ನೋಕಿಯಾ 3,5 ಹಾಗೂ 6 ಮಾರಾಟ ಯಾವಾಗ?

Posted By:
Subscribe to Oneindia Kannada

ಬೆಂಗಳೂರು, ಜೂನ್ 13: ಭಾರತೀಯರ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ನೋಕಿಯಾ ತನ್ನ ಆಂಡ್ರಾಯ್ಡ್ ಫೋನ್ ಗಳನ್ನು ಜೂನ್ 13ರಂದು ಪರಿಚಯಿಸಿದೆ. ಆದರೆ, ಎಚ್ಎಂಡಿ ಸಂಸ್ಥೆ ಹೊರ ತಂದಿರುವ ನೋಕಿಯಾ ಬ್ರ್ಯಾಂಡ್ ಫೋನ್ ಗಳು ಯಾವಾಗ ಗ್ರಾಹಕರ ಕೈ ಸೇರಲಿದೆ? ಅಧಿಕೃತವಾಗಿ ಬೆಲೆ ಎಷ್ಟು ವಿವರಗಳು ಇಲ್ಲಿವೆ..

ನೋಕಿಯಾ ಬ್ರ್ಯಾಂಡ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು(ನೋಕಿಯಾ 3,5 ಹಾಗೂ 6) ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಗ್ರಾಹಕರು ಈ ಬಗ್ಗೆ ವಿವರಕ್ಕಾಗಿ ತಡಕಾಡಿದ್ದಾರೆ. ಎಚ್ಎಂಡಿಯಿಂದ ಲಭ್ಯವಾಗಿರುವ ಮಾಹಿತಿ ಹೀಗಿದೆ, ಚೀನಾ ಮಾರುಕಟ್ಟೆಯ ನೋಕಿಯಾ ಸ್ಮಾರ್ಟ್ ಫೋನ್ ಗಿಂತ ಭಾರತದಲ್ಲಿ ಬೆಲೆ ಕಡಿಮೆಯಾಗಿದೆ:

* ಎಲ್ಲಾ ನೋಕಿಯಾ ಫೋನ್ ಗಳು ಆಂಡ್ರಾಯ್ಡ್ ಹೊಸ ಆಪರೇಟಿಂಗ್ ಸಿಸ್ಟಮ್ (O) ಗೆ ಅಪ್ ಗ್ರೇಡ್ ಆಗಲಿವೆ.
* ಎಲ್ಲಾ ಸ್ಮಾರ್ಟ್ ಫೋನ್ ಗಳು ಮೇಕ್ ಇನ್ ಇಂಡಿಯಾಕ್ಕೆ ಬದ್ಧವಾಗಿದ್ದು, ಭಾರತದಲ್ಲೇ ವಿನ್ಯಾಸಗೊಂಡಿವೆ.
* ನೋಕಿಯಾ 3 ಹಾಗೂ 5 ಮಳಿಗೆಗಳಲ್ಲಿ ಲಭ್ಯವಾಗಲಿದ್ದು, ನೋಕಿಯಾ 6 ಅಮೆಜಾನ್ ಇಂಡಿಯಾದಿಂದ ಆನ್ ಲೈನ್ ಮೂಲಕ ಮಾರಾಟವಾಗಲಿದೆ.

ನೋಕಿಯಾ-3 ಫೋನ್

ನೋಕಿಯಾ-3 ಫೋನ್

* ನೋಕಿಯಾ-3 ಫೋನ್ ನ ಬೆಲೆ 9,990 ರೂ., ಪ್ರೀ ಬುಕ್ಕಿಂಗ್ ಜೂನ್ 16ರಿಂದ ಆಫ್ ಲೈನಲ್ಲೂ ಲಭ್ಯ.
* ಮೂರು ಫೋನ್ ಗಳ ಪೈಕಿ ಇದು ಎಂಟ್ರಿ ಲೆವಲ್ ಸ್ಮಾರ್ಟ್ ಫೋನ್.
* 5 ಇಂಚಿನ 720ಪಿ ಎಚ್ ಡಿ ಎಲ್ ಸಿಡಿ ಡಿಸ್ಪ್ಲೇ
* ಕ್ವಾಡ್ ಕೋರ್ ಮಿಡಿಯಾ ಟೆಕ್ ಪ್ರೊಸೆಸರ್. ನೋಕಿಯಾ 5ರಷ್ಟೇ RAM.
* 8 ಎಂಪಿ ಎರಡು ಬದಿ ಕೆಮರಾ., ಆಂಡ್ರಾಯ್ ನೌಗತ್ ಒಟಿಜಿ ಸಪೋರ್ಟ್, 4ಜಿ
* 2650ಎಂಎಎಚ್ ಬ್ಯಾಟರಿ, ಪಾಲಿ ಕಾರ್ಬನೆಟ್, ಮೆಟಲ್ ಫ್ರೇಮ್ ಹೊದಿಕೆ.

