ಜಿಎಸ್ ಟಿ ಜಾರಿಗೆ ದಿನಬಳಕೆ ವಸ್ತು ಬೆಲೆ ಇಳಿಕೆ, ಗ್ರಾಹಕ ಖುಷ್ ಹುವಾ!

Recommended Video

      ಜಿಎಸ್ ಟಿ ಜಾರಿಗೆ ದಿನಬಳಕೆ ವಸ್ತು ಬೆಲೆ ಇಳಿಕೆ, ಗ್ರಾಹಕ ಖುಷ್ ಹುವಾ! | Oneindia Kannada

      ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾದ ಮೇಲೆ ಗೃಹ ಬಳಕೆ ವಸ್ತುಗಳ ಖರೀದಿಯಲ್ಲಿ ಎಷ್ಟು ಉಳಿತಾಯ ಆಗಿದೆ ಅನ್ನೋದನ್ನು ಏನಾದರೂ ಪರೀಕ್ಷೆ ಮಾಡಿಕೊಂಡಿದ್ದೀರಾ? ಆದರೆ ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಆ ಸಂಖ್ಯೆಯನ್ನು ತೆರೆದಿಟ್ಟಿವೆ.

      ಭಾರತೀಯರ ಸರಾಸರಿ ಗೃಹಬಳಕೆ ವಸ್ತುಗಳಿಂದ ತಿಂಗಳಿಗೆ 320 ರುಪಾಯಿ ತನಕ ಉಳಿತಾಯ ಆಗುತ್ತಿದೆಯಂತೆ. ಈ ಸಂಖ್ಯೆ ಮೇಲ್ನೋಟಕ್ಕೆ, ಇಷ್ಟಕ್ಕೆ ಅಷ್ಟೆಲ್ಲಾ ಮಾಡಿದರಾ ಅನಿಸುವಂತಿದೆ. ಆದರೆ 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸರಾಸರಿ 320 ರುಪಾಯಿವರೆಗಿನ ಉಳಿತಾಯ ಬಹಳ ಅಂದರೆ ಬಹಳ ದೊಡ್ಡ ಮೊತ್ತ.

      ಗ್ರಾಹಕರ ಖರ್ಚಿನ ದತ್ತಾಂಶವನ್ನು ವಿಶ್ಲೇಷಣೆ ಮಾಡಿದ ನಂತರ ಈ ಅಂಶ ಬಹಿರಂಗವಾಗಿದೆ. 17 ವಿವಿಧ ಕೇಂದ್ರ ಹಾಗೂ ರಾಜ್ಯ ತೆರಿಗೆಗಳು, ಅಬಕಾರಿ ಸುಂಕ ಹಾಗೂ ಮಾರಾಟ ತೆರಿಗೆ ಅಥವಾ ವ್ಯಾಟ್ ಇವೆಲ್ಲವನ್ನೂ ಒಗ್ಗೂಡಿಸಿ ಏಕರೂಪ ತೆರಿಗೆ ಜಿಎಸ್ ಟಿಯನ್ನು ಜುಲೈ 1,2017ರಲ್ಲಿ ಜಾರಿಗೆ ತರಲಾಯಿತು.

      ಜಿಎಸ್ ಟಿಯಿಂದ ಏಕ ರೂಪ ತೆರಿಗೆಯೊಂದೇ ಜಾರಿಗೆ ಬಂದಿದ್ದು ಮಾತ್ರವಲ್ಲ, ಇದರ ಜತೆಗೆ ತೆರಿಗೆ ಮೇಲೆ ತೆರಿಗೆ ಅಂದರೆ ಡಬಲ್ ಟ್ಯಾಕ್ಸ್ ತಡೆಯಲು ಸಾಧ್ಯವಾಗಿದೆ. ಇನ್ನು ಜಿಎಸ್ ಟಿ ಜಾರಿಗೆ ಬಂದ ಮೇಲೆ ದಿನ ಬಳಕೆ ವಸ್ತು ಹಾಗೂ ಸೇವೆಗಳು ಸ್ವಲ್ಪ ಮಟ್ಟಿಗೆ ಅಗ್ಗವಾಗಿ, ಗ್ರಾಹಕರಿಗೆ ತಿಂಗಳು ತಿಂಗಳು ಉಳಿತಾಯಕ್ಕೆ ಅನುಕೂಲವಾಗಿದೆ ಎನ್ನುತ್ತವೆ ಮೂಲಗಳು.

      83 ಗೃಹಬಳಕೆ ವಸ್ತುಗಳ ಬೆಲೆಯಲ್ಲಿ ಇಳಿಕೆ

      83 ಗೃಹಬಳಕೆ ವಸ್ತುಗಳ ಬೆಲೆಯಲ್ಲಿ ಇಳಿಕೆ

      ಗೃಹ ಬಳಕೆ ವಸ್ತುಗಳ ಖರ್ಚನ್ನು ಜಿಎಸ್ ಟಿ ಜಾರಿಗೆ ಮುಂಚೆ ಹಾಗೂ ನಂತರ ಎಂದು ವಿಂಗಡಣೆ ಮಾಡಿ ಒಂದು ವಿಶ್ಲೇಷಣೆ ಮಾಡಲಾಗಿದೆ. ಅದರ ಪ್ರಕಾರ, ಜಿಎಸ್ ಟಿ ಜಾರಿಯಾದ ನಂತರ 83ರಷ್ಟು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಅದರಲ್ಲಿ ಆಹಾರ ಹಾಗೂ ಪಾನೀಯಗಳೂ ಸೇರಿವೆ. ಇನ್ನು ದಿನಬಳಕೆಯ ಕೇಶತೈಲ, ಟೂಥ್ ಪೇಸ್ಟ್, ಸಾಬೂನು, ವಾಷಿಂಗ್ ಪೌಡರ್ ಮತ್ತು ಪಾದರಕ್ಷೆ ಕೂಡ ಒಳಗೊಂಡಿವೆ.

