PF Withdrawal: ಯಾವುದೇ ದಾಖಲೆಗಳಿಲ್ಲದೆ ಪಿಎಫ್ ಹಣ ಪಡೆಯುವುದು ಹೇಗೆ?: ಇಲ್ಲಿವೆ ಸರಳ ಮಾರ್ಗಗಳು
PF Withdrawal: ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳ ಸಂಬಳದಲ್ಲೇ ಪಿಎಫ್ ಹಣವನ್ನು ಕಡಿತ ಮಾಡಲಾಗುತ್ತಿದೆ. ಇದು ಉದ್ಯೀಗಿಗಳ ಕಷ್ಟ ಕಾಲಾಕ್ಕೆ ಆಗುತ್ತದೆ ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ಅದನ್ನು ಕೆಲಸ ಬಿಟ್ಟ ಮೇಲೆ ಅಥವಾ ಅದಕ್ಕೂ ಮುಂಚೆಯೇ ಅವಶ್ಯತೆ ಇದ್ದ ವೇಳೆ ತೆಗೆಯಬಹುದು. ಇದೀಗ ಇದನ್ನು ಹಿಂಪಡೆಯುವ ವಿಧಾನ ಮತ್ತಷ್ಟು ಸರಳವಾಗಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಉದ್ಯೋಗಿಗಳಿಗೆ ತಮ್ಮ ಭವಿಷ್ಯ ನಿಧಿ (PF) ಹಣವನ್ನು ತೆಗೆದುಕೊಳ್ಳುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ. ಈಗ ಉದ್ಯೋಗಿಗಳು ಇದನ್ನು ಹಿಂಪಡೆಯಲು ರಾಶಿಗಟ್ಟಲೇ ದಾಖಲೆಗಳನ್ನ ಕೈಯಲ್ಲಿ ಹಿಡಿದುಕೊಂಡು ಹೂಗುವ ಅಗತ್ಯ ಇಲ್ಲ. ಕೆಲವು ಮೂಲಭೂತ ಷರತ್ತುಗಳನ್ನು ಪೂರೈಸಿದರೆ, ಪಿಎಫ್ ಹಣವನ್ನು ಶೀಘ್ರದಲ್ಲೇ ಹಾಗೂ ಸುಲಭವಾಗಿ ಪಡೆಯಬಹುದಾಗಿದೆ.

ಪಿಎಫ್ ಹಣವನ್ನು ಸುಲಭವಾಗಿ ತೆಗೆಯಲು ನಿಮ್ಮ ಪಿಎಫ್ ಖಾತೆಯು ಆಧಾರ್‌ಗೆ ಲಿಂಕ್ ಆಗಿರಬೇಕು. ಪಿಎಎನ್ ಮತ್ತು ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಿರಬೇಕು ಹಾಗೂ ವೈಯಕ್ತಿಕ ವಿವರಗಳು ಇಪಿಎಫ್‌ಒ ದಾಖಲೆಗಳೊಂದಿಗೆ ಹೊಂದಿಕೆ ಆಗಿರಬೇಕು. ಈ ಷರತ್ತುಗಳನ್ನು ಪೂರೈಸಿದ್ದರೆ, ಯಾವುದೇ ಹೆಚ್ಚುವರಿ ದಾಖಲೆ ಸಲ್ಲಿಕೆ ಮಾಡದೆಯೇ ಶೀಘ್ರದಲ್ಲೇ ಹಣವನ್ನು ಪಡೆಯಬಹುದಾಗಿದೆ.
ಇಪಿಎಫ್‌ಒ ಒಂದೇ ಫಾರ್ಮ್‌ನ ಮೂಲಕ ಪಿಎಫ್ ತೆಗೆಯುವ ಪ್ರಕ್ರಿಯೆಯನ್ನ 2017ರಿಂದಲೇ ಸುಲಭ ಆಗಿಸಿದೆ. ಕಾಂಪೋಸಿಟ್ ಕ್ಲೈಮ್ ಫಾರ್ಮ್ ಬಳಕೆ ಮಾಡಿಕೊಂಡು ಇಲ್ಲಿ ನೀಡಲಾದ ಕಾರಣಗಳಿಗಾಗಿ ಪಿಎಫ್ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ಹಾಗಾದ್ರೆ ಮತ್ತೇಕೆ ತಡ ಇಲ್ಲಿ ನೀಡಲಾಗುವ ಮಾಹಿತಿನ್ನು ಒಮ್ಮೆ ಗಮನಿಸಿ.
