ಇನ್ವೆಸ್ಟ್ ಕರ್ನಾಟಕ 2016 : ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 03 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2016'ಕ್ಕೆ ಚಾಲನೆ ಸಿಕ್ಕಿದೆ. ಮೊದಲ ದಿನವೇ ಹಲವು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅರಮನೆ ಮೈದಾನದಲ್ಲಿ ಬುಧವಾರ 'ಇನ್ವೆಸ್ಟ್ ಕರ್ನಾಟಕ 2016ಕ್ಕೆ ಚಾಲನೆ ನೀಡಿದರು. 'ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾವೂ ನೆರವು ನೀಡಲಿದೆ. ಎಲ್ಲಾ ರಾಜ್ಯಗಳಲ್ಲೂ ಉದ್ಯಮ ಸ್ನೇಹಿ ವಾತಾವರಣವಿರಬೇಕು' ಎಂದು ಹೇಳಿದರು. [ಹೂಡಿಕೆದಾರರ ಸಮಾವೇಶ : ಹರಿದು ಬಂದ ಬಂಡವಾಳ ಸಾಗರ]

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ಅವರು, 'ಕರ್ನಾಟಕ ಮಾನವ ಸಂಪನ್ಮೂಲದ ರಾಜಧಾನಿಯಾಗಿದೆ. ರಾಜ್ಯಗಳ ಅಭಿವೃದ್ಧಿ ಬಂಡವಾಳ ಹೂಡಿಕೆ ಮೇಲೆ ಅವಲಂಬಿತವಾಗಿದೆ. ಕರ್ನಾಟಕದಲ್ಲಿ ದೂರದೃಷ್ಟಿಯುಳ್ಳ ಸರ್ಕಾರ ಅಸ್ತಿತ್ವದಲ್ಲಿದೆ' ಎಂದು ತಿಳಿಸಿದರು. [ಇನ್ವೆಸ್ಟ್ ಕರ್ನಾಟಕ ಮೊಬೈಲ್ ಅಪ್ಲಿಕೇಶನ್]

ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನೆಗೆ ಸಾಕ್ಷಿಯಾದರು. ಸಮಾವೇಶದ ಮೊದಲ ದಿನದ ಚಿತ್ರಗಳು ಇಲ್ಲಿವೆ...... [ಕರ್ನಾಟಕದ ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರು ತಗೊಳ್ಳಿ!]

ಉದ್ಯಮಿಗಳಿಗೆ ರತ್ನಗಂಬಳಿ ಹಾಸಿದ ಕರ್ನಾಟಕ ಸರ್ಕಾರ

ಉದ್ಯಮಿಗಳಿಗೆ ರತ್ನಗಂಬಳಿ ಹಾಸಿದ ಕರ್ನಾಟಕ ಸರ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2016'ಕ್ಕೆ ಚಾಲನೆ ಸಿಕ್ಕಿದೆ. ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.

ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು

ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು

ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂರು ದಿನಗಳ 'ಇನ್ವೆಸ್ಟ್ ಕರ್ನಾಟಕ 2016' ಸಮಾವೇಶಕ್ಕೆ ಚಾಲನೆ ನೀಡಿದರು.

ಕ್ಯಾಮರಾಗೆ ಫೋಸ್ ಕೊಟ್ಟ ಸಿದ್ದರಾಮಯ್ಯ

ಕ್ಯಾಮರಾಗೆ ಫೋಸ್ ಕೊಟ್ಟ ಸಿದ್ದರಾಮಯ್ಯ

ಸಮಾವೇಶ ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ರತನ್ ಟಾಟಾ ಅವರಿಗೆ ಸ್ವಾಗತ

ರತನ್ ಟಾಟಾ ಅವರಿಗೆ ಸ್ವಾಗತ

ಸಮಾವೇಶಕ್ಕೆ ಆಗಮಿಸಿದ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಸ್ವಾಗತಿಸಿದರು.

ಕುಮಾರ ಮಂಗಲಂ ಬಿರ್ಲಾ ಆಗಮನ

ಕುಮಾರ ಮಂಗಲಂ ಬಿರ್ಲಾ ಆಗಮನ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ ಅವರು ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರನ್ನು ಇನ್ವೆಸ್ಟ್ ಕರ್ನಾಟಕ 2016ಕ್ಕೆ ಸ್ವಾಗತಿಸಿದರು.

