ಐಬಿಎಂ ಇಂಡಿಯಾಕ್ಕೆ ಹೊಸ ಎಂಡಿ ನೇಮಕ

Posted By:
Subscribe to Oneindia Kannada

ಬೆಂಗಳೂರು, ಜನವರಿ 04: ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಸರ್ವೀಸ್ ಸಂಸ್ಥೆ ಐಬಿಎಂನ ಭಾರತ ವಿಭಾಗಕ್ಕೆ ಕರಣ್ ಬಾಜ್ವಾ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ.

ಐಬಿಎಂ ಇಂಡಿಯಾದ ಎಂಡಿ ವನಿತಾ ನಾರಾಯಣನ್ ಅವರಿಗೆ ಬಡ್ತಿ ನೀಡಿ ಚೇರ್ಮನ್ ಸ್ಥಾನಕ್ಕೇರಿಸಲಾಗಿದೆ. ವನಿತಾ ಅವರ ಸ್ಥಾನವನ್ನು ಕರಣ್ ತುಂಬಲಿದ್ದಾರೆ.

IBM appoints Karan Bajwa as India MD

ಐಬಿಎಂನ ಏಷ್ಯಾ ಪೆಫಿಸಿಕ್ ಭಾಗದ ಕಾರ್ಯಕಾರಿ ಹುದ್ದೆಯಲ್ಲಿದ ಕರಣ್ ಅವರು ಕ್ಲೌಡ್ ಟ್ರಾನ್ಸಿಷನ್ ವ್ಯವಸ್ಥೆ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದರು.

ಐಬಿಎಂನ ಮಾರುಕಟ್ಟೆ ವಿಭಾಗ, ಬಾಂಗ್ಲಾದೇಶ, ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ ಸಂಸ್ಥೆಯ ಛಾಪು ಮೂಡಿಸಲು ಕರಣ್ ನೆರವಾಗಿದ್ದಾರೆ. ಎಂಡಿ ಕರಣ್ ಹಾಗೂ ಚೇರ್ಮನ್ ನಾರಾಯಣನ್ ಅವರಿಬ್ಬರು ಈಗ ಐಬಿಎಂ ಏಷ್ಯಾ ಪೆಸಿಫಿಕ್ ನ ಚೇರ್ಮನ್ ರಾಂಡಿ ವಾಕರ್ ಅವರಿಗೆ ರಿಪೋರ್ಟ್ ಮಾಡಲಿದ್ದಾರೆ ಎಂದು ಐಬಿಎಂ ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IBM — the world's largest computer services firm — has appointed its Asia-Pacific executive for strategy and transformation, Karan Bajwa, as the new managing director of IBM India reports Business-standard.
Please Wait while comments are loading...