ನೋಕಿಯಾ 5

ನೋಕಿಯಾ 5

* ನೋಕಿಯಾ-5 ಬೆಲೆ ಸರಿಸುಮಾರು 12,899 ರೂ. ಪ್ರೀ ಬುಕ್ಕಿಂಗ್ ಜುಲೈ 7ರಿಂದ ಆಫ್ ಲೈನಲ್ಲೂ ಲಭ್ಯ.

* 13ಎಂಪಿ ಕೆಮೆರಾ, 8 ಎಂಪಿ ಕೆಮರಾ, Li Ion 3000ಎಂಎಎಚ್ ಬ್ಯಾಟರಿ.
* ಡುಯಲ್ ಸಿಮ್/ನ್ಯಾನೊ ಸಿಮ್, 4ಜಿ, ಒಟಿಜಿ, ಗೊರಿಲ್ಲಾ ಗ್ಲಾಸ್,
* 5.2 ಇಂಚ್ ಡಿಸ್ ಪ್ಲೇ, ಆಂಡ್ರಾಯ್ದ್ 7.1.1
* ಆಕ್ಟಾ ಕೋರ್ ಪ್ರೊಸೆಸರ್, 2 ಜಿಬಿ RAM, 16 ಜಿಬಿ ಮೆಮೋರಿ

ನೋಕಿಯಾ 6 ಫೋನ್

ನೋಕಿಯಾ 6 ಫೋನ್

* ನೋಕಿಯಾ 6 ಫೋನ್ ಬೆಲೆ 14,999 ರೂಪಾಯಿ,
* ಮಾರಾಟ ದಿನಾಂಕ ನಿಗದಿಯಾಗಿಲ್ಲ. ಜುಲೈ 14ರಿಂದ ಆರಂಭ(ನೋಂದಣಿ ಅಗತ್ಯ)
* 16ಎಂಪಿ ಕೆಮೆರಾ, 8 ಎಂಪಿ ಕೆಮರಾ, Li Ion 3000ಎಂಎಎಚ್ ಬ್ಯಾಟರಿ.
* ಡುಯಲ್ ಸಿಮ್/ನ್ಯಾನೊ ಸಿಮ್, 4ಜಿ, ಒಟಿಜಿ, ಗೊರಿಲ್ಲಾ ಗ್ಲಾಸ್,
* 5.5 ಇಂಚ್ ಡಿಸ್ ಪ್ಲೇ, ಆಂಡ್ರಾಯ್ಡ್ 7.1.1
* ಆಕ್ಟಾ ಕೋರ್ ಪ್ರೊಸೆಸರ್, 3/4 ಜಿಬಿ RAM, 32/64 ಜಿಬಿ ಮೆಮೋರಿ

ಪ್ರೀ ಬುಕ್ಕಿಂಗ್ ಆಯ್ದ ನಗರಗಳು

ಪ್ರೀ ಬುಕ್ಕಿಂಗ್ ಆಯ್ದ ನಗರಗಳು

ಪ್ರೀ ಬುಕ್ಕಿಂಗ್ ಆಯ್ದ ನಗರಗಳು: ದೆಹಲಿ ಎನ್ ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಚಂಡೀಗಢ, ಜೈಪುರ, ಕೋಲ್ಕತ್ತಾ, ಲಕ್ನೋ, ಇಂದೋರ್, ಹೈದ್ರಾಬಾದ್, ಪುಣೆ, ಅಹಮದಾಬಾದ್ ಹಾಗೂ ಕ್ಯಾಲಿಕಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
HMD Global has announced that all Nokia phones sold in India will be manufactured domestically. Notably, the company is selling Nokia 3 and Nokia 5 offline, while the Nokia 6 will be sold exclusively via Amazon India.
Please Wait while comments are loading...