      8,400 ತಿಂಗಳ ಖರ್ಚು, 320 ರುಪಾಯಿ ಸರಾಸರಿ ಉಳಿತಾಯ

      8,400 ತಿಂಗಳ ಖರ್ಚು, 320 ರುಪಾಯಿ ಸರಾಸರಿ ಉಳಿತಾಯ

      ಅಂದರೆ ಒಂದು ತಿಂಗಳಲ್ಲಿ ಈ ಎಲ್ಲ ವಸ್ತುಗಳಿಗೆ ಸೇರಿ ತಿಂಗಳ ಖರ್ಚು 8,400 ಬರುತ್ತದೆ. ಜಿಎಸ್ ಟಿ ಜಾರಿಯಾದ ಮೇಲೆ ಇವುಗಳ ಮೇಲೆ 510 ರುಪಾಯಿ ತೆರಿಗೆ ಬೀಳುತ್ತದೆ. ಜಿಎಸ್ ಟಿ ಜಾರಿಗೂ ಮುನ್ನ ಇವುಗಳ ಮೇಲೆ 830 ರುಪಾಯಿ ತೆರಿಗೆ ಬೀಳುತ್ತಿತ್ತು. ಅಂದರೆ ಈ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ 320 ರುಪಾಯಿಯು ಸರಾಸರಿ ಖರ್ಚು 8,400 ರುಪಾಯಿ ಮೇಲೆ ಉಳಿತಾಯ ಆಗುತ್ತದೆ.

      ಕೇಂದ್ರದ ಅಬಕಾರಿ ಸುಂಕ, ರಾಜ್ಯದಿಂದ ವ್ಯಾಟ್

      ಕೇಂದ್ರದ ಅಬಕಾರಿ ಸುಂಕ, ರಾಜ್ಯದಿಂದ ವ್ಯಾಟ್

      ಜಿಎಸ್ ಟಿ ಜಾರಿಗೂ ಮೊದಲು ಕೇಂದ್ರ ಸರಕಾರವು ಕಾರ್ಖಾನೆಯಲ್ಲಿ ಉತ್ಪಾದನೆ ಆಗುವ ಉತ್ಪನ್ನಕ್ಕೆ ಅಬಕಾರಿ ಸುಂಕ ಹಾಕುತ್ತಿತ್ತು. ಅದಕ್ಕೇ ರಾಜ್ಯ ಸರಕಾರ ವ್ಯಾಟ್ (ವ್ಯಾಲ್ಯೂ ಆಡೆಡ್ ಟ್ಯಾಕ್ಸ್) ವಿಧಿಸುತ್ತಿತ್ತು. ಗ್ರಾಹಕರು ಉತ್ಪನ್ನದ ಮೂಲ ಬೆಲೆಯ ಮೇಲೆ ವ್ಯಾಟ್ ಮಾತ್ರ ಅಲ್ಲದೆ ಕೇಂದ್ರ ಸರಕಾರದ ಅಬಕಾರಿ ಸುಂಕವನ್ನು ಕೂಡ ಪಾವತಿ ಮಾಡಲೇಬೇಕಿತ್ತು.

      ಉತ್ಪನ್ನಕ್ಕೆ ಗ್ರಾಹಕರು ಖರೀದಿಸುವ ಅಂತಿಮ ಮೊತ್ತದ ಮೇಲೆ ತೆರಿಗೆ

      ಉತ್ಪನ್ನಕ್ಕೆ ಗ್ರಾಹಕರು ಖರೀದಿಸುವ ಅಂತಿಮ ಮೊತ್ತದ ಮೇಲೆ ತೆರಿಗೆ

      ಆದರೆ, ಯಾವಾಗ ಪರೋಕ್ಷ ತೆರಿಗೆಯಲ್ಲಿ ಹೊಸ ಪದ್ಧತಿ ಪರಿಚಯಿಸಲಾಯಿತೋ ಆಗಿನಿಂದ ಬದಲಾವಣೆ ಕಾಣಿಸಿಕೊಂಡಿತು. ಈ ಹಿಂದಿನ ಪದ್ಧತಿಯನ್ನು ತೆಗೆಯಲಾಯಿತು. ಜಿಎಸ್ ಟಿಯನ್ನು ಗ್ರಾಹಕರು ಅಂತಿಮವಾಗಿ ಖರೀದಿಸುವ ಸರಕು ಅಥವಾ ಸೇವೆಯ ಮೇಲೆ ವಿಧಿಸಲು ಆರಂಭವಾಯಿತು. ಇದರಿಂದ ತೆರಿಗೆ ವಿಧಿಸುವ ಪ್ರಮಾಣದಲ್ಲಿ ಇಳಿಕೆ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+