ಯಾವ ಕಾರಣಗಳಿಗೆ ಪಿಎಫ್ ತ್ವರಿತವಾಗಿ ಪಡೆಯಬಹುದು?: ವಿವಾಹ, ಮಕ್ಕಳ ಶಿಕ್ಷಣ, ಮನೆ ಖರೀದಿ, ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣಗಳಿಗಾಗಿ ಪಿಎಫ್ ಹಣವನ್ನು ತ್ವರಿತವಾಗಿ ಹಿಂಪಡೆಬಹುದಾಗಿದೆ. ಕೆವೈಸಿ ಪೂರ್ಣ ಆಗಿದ್ದರೆ, ವೈದ್ಯಕೀಯ ಪ್ರಮಾಣ ಪತ್ರಗಳು ಅಥವಾ ಇತರ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ. ಇದರಿಂದ ಪ್ರಕ್ರಿಯೆ ತ್ವರಿತ ಮತ್ತು ಯಾವುದೇ ಅಡೆತಡೆ ಇಲ್ಲದೆ ಮಗಿದುಬಿಡುತ್ತದೆ.
ಪಿಎಫ್ ಹಣದ ಸುರಕ್ಷತೆಯನ್ನ ಖಾತರಿಪಡಿಸಲು, ಇಪಿಎಫ್‌ಒ ಈಗ ಆಧಾರ್ ಒಟಿಪಿ ಮತ್ತು ಮುಖ ಗುರುತಿಸುವಿಕೆಯನ್ನ ಕಡ್ಡಾಯಗೊಳಿಸಿದೆ. ಆದ್ದರಿಂದ, ನಿಮ್ಮ ಇಪಿಎಫ್‌ಒ ಖಾತೆ ಸಕ್ರಿಯ ಆಗಿದ್ದು, ಎಲ್ಲಾ ವಿವರಗಳು ಸರಿಯಾಗಿ ಅಪ್ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ
ಆನ್‌ಲೈನ್‌ನಲ್ಲಿ ಪಿಎಫ್ ತೆಗೆಯುವ ವಿಧಾನ
* ಮೊದಲು ಇಪಿಎಫ್‌ಒ ಪೋರ್ಟಲ್ ಅಥವಾ ಉಮಂಗ್ ಆ್ಯಪ್‌ಗೆ ಭೇಟಿ ನೀಡಿ
* ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಆಗಿ
* ಆಧಾರ್, ಪಿಎಎನ್ ಹಾಗೂ ಬ್ಯಾಂಕ್ ವಿವರಗಳು ಪರಿಶೀಲನೆ ಆಗಿರುವುದನ್ನ ಖಚಿತಪಡಿಸಿಕೊಳ್ಳಿ
* ಬಳಿಕ ಆನ್‌ಲೈನ್ ಸರ್ವೀಸಸ್, ಕ್ಲೈಮ್ ಆಯ್ಕೆ ಮಾಡಿ
* ಹಣ ತೆಗೆಯುವ ಕಾರಣ ಆಯ್ಕೆ ಮಾಡಿ ಹಾಗೂ ಮೊತ್ತವನ್ನು ನಮೂದಿಸಿ
* ಆಧಾರ್ ಒಟಿಪಿ ಅಥವಾ ಮುಖ ಗುರುತಿಸುವಿಕೆಯ ಮೂಲಕ ವಿನಂತಿಯನ್ನು ಸಲ್ಲಿಕೆ ಮಾಡಿ
* ಎಲ್ಲಾ ವಿವರಗಳನ್ನು ಸರಿಯಾಗಿ ಸಲ್ಲಿಕೆ ಮಾಡಿದರೆ ಅಥವಾ ಸರಿಯಾಗಿದ್ದರೆ, 3 ದಿನಗಳೊಳಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಆಗ ಯಾವುದೇ ಭೌತಿಕ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯ ಇಲ್ಲ. ಈ ಹೊಸ ಪ್ರಕ್ರಿಯೆಯು ಉದ್ಯೋಗಿಗಳಿಗೆ ಪಿಎಫ್ ಹಣವನ್ನ ತ್ವರಿತವಾಗಿ ಹಾಗೂ ಸುಲಭವಾಗಿ ಪಡೆಯಲು ಸಹಾಯ ಮಾಡಲಿದೆ. ಈ ಮೂಲಕ ಉದ್ಯೊಗಿಗಳ ಆರ್ಥಿಕ ಅಗತ್ಯಗಳನ್ನು ಪೂರೈಕೆ ಮಾಡಲು ಸರಳ ಮಾರ್ಗವನ್ನು ಒದಗಿಸುತ್ತದೆ. ಇದರಿಂದ ಉದ್ಯೋಗಿಗಳಿಗೆ ತ್ವರಿತವಾಗಿ ಹಣ ಪಡೆದು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತುಂಬಾ ಸಹಕಾರಿ ಆದಂತಾಗಲಿದೆ.












Click it and Unblock the Notifications