ಐಟಿ ನೋಟಿಸ್: ಖುದ್ದಾಗಿ ಆದಾಯ ತೆರಿಗೆ ಅಧಿಕಾರಿ ಭೇಟಿ ಅಗತ್ಯವಿಲ್ಲ

ನವದೆಹಲಿ, ಜುಲೈ 20: ನಿಮ್ಮ ಆದಾಯ ತೆರಿಗೆ ವಿಚಾರವಾಗಿ ಪರಿಶೀಲನಾ ನೋಟಿಸ್ ಒಂದು ವೇಳೆ ಜಾರಿಯಾದರೆ, ಅದಕ್ಕೆ ಉತ್ತರ ನೀಡಲು ನೀವು ಇಲಾಖೆ ಅಧಿಕಾರಿಯನ್ನು ಖುದ್ದಾಗಿ ಭೇಟಿ ಮಾಡುವ ಅಗತ್ಯ ಇಲ್ಲ.

ಹೌದು, ಇಂಟರ್ನೆಂಟ್ ಆಧಾರಿತ ತೆರಿಗೆ ಪರಿಶೀಲನಾ ವ್ಯವಸ್ಥೆಯ ಮೂಲಕವೇ ಜಾರಿಯಾದ ನೋಟಿಸ್‌ಗೆ ನೀವು ಉತ್ತರ ನೀಡಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಸ್ಪಷ್ಟಪಡಿಸಿದೆ. ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಆ ಮೂಲಕವೇ ನೋಟಿಸ್‌ಗೆ ಉತ್ತರ ನೀಡಬಹುದು.

ಆದಾಯ ತೆರಿಗೆ ಇಲಾಖೆಯು ಇತ್ತೀಚಿನ ಸಾರ್ವಜನಿಕ ಸಂದೇಶದಲ್ಲಿ ಈ ಕುರಿತು ತಿಳಿಸಿದ್ದು, ನೋಟಿಸ್‌ಗೆ ವೆಬ್‌ಸೈಟ್‌ ಮೂಲಕ ನೀಡುವ ಉತ್ತರವನ್ನು ದೇಶದ ಬೇರೆ ಬೇರೆ ನಗರಗಳಲ್ಲಿ ಇರುವ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

Income Tax Notice: No Need To Meet Tax Officer In Case Of Scrutiny Notice

'ಈ ಹೊಸ ವ್ಯವಸ್ಥೆಯಿಂದಾಗಿ ಆದಾಯ ತೆರಿಗೆ ಪಾವತಿಸುವ 58 ಸಾವಿರ ಜನರಿಗೆ ಈಗಾಗಲೇ ಸಹಾಯ ಆಗಿದೆ' ಎಂದು ಇಲಾಖೆ ತಿಳಿಸಿದೆ. ಈ ವ್ಯವಸ್ಥೆಯ ಮೂಲಕವೇ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಒಟ್ಟು 7,116 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+