರಿಗೆ ಹೇರಲಾಗುತ್ತಿದೆ. ಇದು ಉತ್ತಮ ಬೆಳವಣಿಗಯಲ್ಲ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.

Income Tax on rent: Even vacant property is taxed as let out. Will Budget 2023 change this for homebuyers?

ಯಾವುದೇ ವ್ಯಕ್ತಿ ಒಂದು ಆಸ್ತಿಯ ಮೇಲೆ ದುಡ್ಡು ಹಾಕಿ ಅದರಿಂದ ನಷ್ಟ ಹೊಂದಲು ಬಯಸುವುದಿಲ್ಲ. ಎಷ್ಟು ಆಸ್ತಿ ಹೊಂದಬೇಕೆಂದು ತೆರಿಗೆ ಕಟ್ಟುವ ಜನರ ತೀರ್ಮಾನಕ್ಕೆ ಬಿಡಬೇಕು ಎಂದು ಹೇಳಿದೆ.

ಖಾಲಿ ನಿವೇಶನದ ಮೇಲೆ ಸೆಕ್ಷನ್‌ 23 (1) (ಸಿ) ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತಿದೆ ಇದರಿಂದ ಜನರಿಗೆ ಅನಗತ್ಯ ಹೊರೆಯಾಗುತ್ತಿದೆ. ಕಾನೂನಾತ್ಮಕ ವ್ಯಾಜ್ಯಗಳೂ ಹೆಚ್ಚುತ್ತವೆ. ಈ ಗೊಂದಲವನ್ನು ಬಗೆಹರಿಸಬೇಕು. ಕಾನೂನನ್ನು ಮರುಪರಿಶೀಲಸಬೇಕೆಂದು ತಿಳಿಸಿದೆ.

Income Tax on rent: Even vacant property is taxed as let out. Will Budget 2023 change this for homebuyers?

ಬಿಲ್ಡರ್‌ಗಳು ಕಟ್ಟಿದ ಮನೆಗಳು ಬಾಡಿಗೆಗೆ ಹೋಗದಿದ್ದರೂ ಅವುಗಳಿಗೆ ತೆರಿಗೆ ವಿಧಿಸಲಾತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದನ್ನು ತೆಗೆದುಹಾಕಬೇಕು ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಹೇಳಿದೆ.

English summary
Tax is also levied on residences left vacant without rent. ICAI has suggested to reconsider this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X