ಕನ್ನಡ 'ಡಿಂಡಿಮ' ಆಪ್ ಡೌನ್ಲೋಡ್ ಮಾಡ್ಕೊಳ್ಳಿ ರಿಯಾಯಿತಿ ಗಳಿಸಿ

Posted By:
Subscribe to Oneindia Kannada

ಕನ್ನಡದ ಮೊದಲ ಮತ್ತು ಏಕೈಕ ಸಕಾರಾತ್ಮಕ ವಿಷಯಗಳ ಆಪ್(App) ಎಂಬ ಹೆಗ್ಗಳಿಕೆಯೊಂದಿಗೆ ಕನ್ನಡ 'ಡಿಂಡಿಮ' ಎಲ್ಲರ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಆಗುತ್ತಿದೆ. ಸುದ್ದಿಗಳ ಸಂಗ್ರಹವಷ್ಟೇ ಅಲ್ಲದೆ ಹೆಚ್ಚಿನದ್ದನ್ನು ನೀಡಲು ಬಯಸಿರುವ ಡಿಂಡಿಮ ಬಗ್ಗೆ ವಿವರ ಇಲ್ಲಿದೆ.

ಸಂಸ್ಕೃತಿ, ಕಲೆ, ವಿಜ್ಞಾನ, ರಾಜಕೀಯ, ಸಿನೆಮಾ, ಕ್ರೀಡೆ ಮುಂತಾದ ವಿಷಯಗಳ ಆಸಕ್ತಿಕರ, ಸಕಾರಾತ್ಮಕ ಸುದ್ದಿ ಹಾಗೂ ವಿಡಿಯೋಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಓದುಗರಿಗೆ ತಲುಪಿಸುವ ಆಶಯ ಹೊಂದಿರುವ 'ಡಿಂಡಿಮ' ಬಳಗಕ್ಕೆ ನಿಮ್ಮ ನಿರಂತರ ಬೆಂಬಲ ಅವಶ್ಯಕ. [ಮೊಬೈಲಿನಲ್ಲಿ ಸಂಪೂರ್ಣ ಕನ್ನಡ ಬ್ರೌಸರ್ ಬೇಕೆ?]

ನಿಮ್ಮ ಸಹಕಾರದಿಂದ 'ಡಿಂಡಿಮ'ವನ್ನು ಉತ್ತಮಗೊಳಿಸಿ ಇನ್ನೂ ಹೆಚ್ಚಿನ ಕನ್ನಡಿಗರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಡಿಂಡಿಮ ತಂಡ ಹೇಳಿದೆ.[ಉಚಿತ ಕನ್ನಡ ಪದಬಂಧ ಅಪ್ಲಿಕೇಷನ್]

ಕನ್ನಡವನ್ನು ಬೆಳೆಸಲು ಉಳಿಸಲು ಕೈ ಜೋಡಿಸಿರುವ ನಿಮಗೆ ನಮ್ಮಿಂದ ಒಂದು ಚಿಕ್ಕ ಉಡುಗೊರೆ. iruve.in ಜಾಲ ತಾಣದಲ್ಲಿ ನೀವು ನಿಮಗಿಷ್ಟವಾದ ಕನ್ನಡದ ಉಡುಗೆ (T-Shirt) ಗಳನ್ನು ಕಡಿಮೆದರದಲ್ಲಿ ಖರೀದಿಸಬಹುದು. 399 ಕ್ಕೆ ಮೇಲ್ಪಟ್ಟು ಖರೀದಿಯ ಮೇಲೆ 100 ರೂ ಕಡಿತ.ಈ ಕೊಡುಗೆ ಡಿಂಡಿಮ ಓದುಗರಿಗೆ ಮಾತ್ರ.

ಡಿಂಡಿಮ' ಆಪ್ ಡೌನ್ಲೋಡ್ ಹೇಗೆ?

ಡಿಂಡಿಮ' ಆಪ್ ಡೌನ್ಲೋಡ್ ಹೇಗೆ?

ಗೂಗಲ್ ಸರ್ಚ್ ಬಾಕ್ಸಿನಲ್ಲಿ Kannada Dindima ಎಂದು ಹುಡುಕಿ, ನೇರವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹುಡುಕಿ. ಡೌನ್ ಲೋಡ್ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ.

