ಅಪನಗದೀಕರಣ ಪೂರ್ವ ಬ್ಯಾಂಕ್ ವ್ಯವಹಾರಗಳ ಮೇಲೆ ತೆರಿಗೆ ಇಲಾಖೆ ಕಣ್ಣು

Posted By: Chethan
Subscribe to Oneindia Kannada

ನವದೆಹಲಿ, ಜ. 8: ಕಳೆದ ವರ್ಷ ಏಪ್ರಿಲ್ 1ರಿಂದ ನವೆಂಬರ್ 9ರವರೆಗೆ ತಮ್ಮಲ್ಲಿನ ಗ್ರಾಹಕರ ಖಾತೆಗಳಿಗೆ ಜಮೆಯಾದ ಹಣದ ಸಂಪೂರ್ಣ ವರದಿ ಸಲ್ಲಿಸುವಂತೆ ಕೇಂದ್ರ ಆದಾಯ ತೆರಿಗೆ ಇಲಾಖೆ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ರವಾನಿಸಿದೆ.

ಇದೇ ರೀತಿ, ಅಂಚೆ ಇಲಾಖೆಗೂ ಸೂಚನೆ ನೀಡಲಾಗಿದ್ದು, ಎಲ್ಲಾ ಅಂಚೆ ಕಚೇರಿಗಳೂ ತಮ್ಮಲ್ಲಿನ ಖಾತೆಗಳ ವಿವರ ನೀಡಬೇಕಿದೆ.

ಕಳೆದ ವರ್ಷ ನವೆಂಬರ್ 8ರಂದು ಕೇಂದ್ರ ಸರ್ಕಾರವು 500 ರು. ಹಾಗೂ 1000 ರು.ಗಳ ನೋಟುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಹಾಗಾಗಿ, ಅಪನಗದೀಕರಣಕ್ಕೂ ಮುನ್ನ ಬ್ಯಾಂಕ್ ಖಾತೆಗಳಲ್ಲಿ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಆದಾಯ ಇಲಾಖೆ ಪರಿಶೀಲಿಸಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಈ ಸೂಚನೆ ರವಾನಿಸಲಾಗಿದೆ.

Income Tax Department asks banks to report cash deposits between April 1 and November 9, 2016

ಬ್ಯಾಂಕುಗಳು ಅದರಲ್ಲೂ ವಿಶೇಷವಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಖಾತೆಗಳ ಮಾಹಿತಿ ತಿಳಿಯಲು ಇಲಾಖೆಯು ಹೆಚ್ಚಿನ ಒತ್ತು ನೀಡಿದೆ ಎನ್ನಲಾಗಿದೆ.

ಇದಲ್ಲದೆ, ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟ ಗ್ರಾಹಕರ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಸೇರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ಇಲಾಖೆ ಎಲ್ಲಾ ಬ್ಯಾಂಕುಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ.

ಮುಂದಿನ ತಿಂಗಳು 28ರೊಳಗೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಪ್ಯಾನ್ ಕಾರ್ಡ್ ಸಂಖ್ಯೆ ಅಥವಾ ಫಾರ್ಮ್ ನಂ. 60 ಕಡ್ಡಾಯವಾಗಿರಲೇಬೇಕು. ಪ್ಯಾನ್ ಸಂಖ್ಯೆ ನೀಡದ ಗ್ರಾಹಕರಿಗೆ ಆದಷ್ಟು ಬೇಗನೇ ಪ್ಯಾನ್ ಕಾರ್ಡ್ ಸಂಖ್ಯೆ ನೀಡುವಂತೆ ತಾಕೀತು ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Income tax department has directed the banks to submit the account details from April 1, 20016 to Nov. 9, 2016. And also directed to complete the procedure to attch PAN card numbers to all the account numbers by 28th of February this year.
Please Wait while comments are loading...