ಅದಾನಿ, ಅಂಬಾನಿ ಮಾತುಕತೆ

ಅದಾನಿ, ಅಂಬಾನಿ ಮಾತುಕತೆ

ಇನ್ವೆಸ್ಟ್ ಕರ್ನಾಟಕ 2016ರ ಮೊದಲ ದಿನ ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಮಾತುಕತೆಯಲ್ಲಿ ತೊಡಗಿದ್ದಾಗ ಕಂಡಿದ್ದು ಹೀಗೆ

ಸಮಾವೇಶಕ್ಕೆ ಆಗಮಿಸಿದ ನಂದಿನಿ ಟಂಡನ್

ಸಮಾವೇಶಕ್ಕೆ ಆಗಮಿಸಿದ ನಂದಿನಿ ಟಂಡನ್

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಡ್ಯೂಕ್ ಆಂಡ್ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯ ಸದಸ್ಯೆ ನಂದಿನಿ ಟಂಡನ್ ಅವರನ್ನು ಸ್ವಾಗತಿದರು.

ಕ್ಯಾಮರಾಗೆ ಫೋಸ್ ಕೊಟ್ಟ ದೇಶಪಾಂಡೆ

ಕ್ಯಾಮರಾಗೆ ಫೋಸ್ ಕೊಟ್ಟ ದೇಶಪಾಂಡೆ

ಇನ್ವೆಸ್ಟ್ ಕರ್ನಾಟಕ 2016ರ ಸಮಾವೇಶಕ್ಕೂ ಮೊದಲು ಬೃಹತ್ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅವರು ಕ್ಯಾಮರಾಗೆ ಫೋಸ್ ನೀಡಿದ್ದು ಹೀಗೆ.

ವೇದಿಕೆ ಮೇಲೆ ಉದ್ಯಮಿಗಳು

ವೇದಿಕೆ ಮೇಲೆ ಉದ್ಯಮಿಗಳು

ಇನ್ವೆಸ್ಟ್ ಕರ್ನಾಟಕ 2016ರ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಎನ್. ಆರ್. ನಾರಾಯಣಮೂರ್ತಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ ಮುಂತಾದವರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಸಹಕಾರ ನೀಡಲಿದೆ

ಕೇಂದ್ರ ಸರ್ಕಾರ ಸಹಕಾರ ನೀಡಲಿದೆ

ಮೂರು ದಿನಗಳ ಸಮಾವೇಶ ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 'ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾವೂ ನೆರವು ನೀಡಲಿದೆ. ಎಲ್ಲಾ ರಾಜ್ಯಗಳಲ್ಲೂ ಉದ್ಯಮ ಸ್ನೇಹಿ ವಾತಾವರಣವಿರಬೇಕು' ಎಂದು ಹೇಳಿದರು.

ಸಾಂಪ್ರದಾಯಿಕ ಸ್ವಾಗತ

ಸಾಂಪ್ರದಾಯಿಕ ಸ್ವಾಗತ

ಇನ್ವೆಸ್ಟ್ ಕರ್ನಾಟಕ 2016ಕ್ಕೆ ಆಗಮಿಸಿದ ಅತಿಥಿಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಯಕ್ಷಗಾನದ ವೇಷತೊಟ್ಟ ಕಲಾವಿದರು ಅತಿಥಿಗಳನ್ನು ಅರಮನೆ ಮೈದಾನಕ್ಕೆ ಬರಮಾಡಿಕೊಂಡರು.

ಬನ್ನಿ ಸಾರ್ ನಿಮಗೆ ಸ್ವಾಗತ

ಬನ್ನಿ ಸಾರ್ ನಿಮಗೆ ಸ್ವಾಗತ

ಇನ್ವೆಸ್ಟ್ ಕರ್ನಾಟಕ 2016 ಸಮಾವೇಶಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಬರಮಾಡಿಕೊಂಡರು.

ಟಾಟಾ ಜೊತೆ ನಾಯ್ಡು ಚರ್ಚೆ

ಟಾಟಾ ಜೊತೆ ನಾಯ್ಡು ಚರ್ಚೆ

ರತನ್ ಟಾಟಾ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಮಾತುಕತೆ ನಡೆಸುವಾಗ ಕಂಡಿದ್ದು ಹೀಗೆ.

ಗಣ್ಯರಿಗೆ ಸ್ವಾಗತ

ಗಣ್ಯರಿಗೆ ಸ್ವಾಗತ

ಇನ್ವೆಸ್ಟ್ ಕರ್ನಾಟಕ 2016 ಸಮಾವೇಶಕ್ಕೆ ಆಗಮಿಸಿದ ಗಣ್ಯರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಜೇಟ್ಲಿ ಜೊತೆ ಸಿದ್ದರಾಮಯ್ಯ ಸಮಾಲೋಚನೆ

ಜೇಟ್ಲಿ ಜೊತೆ ಸಿದ್ದರಾಮಯ್ಯ ಸಮಾಲೋಚನೆ

ಇನ್ವೆಸ್ಟ್ ಕರ್ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಜೊತೆ ಸಮಾಲೋಚನೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central Finance Minister Arun Jaitley inaugurated the Invest Karnataka global business meet 2016 at palace grounds, Bengaluru on February 3, 2016. Here is a pictures of day one.
Please Wait while comments are loading...