ಇಲ್ಲಿ ತನಕ 5,000 - 10,000 ರೇಂಜಿನಲ್ಲಿ ಡೌನ್ ಲೋಡ್ ಆಗಿರುವ ಈ ಅಪ್ಲಿಕೇಷನ್ ಬಳಸಲು ನಿಮ್ಮ ಸ್ಮಾರ್ಟ್ ಫೋನಿನಲ್ಲಿ Android 4.0 ಅಥವಾ ಅದಕ್ಕಿಂತ ಹೆಚ್ಚಿನ ವರ್ಷನ್ ಆಪರೇಟಿಂಗ್ ಸಿಸ್ಟಮ್ ಹೊಂದಿರಬೇಕು. ನಿಮ್ಮ ಸಲಹೆ, ಸೂಚನೆಗಳನ್ನು Chewbaka Appsನ ಇಮೇಲ್ ಐಡಿ : barisukannadadindima@gmail.com ಗೆ ಕಳಿಸಿ.

ಡಿಂಡಿಮದಲ್ಲಿ ಎಲ್ಲವೂ ಇದೆ

ಡಿಂಡಿಮದಲ್ಲಿ ಎಲ್ಲವೂ ಇದೆ

ಕನ್ನಡ ದಿನಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಉದಯವಾಣಿ, ವಿಶ್ವಭಾರತಿ, ಕನ್ನಡಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ. ಅಲ್ಲದೆ, ಡೈಲಿ ಹಂಟ್, ಪಬ್ಲಿಕ್ ಟಿವಿ, ನಿಲುಮೆ, ಅಂತೆ ಕಂತೆ, ಇರುವೆ, ಜಸ್ಟ್ ಕನ್ನಡ, ಕನ್ನಡ ಮ್ಯಾಗಜೀನ್ ಗಳು, ಗಾದೆಗಳು, ಭಾವಗೀತೆ, ಕಥೆ, ಅಂಕಣಗಳನ್ನು ಹೆಕ್ಕಿ ಇಲ್ಲಿ ನೀಡಲಾಗುತ್ತಿದೆ.

ಸುಲಭವಾಗಿ ಹಂಚಬಹುದು

ಸುಲಭವಾಗಿ ಹಂಚಬಹುದು

ಒಂದು ಚಿತ್ರ ಹಾಗೂ ಸುದ್ದಿ ಬಗ್ಗೆ 75 ಪದಗಳ ವಿವರಣೆ ಮಾತ್ರ ಇರುತ್ತದೆ. ಮೊದಲೇ ಹೇಳಿದಂತೆ ಸಕಾರಾತ್ಮಕ ಸುದ್ದಿಗಳು ಮಾತ್ರ. ಮಂಕುತಿಮ್ಮನ ಕಗ್ಗ ಸೇರಿದಂತೆ ಸಾಹಿತ್ಯದ ವಿಶಿಷ್ಟ ಲೇಖನಗಳನ್ನು ನಿರೀಕ್ಷಿಸಬಹುದು. ಬ್ಲಾಗ್ (ಇಂಗ್ಲೀಷ್ ಸೇರಿದಂತೆ) ಗಳಿಂದಲೂ ಸುದ್ದಿ ಹೆಕ್ಕಲಾಗುತ್ತದೆ. ಸುಲಭವಾಗಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್, ಇಮೇಲ್ ಮೂಲಕ ಹಂಚಿಕೊಳ್ಳಬಹುದು.

ಸುದ್ದಿಗೆ ಒಗ್ಗರಣೆ ಹಾಕಲ್ಲ

ಸುದ್ದಿಗೆ ಒಗ್ಗರಣೆ ಹಾಕಲ್ಲ

ನಮ್ಮ ಬಳಿ ಸುದ್ದಿಗಳಿಗೆ ಹೆಚ್ಚಿನ ಮಸಾಲೆ ಹಾಕಲು ಒಗ್ಗರಣೆ ಡಬ್ಬಿ ಇಲ್ಲ. ಕನ್ನಡತನ ಬಿಂಬಿಸುವ ಕನ್ನಡಿಗರ ಸಕಾರಾತ್ಮಕ ಅಪ್ಲಿಕೇಷನ್ ಇದಾಗಿದೆ. ಸುದ್ದಿ ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ಸುದ್ದಿ, ವಿಶೇಷ ಲೇಖನಗಳನ್ನು ನಾವೇ ಬರೆದು ನಿಮ್ಮ ಮುಂದಿಡುತ್ತಿದ್ದೇವೆ. ಬಾರಿಸು ಕನ್ನಡ ಡಿಂಡಿಮವಾ ಎಂಬುದು ನಮ್ಮ ಧ್ಯೇಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to install Kannada Dindima aggregator Application and get discount on iruve.in website. Dindima a Kannada news/ content app. Dindima source, select, curate positive contents across the web.
Please Wait while comments are loading...